AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಕೇಸಿನಲ್ಲಿ ದೋಷಿಯಾಗಿರುವ ಪ್ರಜ್ವಲ್ ವಿರುದ್ಧ ಇನ್ನೆಷ್ಟು ಅತ್ಯಾಚಾರ ಪ್ರಕರಣಗಳಿವೆ? ಅವು ಯಾವ್ಯಾವ ಹಂತದಲ್ಲಿವೆ? ಇಲ್ಲಿದೆ ವಿವರ

ಕೆ.ಆರ್.ನಗರ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ದೋಷಿ ಎಂದು ಸಾಬೀತಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ನಾಳೆ (ಆಗಸ್ಟ್ 02) ಶಿಕ್ಷೆ ಪ್ರಮಾಣದ ಬಗ್ಗೆ ವಿಚಾರಣೆ ನಡೆಯಲಿದ್ದು, ಪ್ರಜ್ವಲ್ ಗೆ ಕನಿಷ್ಟ 10 ವರ್ಷ ಶಿಕ್ಷೆಯೋ ಅಥವಾ ಗರಿಷ್ಟ ಜೀವನ ಪರ್ಯಂತ ಸೆರೆವಾಸದ ಶಿಕ್ಷೆಯೋ ಎಂಬುದು ನಾಳೆ ತೀರ್ಮಾನವಾಗಲಿದೆ. ಇನ್ನು ಪ್ರಜ್ವಲ್ ರೇವಣ್ಣ ವಿರುದ್ಧ ಇನ್ನೆಷ್ಟು ಪ್ರಕರಣಗಳಿವೆ? ಅವು ಯಾವ್ಯಾವ ಹಂತದಲ್ಲಿವೆ ಎನ್ನುವ ವಿವರ ಇಲ್ಲಿದೆ.

ಒಂದು ಕೇಸಿನಲ್ಲಿ ದೋಷಿಯಾಗಿರುವ ಪ್ರಜ್ವಲ್ ವಿರುದ್ಧ ಇನ್ನೆಷ್ಟು ಅತ್ಯಾಚಾರ ಪ್ರಕರಣಗಳಿವೆ? ಅವು ಯಾವ್ಯಾವ ಹಂತದಲ್ಲಿವೆ? ಇಲ್ಲಿದೆ ವಿವರ
Prajwal Revanna
Ramesha M
| Updated By: ರಮೇಶ್ ಬಿ. ಜವಳಗೇರಾ|

Updated on: Aug 01, 2025 | 6:02 PM

Share

ಬೆಂಗಳೂರು, (ಆಗಸ್ಟ್ 01): ಕಳೆದ ಲೋಕಸಭಾ ಚುನಾವಣೆ (Loksabha Election) ವೇಳೆ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಸಂಬಂಧ ಹಾಸನದ(Hassan) ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಒಟ್ಟು ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು.  ಪೈಕಿ ಒಂದು ಕೇಸಿನ ತೀರ್ಪು ಇಂದು (ಆಗಸ್ಟ್ 01) ಪ್ರಕಟವಾಗಿದೆ. ಕೆ.ಆರ್ ನಗರದ ಮಹಿಳೆ ನೀಡಿದ್ದ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ನೀಡಿದೆ. ಇನ್ನು ಈ ಪ್ರಕರಣದಲ್ಲಿ ಎಷ್ಟು ಪ್ರಮಾಣದ ಶಿಕ್ಷೆಯಾಗಲಿದೆ ಎನ್ನುವುದನ್ನು ನಾಳೆ (ಆಗಸ್ಟ್ 02) ಕೋರ್ಟ್ ತಿಳಿಯಲಿದೆ. ಈ ಪ್ರಕರಣ ಮಾತ್ರವಲ್ಲದೇ ಇನ್ನೂ ಪ್ರಜ್ವಲ್ ವಿರುದ್ಧ ಮೂರು ಅತ್ಯಾಚಾರ ಪ್ರಕರಣಗಳಿವೆ. ಹೊಳೆನರಸೀಪುರ, ಹಾಸನ ಅತ್ಯಾಚಾರ ಪ್ರಕರಣ ಹಾಗೂ ಐಟಿ ಆ್ಯಕ್ಟ್​ ಕೇಸ್ ಬಾಕಿ ಇವೆ.

