ಬ್ರೆಡ್ಗೆ ಬೆಣ್ಣೆ ಹಚ್ಚೋದು ಹೇಗೆಂದು ಜೂನಿಯರ್ ಖರ್ಗೆಗೆ ಗೊತ್ತಿದೆ: ಲಹರ್ ಸಿಂಗ್ ಲೇವಡಿ
Lahar Singh: Is Priyank Kharge Criticizing RSS for Karnataka CM Post? ಪ್ರಿಯಾಂಕ್ ಖರ್ಗೆ ಅವರು ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗಿಂತ ಹೆಚ್ಚು ಸೈದ್ದಾಂತಿಕ ನಿಷ್ಠೆ ತೋರುತ್ತಿದ್ದಾರೆ ಎಂದು ಲೆಹರ್ ಸಿಂಗ್ ಹೇಳಿದ್ದಾರೆ. ಆರೆಸ್ಸೆಸ್ ವಿರುದ್ಧ ನಿರಂತರವಾಗಿ ಅವರು ಟೀಕೆ ಮಾಡುತ್ತಿರುವುದು ಯಾಕೆಂದು ಲಹರ್ ಸಿಂಗ್ ಕಾರಣ ಬಿಚ್ಚಿಟ್ಟಿದ್ದಾರೆ. ಸಿದ್ದರಾಮಯ್ಯ ಕುರ್ಚಿಯಿಂದ ಕೆಳಗಿಳಿದಾಗ ಆ ಸ್ಥಾನ ತನಗೆ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಖರ್ಗೆ ಇದ್ದಾರೆಂದು ಬಿಜೆಪಿ ಸಂಸದ ಹೇಳಿದ್ದಾರೆ.

ಬೆಂಗಳೂರು, ಅಕ್ಟೋಬರ್ 19: ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ನಿರಂತರವಾಗಿ ಆರೆಸ್ಸೆಸ್ ಅನ್ನು ಟೀಕಿಸುತ್ತಿರುವುದಕ್ಕೆ ಕಾರಣ ಏನೆಂದು ತನಗೆ ಗೊತ್ತು ಎಂದು ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ (Lahar Singh Siroya) ಹೇಳಿದ್ದಾರೆ. ರಾಹುಲ್ ಗಾಂಧಿಗೆ ಇಷ್ಟವಾಗುವ ರೀತಿಯಲ್ಲಿ ಪ್ರಿಯಾಂಕ್ ಖರ್ಗೆ ನಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿ.ಕೆ.ಶಿವಕುಮಾರ್ ಅಥವಾ ಡಾ.ಪರಮೇಶ್ವರ್ ಅವರಿಗಿಂತ ಜೂನಿಯರ್ ಖರ್ಗೆ ಹೆಚ್ಚು ನಿಷ್ಠೆ ತೋರುತ್ತಿರುವುದರ ಹಿಂದೆ ದೊಡ್ಡ ಕಾರಣ ಇರಬೇಕು ಎಂದು ಹೇಳಿರುವ ಲೆಹರ್ ಸಿಂಗ್, ಹೈಕಮಾಂಡ್ ತನ್ನನ್ನು ಸಿಎಂ ಮಾಡುವ ನಿರೀಕ್ಷೆಯಲ್ಲಿ ಪ್ರಿಯಾಂಕ್ ಖರ್ಗೆ ಈ ವರ್ತನೆ ತೋರುತ್ತಿರಬಹುದು ಎಂದು ಶಂಕಿಸಿದ್ದಾರೆ.
ತಮ್ಮ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಹಾಕಿರುವ ಲಹರ್ ಸಿಂಗ್, ಮುಖ್ಯಮಂತ್ರಿಯಾಗಲು ಪ್ರಯತ್ನಿಸಿದರೆ, ಕನಿಷ್ಠ ಪಕ್ಷ ಉಪಮುಖ್ಯಮಂತ್ರಿಯಾದರೂ ಆಗಬಹುದು ಎಂಬುದು ಖರ್ಗೆ ಜೂನಿಯರ್ಗೆ ತಿಳಿದಿದೆ ಎಂದು ಲೇವಡಿ ಮಾಡಿದ್ದಾರೆ. ಲಹರ್ ಸಿಂಗ್ ಅವರ ಎಕ್ಸ್ ಪೋಸ್ಟ್ನ ಲಿಂಕ್ ಈ ವರದಿಯ ಮುಂದಿನ ಭಾಗದಲ್ಲಿದೆ.
