ಕೇಂದ್ರದ ವಿರುದ್ಧ ಹುಬ್ಬಳ್ಳಿಯಲ್ಲಿ ಕೈ ಪ್ರತಿಭಟನೆ: ಸಿದ್ದರಾಮಯ್ಯಗೆ ಪ್ರಹ್ಲಾದ್ ಜೋಶಿ ಸಪ್ತ ಪ್ರಶ್ನೆಗಳು

ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಪ್ರಹ್ಲಾದ್ ಜೋಶಿ ಅವರು ಸಿದ್ದರಾಮಯ್ಯ ಅವರಿಗೆ ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದ್ದಾರೆ. ಬೆಲೆ ಏರಿಕೆ, ಆಡಳಿತದಲ್ಲಿನ ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆಯ ಕುಸಿತದ ಬಗ್ಗೆ ಜೋಶಿ ತೀವ್ರ ಆರೋಪ ಮಾಡಿದ್ದಾರೆ.ಕಾಂಗ್ರೆಸ್ ಸರ್ಕಾರದ ವಿರುದ್ಧ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ವಿರುದ್ಧ ಹುಬ್ಬಳ್ಳಿಯಲ್ಲಿ ಕೈ ಪ್ರತಿಭಟನೆ: ಸಿದ್ದರಾಮಯ್ಯಗೆ ಪ್ರಹ್ಲಾದ್ ಜೋಶಿ ಸಪ್ತ ಪ್ರಶ್ನೆಗಳು
ಪ್ರಹ್ಲಾದ್​ ಜೋಶಿ

Updated on: Apr 30, 2025 | 6:10 PM

ಹುಬ್ಬಳ್ಳಿ, ಏಪ್ರಿಲ್​ 30: ಕೇಂದ್ರ ಸರ್ಕಾರದ (Central Government) ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಕಾಂಗ್ರೆಸ್​ (Congress) ನಾಯಕರು ಗುರುವಾರ (ಮೆ.01) ರಂದು ಹುಬ್ಬಳ್ಳಿಯಲ್ಲಿ (Hubballi) ಪ್ರತಿಭಟನೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ (Prahlad Joshi) ಅವರು ಬಹಿರಂಗ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಮತ್ತು ಹಾಗೂ ಕಾಂಗ್ರೆಸ್​ ಪಕ್ಷವನ್ನು ಪ್ರಹ್ಲಾದ್​ ಜೋಶಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಹ್ಲಾದ್​ ಜೋಶಿ ಕೇಳಿರುವ ಪ್ರಶ್ನೆಗಳು

  • ನಾಳೆ ನೀವು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ಯಾವ ಪುರುಷಾರ್ಥಕ್ಕೆ?

– ಜನಸಾಮಾನ್ಯರ ಮೇಲೆ 48 ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಿದ್ದಿರುವ ಬರೆ ಮರೆಸುವ ಪ್ರತಿಭಟನೆಯೇ?

ಇದನ್ನೂ ಓದಿ
ಬೆಂಗಳೂರು-ಮೈಸೂರು ಹೆದ್ದಾರಿಗೆ ಚನ್ನಪಟ್ಟಣದಲ್ಲಿ ಹೊಸ ಎಂಟ್ರಿ, ಎಕ್ಸಿಟ್​​
‘ಭಾರತವನ್ನು ದ್ವೇಷಿಸುತ್ತೇನೆ’: ವೈದ್ಯೆ ಅಫೀಫ ಫಾತಿಮಾ ದೇಶ ವಿರೋಧಿ ಪೋಸ್ಟ್
ಬೆಳಗಾವಿ: ಸಿದ್ದರಾಮಯ್ಯಗೆ ಕಪ್ಪು ಬಟ್ಟೆ ತೋರಿಸಿದವರು ಅರೆಸ್ಟ್​
ಬೆಳಗಾವಿ: ಭಾಷಣ ವೇಳೆ ಸಿದ್ದರಾಮಯ್ಯಗೆ ಕಪ್ಪು ಬಟ್ಟೆ ಪ್ರದರ್ಶನ

– ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಈ ಪ್ರತಿಭಟನೆಯು?

