AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹು-ಧಾ ಪಾಲಿಕೆಗೆ ಮತ್ತೆ ತಲೆನೋವು ತಂದಿರುವ ನಕಲಿ ಫ್ಲ್ಯಾಟ್ ಹಾವಳಿ

ಹುಬ್ಬಳ್ಳಿ: ನಾಲ್ಕೈದು ತಿಂಗಳ ಹಿಂದೆ ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ತಲೆನೋವಾಗಿದ್ದ ನಕಲಿ ಫ್ಲ್ಯಾಟ್ ಹಾವಳಿ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಹಳೇ ಹುಬ್ಬಳ್ಳಿ ಭಾಗದಲ್ಲಿ ರಾಜಕಾಲುವೆ ಮತ್ತು ಪಾಲಿಕೆ ಜಾಗವನ್ನ ಸಾರ್ವಜನಿಕರಿಗೆ ಮಾರಿರೋ ಶಾಕಿಂಗ್ ಸುದ್ದಿ ನಡುವೆ, ಪಾಲಿಕೆ ಕೈಗೊಂಡಿರುವ ನಿರ್ಧಾರ ಜನರ ನಿದ್ದೆಗೆಡಿಸಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗೇಣು ಜಾಗಕ್ಕೂ ಬಂಗಾರದ ಬೆಲೆ. ಹೀಗಾಗಿ ಇಲ್ಲಿ ಭೂಗಳ್ಳರು ದುರ್ಬೀನು ಹಾಕಿಕೊಂಡು ಕೂತಿರ್ತಾರೆ. ಸ್ವಲ್ಪ ಜಾಗ ಸಿಕ್ಕರೂ ಬೇಲಿ ಹಾಕೋರೆ ಜಾಸ್ತಿ. ಅದು ಸರ್ಕಾರದ್ದಾಗಿರಲಿ ಅಥವಾ ಖಾಸಗಿ ಆಸ್ತಿಯೇ […]

ಹು-ಧಾ ಪಾಲಿಕೆಗೆ ಮತ್ತೆ ತಲೆನೋವು ತಂದಿರುವ ನಕಲಿ ಫ್ಲ್ಯಾಟ್ ಹಾವಳಿ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Dec 02, 2019 | 2:43 PM

Share

ಹುಬ್ಬಳ್ಳಿ: ನಾಲ್ಕೈದು ತಿಂಗಳ ಹಿಂದೆ ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ತಲೆನೋವಾಗಿದ್ದ ನಕಲಿ ಫ್ಲ್ಯಾಟ್ ಹಾವಳಿ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಹಳೇ ಹುಬ್ಬಳ್ಳಿ ಭಾಗದಲ್ಲಿ ರಾಜಕಾಲುವೆ ಮತ್ತು ಪಾಲಿಕೆ ಜಾಗವನ್ನ ಸಾರ್ವಜನಿಕರಿಗೆ ಮಾರಿರೋ ಶಾಕಿಂಗ್ ಸುದ್ದಿ ನಡುವೆ, ಪಾಲಿಕೆ ಕೈಗೊಂಡಿರುವ ನಿರ್ಧಾರ ಜನರ ನಿದ್ದೆಗೆಡಿಸಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗೇಣು ಜಾಗಕ್ಕೂ ಬಂಗಾರದ ಬೆಲೆ. ಹೀಗಾಗಿ ಇಲ್ಲಿ ಭೂಗಳ್ಳರು ದುರ್ಬೀನು ಹಾಕಿಕೊಂಡು ಕೂತಿರ್ತಾರೆ. ಸ್ವಲ್ಪ ಜಾಗ ಸಿಕ್ಕರೂ ಬೇಲಿ ಹಾಕೋರೆ ಜಾಸ್ತಿ. ಅದು ಸರ್ಕಾರದ್ದಾಗಿರಲಿ ಅಥವಾ ಖಾಸಗಿ ಆಸ್ತಿಯೇ ಆಗಿರಲಿ. ಇನ್ನು ನಿವೇಶನದ ಪಕ್ಕ ರಾಜಕಾಲುವೆ ಸಿಕ್ಕರೆ ಬಿಡ್ತಾರಾ ಹೇಳಿ. ಇಲ್ಲೂ ಹಾಗೇ ಆಗಿರೋದು. ಯಾವುದೇ ಆಲೋಚನೆ ಇಲ್ಲದೆ ರಾಜಕಾಲುವೆ ಒತ್ತುವರಿ ಮಾಡಿಕೊಂಡವರಿಗೆ ಈಗ ಸಂಕಟ ಶುರುವಾಗಿದೆ.