“ಜೂನಿಯರ್ ಖರ್ಗೆಯವರಾದ ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕದಲ್ಲಿ ಸಾಕಷ್ಟು ಗದ್ದಲ ಎಬ್ಬಿಸುತ್ತಿದ್ದಾರೆ. ಅವರು ಪ್ರತಿದಿನ ಆರ್.ಎಸ್.ಎಸ್ ಬಗ್ಗೆ ಪತ್ರಗಳನ್ನು ಬರೆಯುತ್ತಾ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದ್ದಕ್ಕಿದ್ದಂತೆ ಅವರು ಈ ಎಲ್ಲವನ್ನು ಮಾಡಲು ಪ್ರಾರಂಭಿಸಿದ್ದರ ಹಿಂದೆ ದೊಡ್ಡ ಕಾರಣವೇ ಇರಬೇಕು.
ಇದನ್ನೂ ಓದಿ: ಕಲಬುರಗಿಯಲ್ಲಿ RSSಗೆ ಶಾಕ್ ಮೇಲೆ ಶಾಕ್: ಸೇಡಂ, ಕುಮ್ಮನ ಶಿರಸಗಿಯಲ್ಲೂ ಪಥಸಂಚಲನಕ್ಕೆ ಬ್ರೇಕ್
“ಕರ್ನಾಟಕದ ರಾಜಕೀಯ ವಲಯದಲ್ಲಿ ಅಧಿಕಾರ ಹಸ್ತಾಂತರ ಕುರಿತಂತೆ ಮಾತುಗಳು ಜೋರಾಗಿ ಕೇಳಿ ಬರುತ್ತಿರುವಾಗ, ಖರ್ಗೆ ಜೂನಿಯರ್ ಹೆಚ್ಚುವರಿ ಸೈದ್ಧಾಂತಿಕತೆಯನ್ನು ಪ್ರದರ್ಶಿಸುತ್ತಿದ್ದು, ಅವರ ತಂದೆ ಮಲ್ಲಿಕಾರ್ಜುನ ಖರ್ಗೆಯವರಿಗಿಂತಲೂ ಹೆಚ್ಚು ಸೈದ್ಧಾಂತಿಕರಾಗಿ ಕಾಣಲು ಪ್ರಾರಂಭಿಸಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಏನು ಇಷ್ಟವಾಗುತ್ತದೆ ಎನ್ನುವುದು ಅವರಿಗೆ ಚೆನ್ನಾಗಿ ತಿಳಿದಿದೆ. ಯಾವ ಬದಿಯಲ್ಲಿ ಬ್ರೆಡ್ಗೆ ಬೆಣ್ಣೆ ಹಚ್ಚಬೇಕು ಎನ್ನುವುದನ್ನು ಸರಿಯಾಗಿ ತಿಳಿದುಕೊಂಡಿದ್ದಾರೆ. ಅಧಿಕಾರಕ್ಕಾಗಿ ಪೈಪೋಟಿ ನಡೆದಿರುವಾಗ, ಅವರ ತಂದೆಯವರನ್ನು ಹೊರತುಪಡಿಸಿದ, ಕಾಂಗ್ರೆಸ್ಸಿನ ನಿಜವಾದ ಹೈಕಮಾಂಡ್ ಅನ್ನು ಮೆಚ್ಚಿಸಬೇಕೆಂದರೆ, ಆರ್.ಎಸ್.ಎಸ್ ಅನ್ನು ಬಲವಾಗಿ ಟೀಕಿಸುವುದೇ ಉತ್ತಮ ಮಾರ್ಗ ಎಂದು ಅವರು ತಿಳಿದಂತೆ ಕಾಣುತ್ತಿದೆ” ಎಂದು ಲಹರ್ ಸಿಂಗ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಅಭಿಪ್ರಾಯಪಟ್ಟಿದ್ದಾರೆ
ಸಿದ್ದರಾಮಯ್ಯ, ಡಿಕೆಶಿಗಿಂತಲೂ ಹೆಚ್ಚು ನಿಷ್ಠೆ ತೋರುತ್ತಿರುವ ಜೂ. ಖರ್ಗೆ