– ರಾಜ್ಯದ ಆರ್ಥಿಕ ದುರ್ವ್ಯವಸ್ಥೆಯನ್ನು ಜನರಿಂದ ಮರೆಮಾಚಲು ಈ ಪ್ರತಿಭಟನೆ?

– ಆಡಳಿತದಲ್ಲಿ ಭ್ರಷ್ಟಾಚಾರ ತುಂಬಿ, ಅಭಿವೃಧಿಯೆ ಕಾಣದೇ ರಾಜ್ಯವನ್ನು ಅಧೋಗತಿಗೆ ತಳ್ಳಿದ ಪ್ರತೀಕವೇ ಈ ಪ್ರತಿಭಟನೆ?

– ಆರ್ಥಿಕವಾಗಿ ಸದೃಢವಾಗಿದ್ದ ರಾಜ್ಯವನ್ನು ಇಂದು ₹5.5 ಲಕ್ಷ ಕೋಟಿ ಸಾಲದ ಹೊರೆಯಲ್ಲಿ ದಬ್ಬಿರುವ ಸಾಧನೆಯ ಪ್ರದರ್ಶನವೇ ಈ ಪ್ರತಿಭಟನೆ?

  • 48 ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನಸಾಮಾನ್ಯರನ್ನು ಕಬ್ಬಿನಂತೆ ಹಿಂಡುತ್ತಿರುವುದು ಕಾಂಗ್ರೆಸ್ ಸರ್ಕಾರ. ಈಗ ಈ ಪ್ರತಿಭಟನೆ ಯಾರ ವಿರುದ್ಧ ?

ಮೂರು ಬಾರಿ ಹಾಲಿನ ದರ ₹9 ಏರಿಕೆ; ಮೊದಲು ₹2, ಎರಡನೇ ಬಾರಿ ₹3 , ಮೂರನೇ ಬಾರಿ ₹4 ಹೆಚ್ಚಿಸಿ ರೈತರಿಗೆ ಕೊಟ್ಟದ್ದು ಚೊಂಬು.

ಡಿಸೇಲ್ ಬೆಲೆ ₹ 2 ಹೆಚ್ಚಳ

ಬಸ್ ಪ್ರಯಾಣ ದರ ಶೇ.20ರಷ್ಟು ಅಧಿಕಗೊಳಿಸಿ ಜನರಿಗೆ ದುಬಾರಿಯಾದ ಕಾಂಗ್ರೆಸ್ ಸರ್ಕಾರ.

₹ 10 ಇದ್ದ ಪಹಣಿ ಶುಲ್ಕ ಒಮ್ಮೆಲೇ ₹25ಗೆ ಏರಿಕೆ ಮಾಡಿ ರೈತ ವಿರೋಧಿ ನಡೆ.

ರಾಜಧಾನಿಯಲ್ಲಿ ಕುಡಿಯುವ ನೀರಿನ ದರ ಬರೋಬ್ಬರಿ ₹ 200ರವರೆಗೆ ಹೆಚ್ಚಳ

ವಿದ್ಯುತ್ ಪ್ರತಿ ಯುನಿಟ್ 36 ಪೈಸೆ ಹೆಚ್ಚಿಸಿ ಜನರಿಗೆ ಕರೆಂಟ್ ಶಾಕ್ ಕೊಟ್ಟ ಸರ್ಕಾರ.

₹ 20 ಇದ್ದ ಬಾಂಡ್ ಪೇಪರ್ ₹ 100ಗೆ ಏರಿಕೆ; ಮುದ್ರಾಂಕ ಶುಲ್ಕ ₹ 500 ಕ್ಕೇ ಹೆಚ್ಚಳ.

ರಾಜ್ಯದಲ್ಲಿ ಬೆಲೆ ಏರಿಕೆಯಿಂದ ₹75ರಿಂದ 80 ಸಾವಿರ ಕೋಟಿ ಕರ ವಸೂಲಿ.

