Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysore News: ತವರು ಮನೆ ಸೇರಿದ್ದ ಪತ್ನಿಯನ್ನು ಭೀಕರವಾಗಿ ಕೊಂದ ಪತಿ

ತವರು ಮನೆ ಸೇರಿದ್ದ ಪತ್ನಿಯನ್ನು ಪತಿ ಭೀಕರವಾಗಿ ಕೊಲೆ ಮಾಡಿದ್ದು, ಈ ವೇಳೆ ತಡೆಯಲು ಬಂದ ಅತ್ತೆಯನ್ನೂ ಕೊಲೆ ಮಾಡಲು ಯತ್ನಿಸಿರುವ ಘಟನೆ ಮೈಸೂರಿನ ಕುಂಬಾರಕೊಪ್ಪಲಿದಲ್ಲಿ ನಡೆದಿದೆ.

Mysore News: ತವರು ಮನೆ ಸೇರಿದ್ದ ಪತ್ನಿಯನ್ನು ಭೀಕರವಾಗಿ ಕೊಂದ ಪತಿ
ದಂಪತಿ ಮಾದೇಶ್​ ಮತ್ತು ಹರ್ಷಿತಾ
Follow us
ರಾಮ್​, ಮೈಸೂರು
| Updated By: ವಿವೇಕ ಬಿರಾದಾರ

Updated on: Jul 16, 2023 | 7:27 AM

ಮೈಸೂರು: ತವರು ಮನೆ ಸೇರಿದ್ದ ಪತ್ನಿಯನ್ನು (Wife) ಪತಿ (Husband) ಭೀಕರವಾಗಿ ಕೊಲೆ ಮಾಡಿದ್ದು, ಈ ವೇಳೆ ತಡೆಯಲು ಬಂದ ಅತ್ತೆಯನ್ನೂ (Mother in Law) ಕೊಲೆ ಮಾಡಲು ಯತ್ನಿಸಿರುವ ಘಟನೆ ಮೈಸೂರಿನ (Mysore) ಕುಂಬಾರಕೊಪ್ಪಲಿದಲ್ಲಿ ನಡೆದಿದೆ. ಹರ್ಷಿತಾ (21) ಮೃತ ದುರ್ದೈವಿ. ಗುಂಡ್ಲುಪೇಟೆ ತಾಲ್ಲೂಕಿನ ಬೇರಂಬಳ್ಳಿ ಗ್ರಾಮದ ನಿವಾಸಿ ಮಾದೇಶ್ (30) ಕೊಲೆ ಆರೋಪಿ. ಒಂದು ವರ್ಷದ ಹಿಂದೆ ಇಬ್ಬರು ಮದುವೆಯಾಗಿದ್ದರು. ದಂಪತಿ ಪ್ರಾರಂಭದ ದಿನಗಳಲ್ಲಿ ಅನ್ಯೋನ್ಯವಾಗಿಯೇ ಇದ್ದರು. ಆದರೆ ಈ ನಡುವೆ ಕ್ಷುಲ್ಲಕ ಕಾರಣಕ್ಕೆ ವಿರಸ ಉಂಟಾಗಿದೆ. ಮಾದೇಶ್ ಆಗಾಗ ಕಿರಿಕ್ ಮಾಡುತ್ತಿದ್ದು, ಹರ್ಷಿತಳನ್ನು ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದನು.

ಅಲ್ಲದೇ ಮಾದೇಶ್​ ಪತ್ನಿಯ ಜೊತೆ ಮಲಗುವಾಗ ಪಕ್ಕದಲ್ಲಿ ಮಚ್ಚು ಇಟ್ಟುಕೊಂಡು ಮಲಗುತ್ತಿದ್ದನು. ಇದರಿಂದ ಹೆದರಿದ್ದ ಪತ್ನಿ ಹರ್ಷಿತಾ ತವರು ಮನೆ ಸೇರಿದ್ದಳು. ಹೆದರಿ ತವರು ಮನೆ ಸೇರಿದ್ದ ಹರ್ಷಿತಾಳನ್ನು ವಾಪಸ್ ತನ್ನ​ ಮನೆಗೆ ಕರೆದುಕೊಂಡು ಬರಲು ಮಾದೇಶ್ ಅತ್ತೆ ಮನೆಗೆ ಹೋಗಿದ್ದನು.

ಇದನ್ನೂ ಓದಿ: Bengaluru News: ಕಾರು ಚಾಲನೆ ವೇಳೆ ಗಂಡ-ಹೆಂಡ್ತಿ ಜಗಳ; ದಿಢೀರ್‌ ಸ್ಟೇರಿಂಗ್ ಎಳೆದ ಪತ್ನಿ, ಕಾರು ಪಲ್ಟಿ

ಅಲ್ಲಿ ಹರ್ಷಿತಳ ಮೇಲೆ ಮನಸೋ ಇಚ್ಛೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಈ ವೇಳೆ ತಡೆಯಲು ಬಂದ ಅತ್ತೆಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಸ್ಥಳಕ್ಕಾಗಿಮಿಸಿದ ಮೇಟಗಳ್ಳಿ ಪೋಲೀಸರು ಆರೋಪಿ ಮಾದೇಶ್​​ನನ್ನು ವಶಕ್ಕೆ ಪಡೆದಿದ್ದಾರೆ. ಮೇಟಗಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

