ದಾವಣಗೆರೆ: ಮಗುವನ್ನು ಅದಲು ಬದಲು ಮಾಡಿರುವ ಆರೋಪ ದಾವಣಗೆರೆ ಜಿಲ್ಲಾಸ್ಪತ್ರೆಯ ಸಿಬ್ಬಂದಿ ವಿರುದ್ಧ ಕೇಳಿಬಂದಿದ್ದು, ಈ ಸಂಬಂಧ ಸಿಬ್ಬಂದಿ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡ್ಲಿ ತಾಲೂಕಿನ ಮಾರಮ್ಮ ಎಂಬುವವರಿಗೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಮೊದಲು ಒಂದು ಗಂಟೆ ಗಂಡು ಮಗು ಎಂದು ಹೇಳಿ, ನಂತರ ಹೆಣ್ಣು ಮಗುವನ್ನು ಕೈಗೆ ಕೊಟ್ಟ ಹೆರಿಗೆ ವಾರ್ಡ್ ಸಿಬ್ಬಂದಿ ಜೊತೆ ಮಾರಮ್ಮ ಸಂಬಂಧಿಕರು ವಾಗ್ವಾದ ನಡೆಸಿದ್ದಾರೆ. ವಿಚಾರ ತಿಳಿದ ಆಸ್ಪತ್ರೆಯ ಹಿರಿಯ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದಾರೆ.
108 ಌಂಬುಲೆನ್ಸ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಉಳಿಯಿತು ತಾಯಿ-ಮಗು ಜೀವ, ಎಲ್ಲಿ?