ಮನೆಯ ಕಸಕ್ಕೆ ₹400 ರವರೆಗೆ ಶುಲ್ಕ ಹೆಚ್ಚಳ; 4 ಸಾವಿರ ಚದರಡಿ ಮನೆಗೆ ಮಾಸಿಕ ₹400ರಂತೆ ವಾರ್ಷಿಕ ₹4,800 ಶುಲ್ಕ ಹೆಚ್ಚಳ.

ಲಿಫ್ಟ್‌, ಜನರೇಟರ್‌ ಪರಿಶೀಲನೆ ಮತ್ತು ರಿನಿವಲ್‌ಗೆ ₹800 ಇದ್ದ ದರ ಇದೀಗ ₹ 5,000-₹8,000 ವರೆಗೆ ಹೆಚ್ಚಳ.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಮಧ್ಯಂತರ ತಡೆ

  • ಸಂವಿಧಾನದ ದುರ್ಬಳಕೆ: ಕಾಂಗ್ರೆಸ್‌ನ ಜನವಿರೋಧಿ ನೀತಿ ಯಾರ ವಿರುದ್ಧ ನಿಮ್ಮ ಪ್ರತಿಭಟನೆ ?

– ಭಾರತದ ಇತಿಹಾಸದಲ್ಲಿ ಸಂವಿಧಾನದ ವಿಧಿ 356 ಅನ್ನು 125ಕ್ಕೂ ಹೆಚ್ಚು ಬಾರಿ ಕಾಂಗ್ರೆಸ್ ಪಕ್ಷ ದುರುಪಯೋಗಿಸಿಕೊಂಡಿದೆ.

– ಇಂದಿರಾ ಗಾಂಧಿಯವರ ಕಾಲದಲ್ಲಿ 1966 ರಿಂದ 1977 ರವರೆಗೆ ಸುಮಾರು 50 ಬಾರಿ ಈ ವಿಧಿಯನ್ನು ಬಳಸಿದ್ದಾರೆ ಬಹುತೇಕ ಬೇರೆ ಪಕ್ಷದ ರಾಜ್ಯ ಸರ್ಕಾರಗಳನ್ನು ಕೆಡವಿದ್ದಾರೆ.

–  ಸಂವಿಧಾನ ಶಿಲ್ಪಿ ಬಾಬಾ ಸಾಹೇಬರಿಗೆ 1954 ಬಂಡಾರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸೋಲಿಸಿ ಅವಮಾನ

– ನಾರಾಯಣ ಎಸ್ ಕಜೋರ್ಲ್ಕರ್ ಗೆ 1970ರಲ್ಲಿ ಬಾಬಾ ಸಾಹೇಬರನ್ನು ಅವಮಾನಿಸಲೆಂದೇ ಪದ್ಮಭೂಷಣ ಪ್ರಶಸ್ತಿ

– ಬಾಬಾ ಸಾಹೇಬರನ್ನು ಭಾರತ ರತ್ನ ಪುರಸ್ಕಾರಕ್ಕೆ ಕಾಂಗ್ರೆಸ್ ಪರಿಗಣಿಸಲೇ ಇಲ್ಲ. ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ಅಂಬೇಡ್ಕರ್ ರವರಿಗೆ 1990 ರಲ್ಲಿ ಭಾರತ್ ರತ್ನ.

– ಒಂದು ಸಮುದಾಯಕ್ಕೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದಿದ್ದು ಉಪ ಮುಖ್ಯಮಂತ್ರಿಗಳು

