ನಾನು ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಇದ್ದೀನಿ: ಸಂಚಲನ ಮೂಡಿಸಿದ ಪ್ರತಾಪ್ ಸಿಂಹ ಹೇಳಿಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 09, 2024 | 10:01 PM

ಹಾಸನದಲ್ಲಿ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಮಾಧ್ಯಮದವರೊಂದಿಗೆ ಮಾತನಾಡಿದ್ದು, ನಾನು ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಇದ್ದೇನೆ ಎಂದು ಹೇಳಿದ್ದಾರೆ. ಆ ಮೂಲಕ ಅವರ ಹೇಳಿಕೆ ಸದ್ಯ ಸಂಚಲನ ಮೂಡಿಸಿದೆ. ಅಷ್ಟೇ ಅಲ್ಲದೇ ಹಿರಿಯ ನಾಯಕರ ಅಡ್ಜೆಸ್ಟ್​ಮೆಂಟ್​ ರಾಜಕಾರಣದ ವಿರುದ್ಧ ಮತ್ತೆ ಘರ್ಜಿಸಿದ್ದಾರೆ.

ನಾನು ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಇದ್ದೀನಿ: ಸಂಚಲನ ಮೂಡಿಸಿದ ಪ್ರತಾಪ್ ಸಿಂಹ ಹೇಳಿಕೆ
ನಾನು ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಇದ್ದೀನಿ: ಸಂಚಲನ ಮೂಡಿಸಿದ ಪ್ರತಾಪ್ ಸಿಂಹ ಹೇಳಿಕೆ
Follow us on

ಹಾಸನ, ಸೆಪ್ಟೆಂಬರ್​ 09: ನಾನು ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಇದ್ದೇನೆ. ಮೈಸೂರು ನನ್ನ ಕರ್ಮಭೂಮಿ, ಅಲ್ಲೇ ಇರುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಹೋಗಬೇಡ ಎಂದರೆ, ಇಲ್ಲೇ ಇರು ಎಂದರ್ಥ ಎಂದು ಹೇಳಿದ್ದಾರೆ.

ಅಡ್ಜೆಸ್ಟ್​ಮೆಂಟ್​ ರಾಜಕಾರಣದ ವಿರುದ್ಧ ಮತ್ತೆ ಘರ್ಜಿಸಿದ ಸಿಂಹ

ನಾನು ಆ ಪಕ್ಷ, ಈ ಪಕ್ಷ ಅಂಥ ಹೇಳುತ್ತಿಲ್ಲ. ಎಲ್ಲಾ ಪಕ್ಷದ ಹಿರಿಯ ನಾಯಕರು ಹೊಂದಾಣಿಕೆ ರಾಜಕೀಯದಲ್ಲಿ ಇದ್ದಾರೆ. ಇಲ್ಲ ಎಂದರೆ ಮುಡಾದಲ್ಲಿ ಬಿಜೆಪಿ-ಜೆಡಿಎಸ್​ನವರದ್ದು ಇದೆ ಎಂದು ಹೇಳುತ್ತಾರೆ. ಕಾಂಗ್ರೆಸ್‌ನವರು ಏಕೆ ಬಿಡಿತ್ತಿಲ್ಲ. ಅವರು ಮಾಡಿರುವ ಆರೋಪಗಳಿಗೆ ಕಾಂಗ್ರೆಸ್‌ನವರು ಒಂದು ಸಾಕ್ಷಿನಾದರೂ ಕೊಟ್ಟಿದ್ದಾರಾ? ತನಿಖಾ ಏಜೆನ್ಸಿ ಅವರ ಹತ್ತಿರವೇ ಇದೆ. ಆಡಳಿತ, ಪೊಲೀಸ್ ವ್ಯವಸ್ಥೆ ಅವರ ಬಳಿಯೇ ಇದೆ. 40% ಹಗರಣದ ಬಗ್ಗೆ ತನಿಖೆ ಮಾಡಿಸಿ. ಪಿಎಸ್‌ಐ ಹಗರಣದ ಬಗ್ಗೆ ಏಕೆ ತನಿಖೆ ಮಾಡಿಸುತ್ತಿಲ್ಲ. ಪ್ರೀಯಾಂಕ್ ಖರ್ಗೆ ನನ್ನ ಹತ್ರ ದಾಖಲೆ‌ ಇದೆ ಅಂತ ಹೇಳಿಕೆ‌ ಕೊಟ್ಟಿದ್ರಲ್ಲಾ ಕೊಡಪ್ಪ ಇವಾಗ. ಇಟ್ಟುಕೊಂಡು ಏನು ಮಾಡುತ್ತಿದ್ದೀರಾ ನೀವು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ಸಿಎಂ ಮತ್ತೆ ನಿರಾಳ, ಹೈಕೋರ್ಟ್‌ನಲ್ಲಿ ಇಂದಿನ ವಾದ-ಪ್ರತಿವಾದ ಹೇಗಿತ್ತು? ಇಲ್ಲಿದೆ ವಿವರ

