2 ದಿನಗಳಲ್ಲಿ 5 ಸಾವಿರ ಬೆಡ್​ಗಳ ಸ್ಪೆಪ್​ಡೌನ್ ಆಸ್ಪತ್ರೆ ನಿರ್ಮಾಣ; ಬಸವರಾಜ ಬೊಮ್ಮಾಯಿ

Step Down Hospital in Bengaluru:1135 ಆಕ್ಷಿಜನ್ ಬೆಡ್ ನೀಡಲು ಮೆಡಿಕಲ್ ಕಾಲೇಜುಗಳಿಗೆ ಆದೇಶಿಸಿದ್ದೇವೆ. ಆಕ್ಸಿಜನ್ ಬೆಡ್‌ಗಳ ಶೇ 75ರಷ್ಟು ಖರ್ಚನ್ನು ಸರ್ಕಾರ ಭರಿಸಲಿದೆ; ಸಚಿವ

2 ದಿನಗಳಲ್ಲಿ 5 ಸಾವಿರ ಬೆಡ್​ಗಳ ಸ್ಪೆಪ್​ಡೌನ್ ಆಸ್ಪತ್ರೆ ನಿರ್ಮಾಣ; ಬಸವರಾಜ ಬೊಮ್ಮಾಯಿ
ಗೃಹ ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು:  ಖಾಸಗಿ ಹೋಟೆಲ್, ಇನ್ನಿತರ ಕಟ್ಟಡಗಳನ್ನು ಬಳಸಿ 2 ದಿನಗಳಲ್ಲಿ 5 ಸಾವಿರ ಬೆಡ್‌ಗಳ ಸ್ಟೆಪ್‌ಡೌನ್ ಆಸ್ಪತ್ರೆಯ ವ್ಯವಸ್ಥೆಯನ್ನುನಿರ್ಮಿಸಲಾಗುತ್ತದೆ ಎಂದು ವಿಧಾನಸೌಧದಲ್ಲಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೆಡಿಕಲ್ ಕಾಲೇಜುಗಳ ಜೊತೆ ಇಂದು ಸಮಗ್ರವಾಗಿ ಚರ್ಚೆ ನಡೆಸಲಾಗಿದೆ. 1135 ಆಕ್ಷಿಜನ್ ಬೆಡ್ ನೀಡಲು ಮೆಡಿಕಲ್ ಕಾಲೇಜುಗಳಿಗೆ ಆದೇಶಿಸಿದ್ದೇವೆ. ಆಕ್ಸಿಜನ್ ಬೆಡ್‌ಗಳ ಶೇ 75ರಷ್ಟು ಖರ್ಚನ್ನು ಸರ್ಕಾರ ಭರಿಸಲಿದೆ. ಜತೆಗೆ ಸ್ಟೆಪ್​ಡೌನ್ ಆಸ್ಪತ್ರೆಗಳನ್ನು ಸ್ಥಾಪಿಸಲು ನಿರ್ಧಾರ ಮಾಡಿದ್ದೇವೆ. 5,000 ಸಾವಿರ ಬೆಡ್​ಗಳನ್ನು ಸ್ಟೆಪ್​ಡೌನ್ ಆಸ್ಪತ್ರೆಗಳ ಮೂಲಕ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಸತಿ ನಿಲಯಗಳು, ಹಾಲ್​ಗಳಲ್ಲೂ ಬೆಡ್ ವ್ಯವಸ್ಥೆಯನ್ನು ನಿರ್ಮಿಸುತ್ತೇವೆ ಎಂದು ಅವರು ತಿಳಿಸಿದರು.

ಸೋಂಕು ಹೀಗೆ ಮುಂದುವರಿದ್ರೆ ಲಾಕ್‌ಡೌನ್ ಅನಿವಾರ್ಯ
ಜನರ ಭಯಪಡುತ್ತಿಲ್ಲ, ಏನೂ ಆಗುವುದಿಲ್ಲ ಎಂದು ಓಡಾಡುತ್ತಿದ್ದಾರೆ. ಅಲ್ಲದೇ ಮಾಸ್ಕ್ ಹಾಕದೇ ಓಡಾಡುತ್ತಿದ್ದಾರೆ.  ಜನರು ಎಚ್ಚೆತ್ತುಕೊಳ್ಳಬೇಕು. ಕಳೆದ ವರ್ಷಕ್ಕೆ ಹೋಲಿಸಿದರೆ ಕೊವಿಡ್ ಸೋಂಕು ಹೆಚ್ಚಾಗಿದೆ. ನಮಗೆ ಜನರ ಸಹಕಾರ ಬೇಕು ಎಂದು ಕೊಪ್ಪಳದಲ್ಲಿ ಕೃಷಿ ಖಾತೆ ಸಚಿವ ಬಿ‌.ಸಿ.ಪಾಟೀಲ್ ಹೇಳಿದರು.

ನಾನು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ನಮ್ಮಲ್ಲಿ ಯಾವುದೇ ಆಕ್ಸಿಜನ್ ಸಮಸ್ಯೆ ಇಲ್ಲ. ಸೋಂಕಿತರನ್ನ ಕೇಳಿದ್ದೇವೆ,ಯಾರೂ ತೊಂದರೆ ಇಲ್ಲ ಅಂದರು. ಜಿಲ್ಲಾ ಆಸ್ಪತ್ರೆಯಲ್ಲಿ 106 ಜನರಿಗೆ ಚಿಕಿತ್ಸೆ ನೀಡಲಾಗ್ತಿದೆ. ಜಿಲ್ಲೆಯಲ್ಲಿ ಸಾವಿನ ಹೆಚ್ಚಿನ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಕೊರೊನಾ ಸೋಂಕಿನ ನಡುವೆ ನಕಲಿ ವೈದ್ಯರ ಹಾವಳಿ; ಸಾರ್ವಜನಿಕರೇ ಎಚ್ಚರ

ಸರ್ಕಾರವೇ ಎಲ್ಲವನ್ನೂ ಮಾಡಲು ಆಗದು. ಜನ ಜಾಗೃತರಾಗಿ ಕೊರೊನಾ ನಿಯಮ ಪಾಲಿಸಬೇಕು: ಸಚಿವ ಜಗದೀಶ್ ಶೆಟ್ಟರ್

(Home Minister Basavaraj Bommai says will arrange 5 thousand beds Step Down Hospital in two days in Bengaluru)