ಅಪಘಾತದಲ್ಲಿ ಮೃತಪಟ್ಟ ಮರಿ ಕುದುರೆಗಾಗಿ ಹಂಬಲಿಸಿದ ತಾಯಿ ಕುದುರೆ; ಸಂಜೆವರೆಗೂ ರಸ್ತೆಯಲ್ಲೇ ನಿಂತ ದೃಶ್ಯ ಮೊಬೈಲ್​ನಲ್ಲಿ ಸೆರೆ

ಜೂನ್ 22 ರಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ನಡೆದ ಅಪಘಾತದಲ್ಲಿ ಕುದುರೆ ಮರಿ ಸಾವನ್ನಪ್ಪಿದ್ದರೂ, ಮೃತ ಪಟ್ಟ ಕುದುರೆ ಮರಿಗಾಗಿ ತಾಯಿ ಕುದುರೆ ಸಾಯಂಕಾಲದವರೆಗೂ ಘಟನಾ ಸ್ಥಳದಲ್ಲಿಯೇ ನಿಂತಿದ್ದು, ಎಂಥವರನ್ನೂ ಭಾವಪರವಶರನ್ನಾಗಿ ಮಾಡಿದೆ.

ಅಪಘಾತದಲ್ಲಿ ಮೃತಪಟ್ಟ ಮರಿ ಕುದುರೆಗಾಗಿ ಹಂಬಲಿಸಿದ ತಾಯಿ ಕುದುರೆ; ಸಂಜೆವರೆಗೂ ರಸ್ತೆಯಲ್ಲೇ ನಿಂತ ದೃಶ್ಯ ಮೊಬೈಲ್​ನಲ್ಲಿ ಸೆರೆ
ಅಪಘಾತದಲ್ಲಿ ಮೃತಪಟ್ಟ ಮರಿ ಕುದುರೆಗಾಗಿ ಹಂಬಲಿಸಿದ ತಾಯಿ ಕುದುರೆ
Edited By:

Updated on: Jun 23, 2021 | 8:09 AM

ವಿಜಯಪುರ: ಪ್ರೀತಿ-ಪ್ರೇಮ, ನೋವು-ನಲಿವು, ಸಂತೋಷ-ದುಖಃ ಈ ಎಲ್ಲಾ ಭಾವನೆಗಳು ಕೇವಲ ಮನುಷ್ಯರಿಗೆ ಅಷ್ಟೇ ಸೀಮಿತ ಅಲ್ಲ. ಇದು ಪ್ರಾಣಿಗಳಲ್ಲೂ ಕೂಡ ಇದೆ ಎನ್ನುವುದಕ್ಕೆ ವಿಜಯಪುರದ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಾಗಿದೆ. ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾದ ಕಾರಣ ಕುದುರೆ ಮರಿಯೊಂದು ಅಸುನೀಗಿತ್ತು. ಮರಿ ಕುದುರೆ ಸಾವನ್ನಪ್ಪಿದ್ದನ್ನು ಕಂಡ ತಾಯಿ ಕುದುರೆ ತನ್ನ ಮರಿಗಾಗಿ ಹಂಬಿಲಸುತ್ತಾ ರಸ್ತೆಯಲ್ಲಿ ನಿಂತ ದೃಶ್ಯ ಮನಕಲಕುವಂತಿತ್ತು.