ಮನೆ ಖಾಲಿ ಮಾಡಲು ಪಾಲಿಕೆ ಸೂಚನೆ: 3 ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ಯಾರದ್ದೋ ಜಾಗದಲ್ಲಿ ನೆಲಸಿದ್ದ 50ಕ್ಕೂ ಹೆಚ್ಚು ಕುಟುಂಬಗಳನ್ನ ಕೋರ್ಟ್​ ಆದೇಶದ ಮೇರೆಗೆ ಪೊಲೀಸ್ ಇಲಾಖೆ ಹಾಗೂ ಪಾಲಿಕೆ ಖಾಲಿ ಮಾಡಿಸಿತ್ತು. ಎಲ್ಲರೂ ದುಡ್ಡು ಕೊಟ್ಟು ಜಾಗ ಖರೀದಿ ಮಾಡಿದ್ದರು. ಆದ್ರೆ ಜಾಗದ ಮೂಲ ಮಾಲೀಕರೇ ಬೇರೆಯವರಾಗಿದ್ದರು. ಇಂತಹದ್ದೇ ಮತ್ತೊಂದು ಕೇಸ್ ಹುಬ್ಬಳ್ಳಿಯಲ್ಲಿ ನಡೆದಿದೆ.

ಪಾಂಡುರಂಗ ಕಾಲೋನಿ ನಿವಾಸಿಗಳಿಗೆ ಈಗಾಗ್ಲೇ ಪಾಲಿಕೆ ಆಯುಕ್ತರು ಮನೆ ತೆರವು ಮಾಡಲು ನೋಟಿಸ್ ನೀಡಿದ್ದಾರೆ. ರಾಜಕಾಲುವೆಯಲ್ಲಿ ವಾಸವಿದ್ದೀರಿ ಅಂತಾ ಮನೆ ಖಾಲಿ ಮಾಡೋಕೆ ಸೂಚನೆ ನೀಡಲಾಗಿದೆ. ಇದು ಸ್ಥಳೀಯರನ್ನ ಕಂಗಾಲಾಗುವಂತೆ ಮಾಡಿದೆ.

ಅತಿಕ್ರಮವಾದ ಮನೆ ತೆರೆವಿಗೆ ಪಾಲಿಕೆ ಸಿದ್ಧತೆ: 35 ವರ್ಷಗಳ ಹಿಂದೆ ಪಾಲಿಕೆ 24 ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಜಾಗ ನೀಡಿತ್ತಂತೆ. ಸದ್ಯ ಅದೇ ನಿವೇಶನಗಳು 90 ಮನೆಗಳಾಗಿ ಪರಿವರ್ತನೆಯಾಗಿವೆ ಅನ್ನೋದು ಸ್ಥಳೀಯರ ವಾದ. ಆದರೆ ಕೊಟ್ಟ ಜಾಗಕ್ಕಿಂತ ಹೆಚ್ಚು ಅತಿಕ್ರಮಣವಾಗಿದ್ದಲ್ಲದೇ ನಕಲಿ ದಾಖಲೆ ಸೃಷ್ಟಿಸಿ ಅಮಾಯಕರಿಗೆ ಟೋಪಿ ಹಾಕಿದ್ದಾರೆ ಅನ್ನೋದು ಪಾಲಿಕೆಯ ವಾದ. ಸದ್ಯ ಸರ್ವೆ ಕಾರ್ಯ ಮುಗಿದಿದ್ದು, ಅತಿಕ್ರಮವಾದ ಮನೆ ತೆರೆವಿಗೆ ಸೂಚಿಸಲಾಗಿದೆ. ಆದ್ರೆ ಕೆಲವೊಬ್ಬರು ಮನೆ ಕಟ್ಟಿ 10 ವರ್ಷವೂ ಪೂರೈಸಿಲ್ಲ. ಬ್ಯಾಂಕ್ ಲೋನ್ ಕೂಡಾ ಇದೆ. ಇಂತಹ ಹೊತ್ತಲ್ಲಿ ಮನೆ ಡೆಮಾಲಿಷನ್ ಮಾಡಿದ್ರೆ ಹೇಗೆ ಅಂತಾ ಗೋಳಾಡುತ್ತಿದ್ದಾರೆ.

ಸದ್ಯ ಪಾಂಡುರಂಗ ಕಾಲೋನಿಯ 90 ಕುಟುಂಬಗಳು ನಿದ್ದೆಯಿಲ್ಲದೆ ರಾತ್ರಿ ಕಳೀತಿವೆ. ಯಾವಾಗ ತಮ್ಮ ಮನೆ ಮುಂದೆ ಜೆಸಿಬಿ ಬಂದು ನಿಲ್ಲುತ್ತೋ ಅನ್ನೋ ಭಯ ಶುರುವಾಗಿದೆ. ಇಷ್ಟಕ್ಕೆಲ್ಲಾ ಕಾರಣ ಈ ಬಾರಿಯ ಭೀಕರ ಮಳೆ. ಮಳೆಯಿಂದ ರಾಜಕಾಲುವೆ ತುಂಬಿ ಹಳೇ ಹುಬ್ಬಳ್ಳಿ ಅರ್ಧ ಮುಳುಗಿತ್ತು. ಒತ್ತುವರಿಯಿಂದಲೇ ಹೀಗಾಯ್ತು ಅಂತಾ ಪಾಲಿಕೆ ಸರ್ವೆ ಕಾರ್ಯ ಆರಂಭಿಸಿತ್ತು, ಅಂದಿನಿಂದಲೂ ಒಂದಲ್ಲಾ ಒಂದು ಗೋಲ್​ಮಾಲ್ ಹೊರಬೀಳುತ್ತಿವೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು