ಹುಬ್ಬಳ್ಳಿ, ಮೇ 15: ಅಂಜಲಿ (Anjali) ಕೊಲೆ ಹಿಂದೆ ಪೊಲೀಸರ ವೈಫಲ್ಯ ಇದೆ. ಅಂಜಲಿಯ ಅಜ್ಜಿ ಈ ಹಿಂದೆ ಪೊಲೀಸರ ಗಮನಕ್ಕೆ ತಂದಿದ್ದರು. ಅಕಸ್ಮಾತ್ ಅವತ್ತೇ ವಿಚಾರಣೆ ಮಾಡಿದ್ದರೆ ಕೊಲೆಯಾಗುತ್ತಿರಲಿಲ್ಲ ಎಂದು ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginakai) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಪಿ ಧಮ್ಕಿ ಹಾಕಿರುವ ವಿಚಾರವನ್ನು ಮೃತ ಅಂಜಲಿ ಅಜ್ಜಿ ಪೊಲೀಸ್ ಠಾಣೆಗೆ ಹೋಗಿ ಹೇಳಿದ್ದರು. ಅವತ್ತು ಬೆಂಡಿಗೇರಿ ಪೊಲೀಸ್ ಠಾಣೆಯ ಅಧಿಕಾರಿಗಳು ಕರೆದು ವಿಚಾರಣೆ ಮಾಡಬೇಕಿತ್ತು. ಮೂಢನಂಬಿಕೆ ಎಂದು ಹೇಳಿ ಕಳುಹಿಸಿದ್ದರು. ಅವರ ದಿವ್ಯ ನಿರ್ಲಕ್ಷ್ಯಕ್ಕೆ ಕೊಲೆಯಾಗಿದೆ ಎಂದು ಹೇಳಿದ್ದಾರೆ.
ನೇಹಾ ಹತ್ಯೆ ಮಾಸುವ ಮುನ್ನವೇ ಅಂಜಲಿ ಹತ್ಯೆಯಾಗಿದೆ. ಚಾಕುವಿನಿಂದ ಇರಿದು ಬರ್ಬರ ಕೊಲೆಯಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ನೇಹಾ ಹತ್ಯೆ ನಡೆದ ಬಳಿಕವೂ ಸರ್ಕಾರ ಮತ್ತು ಪೊಲೀಸರು ಎಚ್ಚೆತ್ತುಕೊಂಡಿಲ್ಲ. ಗೃಹ ಇಲಾಖೆ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಅಜ್ಜಿಯ ದೂರನ್ನು ಮೂಢನಂಬಿಕೆ ಎಂದು ವಾಪಸ್ ಕಳುಹಿಸಿದ್ದ ಪೊಲೀಸರು; ಹುಬ್ಬಳ್ಳಿಯಲ್ಲಿ ನಡೆಯಿತು ನೇಹಾ ಮಾದರಿಯ ಮತ್ತೊಂದು ಕೊಲೆ
ರಾಜ್ಯ ಸರ್ಕಾರವೇ ಇದಕ್ಕೆಲ್ಲ ಸಂಪೂರ್ಣ ಹೊಣೆ. ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟರೆ ಕೆಲಸ ಮಾಡುತ್ತಾರೆ. ನೇಹಾ ಹತ್ಯೆಯಂತೆ ಕೊಲೆ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದರು. ಹೀಗಾಗಿ ಪೊಲೀಸರು ಆರೋಪಿಯನ್ನ ಕರೆದು ಅವರ ಭಾಷೆಯಲ್ಲಿ ಟ್ರೀಟ್ಮೆಂಟ್ ಕೊಡಬೇಕು. ನೀವು ಯಾಕೆ ಶೂಟೌಟ್ ಮಾಡಿ ಕೊಲ್ಲಬಾರದು ಎಂದಿದ್ದಾರೆ.
ಇದನ್ನೂ ಓದಿ: Hubballi Anjali Murder Case: ತಾನು ಕರೆದ ಕಡೆ ಬಾರದಿದ್ದಕ್ಕೆ ಸಹಪಾಠಿ ಅಂಜಲಿಯನ್ನ ಕೊಲೆ ಮಾಡಿದ್ನಾ ವಿಶ್ವ?
ಕೊಲೆ ಆಗಿ ಐದು ಗಂಟೆಯಾದರೂ ಇನ್ನು ಆರೋಪಿ ಬಂಧನವಾಗಿಲ್ಲ. ನೇಹಾ ಹತ್ಯೆಯಲ್ಲಿ ನಮ್ಮ ನಿಲುವು ಏನಾಗಿತ್ತು, ಈ ಕೊಲೆಯಲ್ಲಿ ಬಿಜೆಪಿ ನಿಲುವು ಅದೇ ಆಗಿರತ್ತೆ. ಅವಳಿ ನಗರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ವಾ. ನೇಹಾ ಹತ್ಯೆ ಏಕಾಏಕಿ ಆಗಿತ್ತು, ಇಲ್ಲಿ ಒಂದು ವಾರದ ಹಿಂದೆ ಧಮ್ಕಿ ಹಾಕಿದ್ದ. ಹೀಗಾಗಿ ಪೊಲೀಸರ ಗಮನಕ್ಕೆ ಬಂದಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಆ ಅಧಿಕಾರಿದೂ ಕೊಲೆ ಮಾಡಿರುವ ಆರೋಪಿಯಷ್ಟೇ ತಪ್ಪಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.