ಇನ್ನೂ ಇದೆ 3 ಕೇಸ್‌

ಪ್ರಜ್ವಲ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರವೆಸಗಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿರುವ ಆರೋಪ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳು ಇನ್ನೂ ವಿಚಾರಣಾ ಹಂತದಲ್ಲಿ ಇವೆ. ಇವುಗಳ ತೀರ್ಪು ಇನ್ನಷ್ಟೇ ಹೊರಬೀಳಬೇಕಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ದೋಷಿ: ಎಷ್ಟು ವರ್ಷ ಜೈಲು ಶಿಕ್ಷೆ? ಮಾಜಿ ಸಂಸದನ ಮುಂದಿನ ನಡೆ ಏನು?

2024ರ ಮೇ 31ರಂದು ಪ್ರಜ್ವಲ್‌ ರೇವಣ್ಣ ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಕಳೆದ 14 ತಿಂಗಳಿನಿಂದ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ. ನಾಲ್ಕು ಪ್ರಕರಣಗಳಲ್ಲಿ ಕೆ.ಆರ್, ನಗರ ಕೇಸಿನಲ್ಲಿ ಪ್ರಜ್ವಲ್ ದೋಷಿಯಾಗಿದ್ದು, ಇನ್ನುಳಿದಂತೆ ಹೊಳೆನರಸೀಪುರ, ಹಾಸನ ಅತ್ಯಾಚಾರ ಪ್ರಕರಣದ ಸಂಬಂಧ ಚಾರ್ಜ್​ ಶೀಟ್ ಸಲ್ಲಿಕೆಯಾಗಿದ್ದು, ವಿಚಾರಣೆ ಹಂತದಲ್ಲಿದೆ. ಇನ್ನು ವಿಡಿಯೋ ಕಾಲ್ ಮೂಲಕ ಕಿರುಕುಳ ನೀಡಿದ್ದ ಐಟಿ ಆ್ಯಕ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು,   ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​​ನಲ್ಲಿ ವಿಚಾರಣೆ ಹಂತದಲ್ಲಿವೆ.

ಇದನ್ನೂ ಓದಿ
Image
ಪ್ರಜ್ವಲ್ ರೇವಣ್ಣಗೆ ಎಷ್ಟು ವರ್ಷ ಜೈಲು ಶಿಕ್ಷೆ? ಮಾಜಿ ಸಂಸದನ ಮುಂದಿನ ನಡೆ?
Image
ಪ್ರಜ್ವಲ್ ರೇವಣ್ಣ ದೋಷಿ: ಈ ಪ್ರಕರಣದಲ್ಲಿ ಹೊಸ ದಾಖಲೆ ಬರೆದ ವಿಶೇಷ ಕೋರ್ಟ್​
Image
ಅತ್ಯಾಚಾರ ಪ್ರಕರಣದಲ್ಲಿ ದೋಷಿ: ಕಣ್ಣೀರು ಹಾಕುತ್ತಾ ನಿರ್ಗಮಿಸಿದ ಪ್ರಜ್ವಲ್
Image
ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ: ಬಿಗ್ ಶಾಕ್ ನೀಡಿದ ಕೋರ್ಟ್

2024ರ ಮೇ 31ರಂದು ಪ್ರಜ್ವಲ್‌ ರೇವಣ್ಣ ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು,  ಸುಪ್ರೀಂಕೋರ್ಟ್, ಹೈಕೋರ್ಟ್, ಕೆಳ ನ್ಯಾಯಾಲಯಗಳಲ್ಲಿ ಜಾಮೀನು ಅರ್ಜಿ ವಜಾಗೊಂಡಿವೆ. ಹೀಗಾಗಿ ಪ್ರಜ್ವಲ್ ಕಳೆದ 14 ತಿಂಗಳಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಈಗ ಒಂದು ಪ್ರಕರಣದಲ್ಲಿ ದೋಷಿಯಾಗಿರುವ ಪ್ರಜ್ವಲ್ ರೇವಣ್ಣ, ಇನ್ನುಳಿದಂತೆ ವಿಚಾರಣೆ ಹಂತದಲ್ಲಿರುವ ಮೂರು ಕೇಸಿನಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಯಾವ ತೀರ್ಪು ನೀಡಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