– ಸಂವಿಧಾನದ ಆಶಯ ವಿರೋಧಿಸಿ ಒಂದು ಸಮುದಾಯಕ್ಕಾಗಿ ಮೀಸಲಾತಿ

– ಉಪ ಮುಖ್ಯಮಂತ್ರಿಗಳ ಧಮ್ಕಿ ರಾಜಕಾರಣವನ್ನು ಏನೆಂದು ಹೇಳಬೇಕು

– ವಿದೇಶಿ ನೆಲದಲ್ಲಿ ಭಾರತದ ವಿರುದ್ಧ ಮಾತನಾಡುವ ಕಾಂಗ್ರೆಸ್ ಹಾಗೂ ಅವರ ಪಕ್ಷದ ನಾಯಕರು ಸಂವಿಧಾನಕ್ಕೆ ಅಗೌರವ ತೋರುತಿಲ್ಲವೇ

– ಪಾಕಿಸ್ತಾನದ ವಿರುದ್ದ ಯುದ್ದದ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ಅವರ ಸಂಪುಟದ ಸಚಿವರುಗಳು ಪಾಕಿಸ್ತಾನ ಮಾತನಾಡುವ ರೀತಿಯಲ್ಲೇ ಮಾತನಾಡುತ್ತಾರೆ.

  • ನಿಮ್ಮ ನೇತೃತ್ವದ ಸರ್ಕಾರದಲ್ಲಿನ ಅಕ್ರಮಗಳು ಹಾಗೂ ಭ್ರಷ್ಟಾಚಾರ ಮರೆಮಾಚಲು ಈ ಪ್ರತಿಭಟನೆಯೇ?

– ವಾಲ್ಮಿಕಿ ಅಭಿವೃದ್ದಿ ನಿಗಮದ ಹಗರಣ

– SC/ST ಯೋಜನೆಗಳಿಗೆ ಮೀಸಲಾದ ರೂ. 8,094 ದುರ್ಬಳಕೆ

– ಮುಡಾ ಹಗರಣ

– ಟೆಂಡರ್ ಮಾಫಿಯಾ -ಶೇ 60% ಕಮಿಷನ್.

– ಸ್ಮಾರ್ಟ್​ ಮೀಟರ್ ಹಗರಣ

– ಪಿಎಸ್​ಐ ನೇಮಕಾತಿ ಹಗರಣ

– ಮೂಡ ಹಗರಣ

– ಯೋಜನೆಗಳ ಅನುದಾನ ಬಿಡುಗಡೆಯಲ್ಲಿ ಹಗರಣ

– ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಗಳ ವಸ್ತುಗಳ ಖರೀದಿಯಲ್ಲಿ ಅಕ್ರಮ.

– ಔಷಧ ಖರೀದಿಯಲ್ಲಿ ಬಾರಿ ಗೋಲ್ಮಾಲ್- ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ದರದಲ್ಲಿ ಖರೀದಿ

  • ನಿಮ್ಮ ನೇತೃತ್ವದ ಸರ್ಕಾರದಲ್ಲಿನ ಅಕ್ರಮಗಳು ಹಾಗೂ ಭ್ರಷ್ಟಾಚಾರ ಮರೆಮಾಚಲು ಈ ಪ್ರತಿಭಟನೆಯೇ?

– ವಾಲ್ಮಿಕಿ ಅಭಿವೃದ್ದಿ ನಿಗಮದ ಹಗರಣ

– SC/ST ಯೋಜನೆಗಳಿಗೆ ಮೀಸಲಾದ ರೂ. 8,094 ದುರ್ಬಳಕೆ

– ಮುಡಾ ಹಗರಣ

– ಟೆಂಡರ್ ಮಾಫಿಯಾ -ಶೇ 60% ಕಮಿಷನ್.

– ಸ್ಮಾರ್ಟ್​ ಮೀಟರ್ ಹಗರಣ

– ಪಿಎಸ್​ಐ ನೇಮಕಾತಿ ಹಗರಣ

– ಮೂಡ ಹಗರಣ

– ಯೋಜನೆಗಳ ಅನುದಾನ ಬಿಡುಗಡೆಯಲ್ಲಿ ಹಗರಣ

– ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಗಳ ವಸ್ತುಗಳ ಖರೀದಿಯಲ್ಲಿ ಅಕ್ರಮ.

