ಹಾಸನ: ಗಂಡ ಹೆಂಡತಿ ಸಂಬಂಧಕ್ಕೆ ಅದರದೇ ಆದ ಅರ್ಥವಿದೆ. ಜಗಳವಾಡಬಹುದು, ಕಿತ್ತಾಡಬಹುದು. ಆದರೆ ಸುಖ, ದುಃಖವನ್ನು ಸಮಾನವಾಗಿ ಸ್ವೀಕರಿಸಿ ಜೀವನ ಸಾಗಿಸುತ್ತಾರೆ. ಇನ್ನೊಬ್ಬರಿಗೆ ಮಾದರಿಯಾಗುವಂತೆ ಬದುಕುತ್ತಾರೆ. ಇಬ್ಬರಲ್ಲಿ ಯಾರಿಗೇ ಏನಾದರೂ ಆದರೆ ಸಹಿಸುವ ಶಕ್ತಿ ಗಂಡ- ಹೆಂಡತಿಗೆ ಇರಲ್ಲ. ಇದಕ್ಕೆ ಉದಾಹರಣೆಯಾಗಿ ಹಾಸನದಲ್ಲೊಂದು ಘಟನೆ ನಡೆದಿದೆ. ಮದುವೆಯಾದ ದಿನದಿಂದ ಒಟ್ಟಿಗೆ ಜೀವನ ಸಾಗಿಸುತ್ತಿದ್ದ ದಂಪತಿ ಸಾವಿನ ಪಯಣವನ್ನೂ ಒಟ್ಟಿಗೆ ಮುಂದುವರೆಸಿದ್ದಾರೆ.
ಅನಾರೋಗ್ಯದಿಂದ ಪತ್ನಿ ಸಾವಿಗೀಡಾದ ಹದಿನೈದು ನಿಮಿಷಗಳ ಅಂತರದಲ್ಲಿ ಪತಿಯೂ ಮೃತಪಟ್ಟಿದ್ದು, ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ. ಈ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್ನಲ್ಲಿ ನಡೆದಿದೆ. ಇಲ್ಲಿನ ಅಮ್ಮನಹಳ್ಳಿ ಬಡಾವಣೆಯಲ್ಲಿ ಪತ್ನಿ ಜಯಮ್ಮ(50) ಹಾಗು ಜೆ.ಡಿ.ರಾಜೇಗೌಡ ಮೃತರು. ಸೋಮವಾರ ಬೆಳಿಗ್ಗೆ ಅನಾರೋಗ್ಯದಿಂದ ಗ್ರಾಮ ಪಂಚಾಯತಿ ಮಾಜಿ ಸದಸ್ಯೆ ಆಗಿರುವ ಜಯಮ್ಮ ಮೃತಪಟ್ಟಿದ್ದರು.
ಜಯಮ್ಮನವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುವಾಗಲೇ ಪತ್ನಿಯ ಸಾವಿನ ಸುದ್ದಿಯಿಂದ ಆಘಾತಗೊಂಡಿದ್ದ ರಾಜಣ್ಣ ಕೂಡ ಕುಸಿದುಬಿದ್ದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸುಮಾರು 25 ವರ್ಷಗಳ ವೈವಾಹಿಕ ಜೀವನ ನಡೆಸಿದ್ದ ಈ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ. ತಮ್ಮ ಜೊತೆ ಜೊತೆಯ ಪಯಣವನ್ನು ಸಾವಿನಲ್ಲೂ ಮುಂದುವೆಸಿದ್ದಾರೆ.
ಇದನ್ನೂ ಓದಿ
Delta Plus variant: ಡೆಲ್ಟಾ ಪ್ಲಸ್ ರೂಪಾಂತರಿ ಅಪಾಯಕಾರಿಯೇ? ಹೊಸ ಕೊವಿಡ್ ರೂಪಾಂತರಿ ಬಗ್ಗೆ ತಜ್ಞರು ಹೇಳುವುದೇನು?
(husband had a heart attack within 15 minutes of his wife death in hassan)