ಕರ್ನಾಟಕ ಸರ್ಕಾರವೇ ನಿಮ್ಮ ಕೈಯಲ್ಲಿ ಇದೆ. ಯಾವ್ಯಾವ ಹಗರಣದ ಇದೆ ಎಲ್ಲಾ ತೆಗೆದುಕೊಂಡು ಬನ್ನಿ. ಹಿರಿಯ ರಾಜಕಾರಣಿಗಳು ಏನಿದ್ದೀರಿ ಒಬ್ಬಬ್ಬರನ್ನು ಒಬ್ಬೊಬ್ಬರು ಎಕ್ಸ್‌ಪೋಸ್ ಮಾಡಿಕೊಳ್ಳಿ. ಕನಿಷ್ಠ ಮುಂದಿನ ತಲೆಮಾರಿಗಾದರೂ ಒಳ್ಳೆಯ ರಾಜಕಾರಣಿಗಳು ಬರಲು ಅವಕಾಶ ಆಗುತ್ತೆ ಎಂದು ಗುಡುಗಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ನನಗೆ ಗೊತ್ತಿಲ್ಲ

ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ನನಗೆ ಗೊತ್ತಿಲ್ಲ. ಕಾಂಗ್ರೆಸ್​ನ ತೀರ್ಮಾನ ಏನು ಅಂತ ನನಗೆ ಗೊತ್ತಿಲ್ಲ. ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರೆ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿಯಬೇಕಾಗುತ್ತೆ. ನ್ಯಾಯಾಲಯದ ತೀರ್ಮಾನ ಏನಾಗುತ್ತೋ ಗೊತ್ತಿಲ್ಲ. ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬಹುದು. ಅದನ್ನು ಬಿಟ್ಟು ಕಾನೂನಿನಲ್ಲಿ ಒತ್ತಾಯ ಮಾಡಲಾಗಲ್ಲ ಎಂದಿದ್ದಾರೆ.

ಇದನ್ನೂ ಓದಿ: ಮುಡಾದಲ್ಲಿ ಮತ್ತೊಂದು ಹಗರಣ: ಮಾಜಿ ಅಧ್ಯಕ್ಷನ ವಿರುದ್ಧ ಗಂಭೀರ ಆರೋಪ

ಈಗ ಕೇಜ್ರಿವಾಲ್​ ಜೈಲಿನಿಂದ ಆಡಳಿತ ನಡೆಸುತ್ತಿದ್ದಾರೆ. ಇಂತರ ಕೆಟ್ಟ ಉದಾಹರಣೆಗಳಿವೆ. ನ್ಯಾಯಾಲಯ ಪ್ರಾಸಿಕ್ಯೂಷನ್‌ಗೆ ಅವಕಾಶ ಕೊಟ್ಟರೆ ಯಾವ ಮೇಲ್ಪಂಕ್ತಿ ಹಾಕಿಕೊಡ್ತಾರೆ ಎನ್ನುವುದರ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರದ ಭವಿಷ್ಯ ನಿಂತಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.