ಹುಬ್ಬಳ್ಳಿ-ಬೆಂಗಳೂರು ಪ್ರಯಾಣಿಕರಿಗೆ ಸಿಹಿ ಸುದ್ದಿ: ಇನ್ಮುಂದೆ ಅರಸೀಕೆರೆಯಲ್ಲೂ ಎಕ್ಸಪ್ರೆಸ್​ ರೈಲನ್ನು ಹತ್ತಬಹುದು

ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ ಹುಬ್ಬಳ್ಳಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಬೆಂಗಳೂರಿಗೆ ಸಂಪರ್ಕಿಸುವ (ರೈಲು ಸಂಖ್ಯೆ 07339/07340 ಮತ್ತು 07353/07354) ರೈಲು ಇನ್ಮುಂದೆ ಅರಸಿಕೇರೆ ನಿಲ್ದಾಣದಲ್ಲೂ ನಿಲ್ಲುತ್ತದೆ.

ಹುಬ್ಬಳ್ಳಿ-ಬೆಂಗಳೂರು ಪ್ರಯಾಣಿಕರಿಗೆ ಸಿಹಿ ಸುದ್ದಿ: ಇನ್ಮುಂದೆ ಅರಸೀಕೆರೆಯಲ್ಲೂ ಎಕ್ಸಪ್ರೆಸ್​ ರೈಲನ್ನು ಹತ್ತಬಹುದು
ಅರಸೀಕರೆ ರೈಲು ನಿಲ್ದಾಣ
Follow us
ವಿವೇಕ ಬಿರಾದಾರ
|

Updated on:Mar 22, 2023 | 11:33 AM

ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ ಹುಬ್ಬಳ್ಳಿಯಿಂದ (Shri Siddharoodha Swamiji Railway Station Hubli) ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಬೆಂಗಳೂರಿಗೆ (Krantiveera Sangolli Rayanna Railway Station) ಸಂಪರ್ಕಿಸುವ (ರೈಲು ಸಂಖ್ಯೆ 07339/07340 ಮತ್ತು 07353/07354) ರೈಲು ಇನ್ಮುಂದೆ ಅರಸಿಕೇರೆ ನಿಲ್ದಾಣದಲ್ಲೂ ನಿಲ್ಲುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಪ್ರತಿದಿನ ಸಂಚರಿಸುವ ಎಸ್​ಎಸ್​ಎಸ್​ ಹುಬ್ಬಳ್ಳಿ (SSS Hubli)-ಕೆಎಸ್​ಆರ್​ ಬೆಂಗಳೂರು (KSR Hubli)-ಎಸ್​ಎಸ್​​ಎಸ್​ ಹುಬ್ಬಳ್ಳಿ ದೈನಂದಿನ ವಿಶೇಷ ಎಕ್ಸಪ್ರೆಸ್​ ರೈಲು (ರೈಲು ಸಂಖ್ಯೆ 07339/07340) ರೈಲನ್ನು ಇನ್ಮುಂದೆ ಎರಡು ಮಾರ್ಗದಲ್ಲೂ ಅರಸಿಕೇರೆ ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತದೆ.

ರೈಲು ಸಂಖ್ಯೆ 07339 ರೈಲು ಇಂದು (ಮಾ.22) ಬೆಳಿಗ್ಗೆ 3:33ಕ್ಕೆ ಅರಸಿಕೇರೆ ತಲುಪಿದ್ದು, 3:36 ಬೆಳಗ್ಗೆ ಅಲ್ಲಿಂದ ಹೊರಟಿದೆ. ಅದೇ ರೀತಿ, ಹಿಂದಿರುಗುವ ಸಮಯದಲ್ಲಿ, ರೈಲು ಸಂಖ್ಯೆ 07340 ಕೆಎಸ್‌ಆರ್ ರಾತ್ರಿ 02:07 ಕ್ಕೆ ಅರಸೀಕೆರೆಗೆ ಆಗಮಿಸಲಿದ್ದು, ಅಲ್ಲಿಂದ 02:10 ಕ್ಕೆ ಹೊರಡಲಿದೆ.

ಇದನ್ನೂ ಓದಿ: ಸಕ್ಕರೆ ಕಾಯಿಲೆ ವಿರುದ್ಧ ಜಾಗೃತಿ: 40 ದಿನಗಳಲ್ಲಿ ಕಾಶ್ಮೀರ-ಕನ್ಯಾಕುಮಾರಿ ಸೈಕಲ್​ ಯಾತ್ರೆ ಮಾಡಿದ ಧಾರವಾಡದ ವ್ಯಕ್ತಿ

ಮಾರ್ಚ್ 23, 2023 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 07353/07354 ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ಎರಡು ದಿಕ್ಕುಗಳಲ್ಲಿ ಯಶವಂತಪುರ, ತುಮಕೂರು ಮತ್ತು ಅರಸೀಕೆರೆ ನಿಲ್ದಾಣಗಳಲ್ಲಿ ಹೆಚ್ಚುವರಿ ನಿಲುಗಡೆಗಳನ್ನು ಹೊಂದಿರುತ್ತದೆ.

ಈ ರೈಲು (07353) ಯಶವಂತಪುರಕ್ಕೆ 07:39/07:41 ಕ್ಕೆ, ತುಮಕೂರು 08:28/08:30 ಕ್ಕೆ ಮತ್ತು ಅರಸೀಕೆರೆ 09:40 ಅಥವಾ 09:43 ಕ್ಕೆ ಆಗಮಿಸಲಿದೆ. ಅದೇ ರೀತಿ, ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ (07354) ಅರಸೀಕೆರೆಗೆ ಸಂಜೆ 07:17 ಅಥವಾ 07:20 ಕ್ಕೆ, ತುಮಕೂರು ರಾತ್ರಿ 08:48 ಅಥವಾ 08:50 ಕ್ಕೆ ಮತ್ತು ಯಶವಂತಪುರ ರಾತ್ರಿ 10:08/10:10 ಕ್ಕೆ ತಲುಪಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:28 am, Wed, 22 March 23

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