ಹುಬ್ಬಳ್ಳಿಯಲ್ಲಿ 18ರ ಯುವತಿಯನ್ನು ಮೋಸದಿಂದ ಮದುವೆಯಾಗಿದ್ದ 50-ವರ್ಷದ ಪ್ರಕಾಶ್ನನ್ನು ಬಂಧನ
ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ್ದ ಯುವತಿ ತನ್ನನ್ನು ಪ್ರಕಾಶ್ ಮೋಸದಿಂದ ಎಲ್ಲಿಗೋ ಕರೆದೊಯ್ದು ಮದುವೆಯಾದ ಅಂತ ಹೇಳಿದ್ದಳು. ಇವನ ಕಾಟದಿಂದ ತಪ್ಪಿಸಲೆಂದು ಪಾಲಕರು ಯುವತಿಯನ್ನು ಕೊಲ್ಹಾಪುರದಲ್ಲಿರುವ ಅಜ್ಜಿಯ ಮನೆಯಲ್ಲಿ ಬಿಟ್ಟಿದ್ದರು. ಆದರೆ ಕಳೆದ ತಿಂಗಳು ಪ್ರಕಾಶ್ ಆಕೆಯನ್ನು ಪತ್ತೆ ಮಾಡಿದ ಬಳಿಕ ಸುಮಾರು ಒಂದೂವರೆ ತಿಂಗಳುಗಳವರೆಗೆ ಇಬ್ಬರೂ ನಾಪತ್ತೆಯಾಗಿದ್ದರು.
ಹುಬ್ಬಳ್ಳಿ: ನೀಲಿ ಚೆಕ್ಸ್ ಶರ್ಟ್ ತೊಟ್ಟಿರುವ ಮಹಾನುಭಾವನ ಬಗ್ಗೆ ನಾವು ಸಾಕಷ್ಟು ಬರೆದಿದ್ದೇವೆ. ಇವನ ಹೆಸರು ಪ್ರಕಾಶ್ ಮತ್ತು ಈತ ಈಗ ನಗರದ ಕೇಶ್ವಾಪುರ ಪೊಲೀಸರ ವಶದಲ್ಲಿದ್ದಾನೆ. ಪ್ರಕಾಶ್ ಮಾಡಿದ ಘನಂದಾರಿ ಕೆಲಸದ ಬಗ್ಗೆ ಕನ್ನಡಿಗರಿಗೆ ಗೊತ್ತಿದೆ. ವಿಡಿಯೋದ ಎಡಭಾಗದಲ್ಲಿ ಕಾಣುವ ಯುವತಿಯನ್ನು ಇವನು ಪುಸಲಾಯಿಸಿ, ಆಮಿಶಗಳನ್ನೊಡ್ಡಿ, ಬೆದರಿಕೆಯನ್ನೂ ಹಾಕಿ ಮದುವೆಯಾಗಿದ್ದ. ಯುವತಿ ಅವನಿಂದ ತಪ್ಪಿಸಿಕೊಂಡು ಹುಬ್ಬಳ್ಳಿಯಲ್ಲಿರುವ ತನ್ನ ತಂದೆ ತಾಯಿಗಳ ಮನೆಗೆ ಬಂದು ವಿರುದ್ಧ ದೂರು ದಾಖಲಿಸಿದ ಬಳಿಕ ಪೊಲೀಸರು ಇವನನ್ನು ಬಂಧಿಸಿದ್ದಾರೆ. ತನ್ನ ತಂದೆಗಿಂತ ಹಿರಿಯನಾಗಿರುವ ವ್ಯಕ್ತಿಯನ್ನು ಯುವತಿ ನಂಬಿದ್ದಾದರೂ ಹೇಗೆ ಅನ್ನೋದೇ ಯಕ್ಷ ಪ್ರಶ್ನೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