ಗದಗ: ಕೊರೊನಾ ವೈರಸ್ ತನ್ನ ಕಬಂಧಬಾಹುಗಳನ್ನು ಚಾಚಿ ಅಟ್ಟಹಾಸ ಮೆರೆಯುತ್ತಿದೆ. ಸಿಕ್ಕ ಸಿಕ್ಕವರ ದೇಹ ಸೇರಿ ಜೀವ ಹಿಂಡುತ್ತಿದೆ. ಈಗ ಗದಗ ಜಿಲ್ಲೆಯ ಕೊರೊನಾ ಸೇನಾನಿಗೂ ಸೋಂಕು ತಗುಲಿರುವುದು ದೃಢವಾಗಿದೆ.
ಗದಗ ಜಿಮ್ಸ್ ನಿರ್ದೇಶಕರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಹೀಗಾಗಿ ಡಿಸಿ, ಸಿಇಒ, ಎಸ್ಪಿ ಸೇರಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಭಯ ಶುರುವಾಗಿದೆ. ಯಾಕಂದ್ರೆ ಜಿಮ್ಸ್ ನಿರ್ದೇಶಕರು ನಿತ್ಯ ಜಿಲ್ಲಾಡಳಿತ ಭವನದಲ್ಲಿ ನಡೆಯುವ ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿಯಾಗುತ್ತಿದ್ದರು. ಹಾಗೂ ವೈದ್ಯರು, ಸಿಬ್ಬಂದಿಗಳಿಗೆ ಧೈರ್ಯ ಹೇಳುತ್ತಿದ್ದರು.
ಕಳೆದ 5 ತಿಂಗಳಿಂದ ಇಡೀ ಕುಟುಂಬ ದೂರವಿಟ್ಟು ಕೊರೊನಾ ಸೇವೆಯಲ್ಲಿ ತೊಡಗಿದ್ದ ನಿರ್ದೇಶಕ ಕೋವಿಡ್ ಆಸ್ಪತ್ರೆ ಸಂಪೂರ್ಣ ಜವಾಬ್ದಾರಿ ಹೊತ್ತು ಶ್ರಮಿಸುತ್ತಿದ್ದರು. ಈಗ ಅವರ ಕೊರೊನಾ ವರದಿ ಪಾಸಿಟಿವ್ ಬಂದಿದ್ದು, ಜಿಮ್ಸ್ ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಆತಂಕ ಶುರುವಾಗಿದೆ.