ಜೂನ್ 22 ರಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ನಡೆದ ಅಪಘಾತದಲ್ಲಿ ಕುದುರೆ ಮರಿ ಸಾವನ್ನಪ್ಪಿದ್ದರೂ ಮೃತ ಪಟ್ಟ ಕುದುರೆ ಮರಿಗಾಗಿ ತಾಯಿ ಕುದುರೆ ಸಾಯಂಕಾಲದವರೆಗೂ ಘಟನಾ ಸ್ಥಳದಲ್ಲಿಯೇ ನಿಂತಿದ್ದು, ಎಂಥವರನ್ನೂ ಭಾವಪರವಶರನ್ನಾಗಿ ಮಾಡಿದೆ. ಕುದುರೆ ಮರಿ ಸಾವನ್ನಪ್ಪಿದ ಸ್ಥಳದಿಂದ ಕದಲದ ತಾಯಿ ಕುದುರೆ ಅದೇ ಸ್ಥಳದಲ್ಲಿ ನಿಂತಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಬೆಳಗ್ಗೆ ಮರಿ ಕುದುರೆ ಸಾವನ್ನಪ್ಪೀದ್ದ ಸ್ಥಳದ ಮಾರ್ಗವಾಗಿಯೇ ಹೊರಟಿದ್ದ ಖಾಸಗಿ ಶಾಲೆಯ ಶಿಕ್ಷಕ ಜಗದೀಶ ಸಾಲಳ್ಳಿ ಎಂಬುವವರು ಸ್ಥಳೀಯರ ಸಹಾಯದಿಂದ ಮೃತ ಕುದುರೆ ಮರಿಯನ್ನು ರಸ್ತೆ ಬದಿಗೆ ಸರಿಸಿದ್ದರು. ನಂತರ ಅವರು ವಾಪಸ್ ಸಂಜೆ ವೇಳೆ ಅದೇ ದಾರಿಯಲ್ಲಿ ವಾಪಸ್ ಬರುವಾಗಲೂ ಮೃತಪಟ್ಟ ಮರಿಯ ಮುಂದೆಯೇ ತಾಯಿ ಕುದುರೆ ನಿಂತಿರುವುದನ್ನು ಕಂಡಿದ್ದಾರೆ. ಹೀಗಾಗಿ ಶಿಕ್ಷಕ ಜಗದೀಶ ಇವೆಲ್ಲ ದೃಶ್ಯಗಳನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ನಾಗರಿಕ ಸಮಾಜದಲ್ಲಿ ಮಾನವೀಯತೆ ಕಡಿಮೆ ಆಗುತ್ತಿರುವ ಇಂತಹ ಸಂದರ್ಭದಲ್ಲಿ ಮೂಕ ಪ್ರಾಣಿಯ ಕುರುಳಿನ ಕೂಗು ಮಾತ್ರ ಹೃದಯಸ್ಪರ್ಶಿಯಾಗಿದೆ. ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮರಿಗಳಿಗಾಗಿ ಪ್ರಾಣಿಗಳು ಹಂಬಿಸಿದ ಘಟನೆ ಇದೇ ಮೊದಲಲ್ಲ. ಈ ಹಿಂದೆ ಕೂಡ ಮೃತಪಟ್ಟ ಮರಿಗಾಗಿ ಹಸುವೊಂದು ಬಸ್​ಗೆ ಅಡ್ಡಲಾಗಿ ನಿಂತ ಸನ್ನಿವೇಶವನ್ನು ನಾವು ಓದಿದ್ದೇವೆ. ಒಟ್ಟಾರೆ ವಾಹನ ದಟ್ಟನೆಯ ಕಾರಣ ಹೀಗೆ ಮೂಕ ಪ್ರಾಣಿಗಳು ಬಲಿಯಾಗುತ್ತಿರುವುದು ವಿಪರ್ಯಾಸ.

ಇದನ್ನೂ ಓದಿ:

ಅನಾಥ ನಾಯಿಗಳಿಗೆ ಮುಕ್ತಿ: ಮೆಚ್ಚುಗೆಗೆ ಪಾತ್ರವಾಗಿದೆ ಮೈಸೂರು ಶ್ವಾನ ಪ್ರಿಯನ ಅನುಕಂಪಮರಿಗಾಗಿ

ಬಳ್ಳಾರಿಯಿಂದ ಕೆನಡಾಕ್ಕೆ ಹೊರಟ ಬೀದಿ ನಾಯಿ! ನಾಯಿಮರಿಯನ್ನು ದತ್ತು ಪಡೆದ ಕೆನಡಾದ ಮಹಿಳೆ