– ಔಷಧ ಖರೀದಿಯಲ್ಲಿ ಬಾರಿ ಗೋಲ್ಮಾಲ್- ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ದರದಲ್ಲಿ ಖರೀದಿ

  • ರಾಜ್ಯದಲ್ಲಿ ನೆಲಕಚ್ಚಿದ ಕಾನೂನು ಮತ್ತು ಸುವ್ಯವಸ್ಥೆ. ಕಂಡರು ಕಾಣದಂತೆ ವರ್ತಿಸುತ್ತಿರುವುದು ನಿಮ್ಮ ಸರ್ಕಾರದ ಸಾಧನೆಯೇ? ಈ ವೈಫಲ್ಯವನ್ನು ಮುಚ್ಚಿಹಾಕಲು ಪ್ರತಿಭಟನೆಯೇ?

– ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆ, ಠಾಣೆಯ ಮೇಲೆ ದಾಳಿ.

– ಮೈಸೂರಿನ ಉದಯಗಿರಿ, ಬೆಂಗಳೂರಿನ ಕೆಜೆ ಹಳ್ಳಿಯಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದವರು ಅಮಾಯಕರು. ಅವರನ್ನು ಬಂಧಿಸಿದ ಪೊಲೀಸರನ್ನೇ ದೂರಿದ ಕಾಂಗ್ರಸ್ ಸಚಿವರು.

– ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಕೇಸ್ ವಾಪಸ್‌- ಸಚಿವ ಸಂಪುಟದ ನಿರ್ಧಾರ. ಮತಾಂಧತೆಯ ಪ್ರದರ್ಶನ- ತುಷ್ಟಿಕರಣ ನೀತಿಯನ್ನು ತೋರಿಸುತ್ತದೆ.

– ಸೈಬರ್ ಅಪರಾಧಗಳು 2023 ರಿಂದ ಶೇ. 30 ರಷ್ಟು ಹೆಚ್ಚಾಗಿದೆ.

– ರಾಜ್ಯದಲ್ಲಿ ಮಿತಿ ಮೀರಿದ ದರೋಡೆ ಮತ್ತು ಕಳ್ಳತನದ ಪ್ರಕರಣಗಳು, ಗುಂಡಾಗಳ ಗುಂಪುಗಳು ಮತ್ತು ರೌಡಿಗಳ ಚಟುವಟಿಕೆ ಹೆಚ್ಚಾಗಿದೆ‌. ಆದರೂ‌ ಮೌನವೇಕೆ?

ಟ್ವಿಟರ್ ಪೋಸ್ಟ್​

  • ನೀವು ಮತ್ತು ನಿಮ್ಮ‌ ಪಕ್ಷದ ಮುಖಂಡರ ವರ್ತನೆಯಿಂದಾಗಿ ರಾಜ್ಯದ ಅಧಿಕಾರಿಗಳ ಮನೋಬಲ ಕುಗ್ಗುತ್ತಿದೆ. ಅವರ ನೋವನ್ನು ಮರೆಮಾಚಲು ಈ ಪ್ರತಿಭಟನೆಯೇ?

– ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಎಎಸ್‌ಪಿಗೆ ಹೊಡೆಯಲು ಮುಂದಾಗಿದ್ದು ಸಿಎಂ ಸಿದ್ದರಾಮಯ್ಯ.

– ಅಧಿಕಾರಿಗಳ ಮೇಲೆ‌ ದರ್ಪ ತೋರುವುದು.

– ನಿಮ್ಮ ನಡೆಗೆ ಸರ್ಕಾರಿ‌ ನೌಕರರು, ಅಧಿಕಾರಿಗಳ ನೈತಿಕತೆ ಕುಗ್ಗಿಹೋಗಿದೆ.

– ನಿಮ್ಮ ಪಕ್ಷದ ನಾಯಕರು ಅಧಿಕಾರಿಗಳು ಹಾಗೂ ಪೊಲೀಸರ ಜೊತೆ ನಡೆದುಕೊಳ್ಳುವ ರೀತಿ ಬೇಸರ ತರುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Wed, 30 April 25