ಬೆಂಗಳೂರು, ಆಗಸ್ಟ್ 8: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ರಾಜ್ಯದ ಎಲ್ಲ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದೆಂದು ಆರಂಭದಲ್ಲಿಯೇ ಸರ್ಕಾರ ಹೇಳಿತ್ತು. ಬೆಂಗಳೂರು ಹಾಗೂ ಇತರ ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೂ ಸರ್ಕಾರ ಯೋಜನೆಯ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿತ್ತು. ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಲ್ಲಿರುವ ಸಾವಿರಾರು ಗ್ರಾಹಕರು ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.
ಆದರೆ, ಬಾಡಿಗೆ ಮನೆಯನ್ನು ಬದಲಾಯಿಸಬೇಕಾಗಿ ಬಂದಾಗ ಏನು ಮಾಡುವುದು ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ಬಾಡಿಗೆ ಮನೆಯ ಆರ್ಆರ್ ಸಂಖ್ಯೆ ನೀಡಿ ಯೋಜನೆಯಡಿ ಶೂನ್ಯ ಬಿಲ್ ಪಡೆಯುತ್ತಿದ್ದವರಿಗೆ ಮನೆ ಬದಲಾಯಿಸಬೇಕಾಗಿ ಬಂದಾಗ ಸಮಸ್ಯೆ ಆಗುತ್ತಿತ್ತು. ಇದನ್ನು ಮನಗಂಡ ಸರ್ಕಾರ ಇದೀಗ ಹೊಸ ಆಯ್ಕೆಯನ್ನು ನೀಡಿದೆ.
ಮನೆ ಬದಲಾಯಿಸಿದವರಿಗೆ/ಬಾಡಿಗೆದಾರರಿಗೆ ಗೃಹ ಜ್ಯೋತಿ ಡಿ-ಲಿಂಕ್ ಸೌಲಭ್ಯ ಇದೀಗ ಲಭ್ಯ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.
SevaSindhu Guarantee Schemes Portal https://t.co/bsGvzlXleZ
or click on below link https://t.co/6H4KymdKwU #Bescom#GruhaJyothi#GruhaJyothischeme#Guaranteescheme… pic.twitter.com/UJasyBnB1s
— Namma BESCOM | ನಮ್ಮ ಬೆಸ್ಕಾಂ (@NammaBESCOM) August 8, 2024
ಬಾಡಿಗೆ ಮನೆ ಬದಲಾಯಿಸಿದವರಿಗೆ ಗೃಹ ಜ್ಯೋತಿ ಯೋಜನೆಯಡಿ ಪ್ರಯೋಜನ ಪಡೆದುಕೊಳ್ಳಲು ‘ನಮ್ಮ ಬೆಸ್ಕಾಂ’ ಡಿ-ಲಿಂಕ್ ಸೌಲಭ್ಯ ಕಲ್ಪಿಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿ ಮಾಹಿತಿ ನೀಡಿದೆ. ಮನೆ ಬದಲಾಯಿಸಿದವರಿಗೆ / ಬಾಡಿಗೆದಾರರಿಗೆ ಗೃಹ ಜ್ಯೋತಿ ಡಿ-ಲಿಂಕ್ ಸೌಲಭ್ಯ ಇದೀಗ ಲಭ್ಯ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಬೆಸ್ಕಾಂ ತಿಳಿಸಿದೆ.
ಸೇವಾಸಿಂಧು ಪೋರ್ಟಲ್ (https://sevasindhu.karnataka.gov.in/GruhaJyothi_Delink/GetAadhaarData.aspx) ಮೂಲಕ ಲಾಗಿನ್ ಆಗಿ ಹಳೆಯ ಮನೆಯ ಆರ್ಆರ್ ಸಂಖ್ಯೆಯನ್ನು ನಮೂದಿಸಿ ಆ ಖಾತೆಯನ್ನು ಡಿ-ಲಿಂಕ್ ಮಾಡಬೇಕು. ನಂತರ ಹೊಸ ಮನೆಯ ಆರ್ಆರ್ ಸಂಖ್ಯೆಯನ್ನು ನಮೂದಿಸಿ ಲಿಂಕ್ ಮಾಡಬೇಕು.
ಇದನ್ನೂ ಓದಿ: ಜನರ ಕೈಗೇ ಇನ್ಮುಂದೆ ರ‍್ಯಾಪಿಡ್ ಫುಡ್ ಟೆಸ್ಟಿಂಗ್ ಕಿಟ್; ಸಾರ್ವಜನಿಕರೇ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸಬಹುದು!
ಡಿ-ಲಿಂಕ್ ಹಾಗೂ ಲಿಂಕ್ ಮಾಡಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ಗೃಹ ಜ್ಯೋತಿಯೊಂದಿಗೆ ನೋಂದಾಯಿತ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಒಟಿಪಿ ಆಧಾರದಲ್ಲಿ ಲಾಗಿನ್ ಆಗಬೇಕು. ನಂತರ ಹಳೆಯ ಮನೆಯ ಆರ್ಆರ್ ಸಂಖ್ಯೆಯನ್ನು ನಮೂದಿಸಿ ಡಿ-ಲಿಂಕ್ ಮಾಡಬೇಕು. ಬಳಿಕ ಹೊಸ ಮನೆಯ ಆರ್ಆರ್ ಸಂಖ್ಯೆಯನ್ನು ನಮೂದಿಸಿ ಲಿಂಕ್ ಮಾಡಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