‘ವಿದ್ಯಾಪತಿ’ ಸಿನಿಮಾಕ್ಕೆ ಭಿನ್ನವಾಗಿ ಆಹ್ವಾನ ನೀಡಿದ ಡಾಲಿ ಧನಂಜಯ್
‘ವಿದ್ಯಾಪತಿ’ ಸಿನಿಮಾಕ್ಕೆ ಭಿನ್ನವಾಗಿ ಆಹ್ವಾನ ನೀಡಿದ ಡಾಲಿ ಧನಂಜಯ್
Jasprit Bumrah: ಜಸ್​ಪ್ರೀತ್ ಬುಮ್ರಾ ಎಂಟ್ರಿ: RCB ಗೆ ಟೆನ್ಶನ್ ಶುರು
Jasprit Bumrah: ಜಸ್​ಪ್ರೀತ್ ಬುಮ್ರಾ ಎಂಟ್ರಿ: RCB ಗೆ ಟೆನ್ಶನ್ ಶುರು
ರಾಮನವಮಿ ದಿನವೇ ರಾಮೇಶ್ವರಂನಲ್ಲಿ ಪಂಬನ್ ರೈಲ್ವೆ ಸೇತುವೆ ಉದ್ಘಾಟಿಸಿದ ಮೋದಿ
ರಾಮನವಮಿ ದಿನವೇ ರಾಮೇಶ್ವರಂನಲ್ಲಿ ಪಂಬನ್ ರೈಲ್ವೆ ಸೇತುವೆ ಉದ್ಘಾಟಿಸಿದ ಮೋದಿ
ಕಾರಿನ ಟಾಪ್ ಮೇಲೆ ಕುಳಿತು ಹುಚ್ಚಾಟ: ಸ್ವಲ್ಪ ಹೆಚ್ಚು ಕಡಿಮೆ ಆದ್ರು ಯಮನಪಾದ!
ಕಾರಿನ ಟಾಪ್ ಮೇಲೆ ಕುಳಿತು ಹುಚ್ಚಾಟ: ಸ್ವಲ್ಪ ಹೆಚ್ಚು ಕಡಿಮೆ ಆದ್ರು ಯಮನಪಾದ!
ಅಯೋಧ್ಯೆಯಲ್ಲಿ ಬಾಲ ರಾಮನ ಹಣೆ ಸ್ಪರ್ಶಿಸಿದ ಸೂರ್ಯ ರಶ್ಮಿ
ಅಯೋಧ್ಯೆಯಲ್ಲಿ ಬಾಲ ರಾಮನ ಹಣೆ ಸ್ಪರ್ಶಿಸಿದ ಸೂರ್ಯ ರಶ್ಮಿ
ಬೇಕರಿಗೆ ಬಂದಿದ್ದ ಬಾಲಕಿಗೆ ಚಾಕೊಲೇಟ್ ಕೊಟ್ಟು ಲೈಂಗಿಕ ಕಿರುಕುಳ
ಬೇಕರಿಗೆ ಬಂದಿದ್ದ ಬಾಲಕಿಗೆ ಚಾಕೊಲೇಟ್ ಕೊಟ್ಟು ಲೈಂಗಿಕ ಕಿರುಕುಳ
2,300 ವರ್ಷ ಹಳೆಯ ಬೋಧಿ ವೃಕ್ಷವಿರುವ ಬೌದ್ಧ ದೇವಾಲಯಕ್ಕೆ ಮೋದಿ ಭೇಟಿ
2,300 ವರ್ಷ ಹಳೆಯ ಬೋಧಿ ವೃಕ್ಷವಿರುವ ಬೌದ್ಧ ದೇವಾಲಯಕ್ಕೆ ಮೋದಿ ಭೇಟಿ
ಬಿಜೆಪಿ ಮಾಜಿ ರಾಜ್ಯಾಧ್ಯಕ್ಷರ ಪರವಾಗಿ ಹಾಲಿ ಕಾಂಗ್ರೆಸ್ ಅಧ್ಯಕ್ಷ ಪ್ರಾರ್ಥನೆ
ಬಿಜೆಪಿ ಮಾಜಿ ರಾಜ್ಯಾಧ್ಯಕ್ಷರ ಪರವಾಗಿ ಹಾಲಿ ಕಾಂಗ್ರೆಸ್ ಅಧ್ಯಕ್ಷ ಪ್ರಾರ್ಥನೆ
ಬೆಂಗಳೂರಿನಲ್ಲಿ ಟಿವಿ9 ಶಿಕ್ಷಣ ಮೇಳಕ್ಕೆ ಭರ್ಜರಿ ಪ್ರತಿಕ್ರಿಯೆ
ಬೆಂಗಳೂರಿನಲ್ಲಿ ಟಿವಿ9 ಶಿಕ್ಷಣ ಮೇಳಕ್ಕೆ ಭರ್ಜರಿ ಪ್ರತಿಕ್ರಿಯೆ
ಪರೀಕ್ಷೆಯ ನಂತರದ ಗೊಂದಲ ನಿವಾರಣೆ, ಸರಿಯಾದ ಕೋರ್ಸ್​ ಆಯ್ಕೆ ಹೇಗೆ?
ಪರೀಕ್ಷೆಯ ನಂತರದ ಗೊಂದಲ ನಿವಾರಣೆ, ಸರಿಯಾದ ಕೋರ್ಸ್​ ಆಯ್ಕೆ ಹೇಗೆ?