“ಆರ್.ಎಸ್.ಎಸ್ ವಿರುದ್ಧ ವಾಗ್ಧಾಳಿ ನಡೆಸುವ ಮೂಲಕ, ಖರ್ಗೆ ಜೂನಿಯರ್ ಅವರು ರಾಹುಲ್ ಗಾಂಧಿಯವರ ಚಿಂತನೆ ಮತ್ತು ಆಲೋಚನಾ ಪ್ರಕ್ರಿಯೆಗಳಿಗೆ ಬಹಳ ಹತ್ತಿರವಿದ್ದಂತೆ ಕಾಣುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಡಾ. ಜಿ. ಪರಮೇಶ್ವರ್, ಎಚ್.ಕೆ.ಪಾಟೀಲ್ ಮತ್ತು ಕೃಷ್ಣಬೈರೇಗೌಡ ಸೇರಿದಂತೆ ಕರ್ನಾಟಕದ ಇತರ ಯಾವುದೇ ಕಾಂಗ್ರೆಸ್ ನಾಯಕರಿಗಿಂತ ಹೆಚ್ಚು ನಿಷ್ಠರಾಗಿ ಅವರು ಹೊರಹೊಮ್ಮಿದ್ದಾರೆ” ಎಂದು ಬಿಜೆಪಿಯ ರಾಜ್ಯಸಭಾ ಸಂಸದರು ತಿಳಿಸಿದ್ದಾರೆ.
ಇದನ್ನೂ ಓದಿ: ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನ ಜಟಾಪಟಿ: ಮಹತ್ವದ ಸೂಚನೆ ನೀಡಿದ ಹೈಕೋರ್ಟ್
ಸಿದ್ದರಾಮಯ್ಯ ನಂತರದ ಸಿಎಂ ಸ್ಥಾನದ ಮೇಲೆ ಜೂ. ಖರ್ಗೆ ಕಣ್ಣು?
“ಖರ್ಗೆ ಜೂನಿಯರ್ ಅವರ ಉತ್ಸಾಹ, ಅವರ ಹೆಚ್ಚುವರಿ ಸೈದ್ಧಾಂತಿಕ ನಿಷ್ಠೆಯನ್ನು ಗಮನಿಸಿ, ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಉತ್ತಮ ಪ್ರತಿಫಲ ನೀಡಲಿದೆ. ಸಿದ್ದರಾಮಯ್ಯನವರು ಸದ್ಯೋಭವಿಷ್ಯದಲ್ಲಿ (ನವೆಂಬರ್?) ಕೆಳಗೆ ಇಳಿದ ನಂತರ, ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆ ಎಂದು ನಾನು ಭಾವಿಸಿದ್ದೇನೆ. ಏನಾದರಾಗಲಿ, ಕರ್ನಾಟಕ ರಾಜಕೀಯದಲ್ಲಿ ಸುದೀರ್ಘ ಕಾಲದಿಂದ ಇದ್ದರೂ ಖರ್ಗೆ ಸೀನಿಯರ್ ಅವರಿಗೆ ಕುರ್ಚಿ ಸಿಕಿಲ್ಲ. ಕನಿಷ್ಠ, ಅವರ ಮಗನಿಗಾದರೂ ನಷ್ಟ ಪರಿಹಾರ ನೀಡಬೇಕು. ಕಾಂಗ್ರೆಸ್‌ನಂತಹ ವಂಶರಾಜಕಾರಣದ ಪಕ್ಷದಲ್ಲಿ ಅದು ಬಹಳ ಸೂಕ್ತ ನಿರೀಕ್ಷೆಯೂ ಆಗಿದೆ. ಅಲ್ಲದೆ, ಮುಖ್ಯಮಂತ್ರಿಯಾಗಲು ಪ್ರಯತ್ನಿಸಿದರೆ, ಕನಿಷ್ಠ ಉಪಮುಖ್ಯಮಂತ್ರಿಯಾದರೂ ಆಗಬಹುದು ಎನ್ನುವುದು ಖರ್ಗೆ ಜೂನಿಯರ್ ಅವರಿಗೆ ತಿಳಿದಿದೆ” ಎಂದು ಲಹರ್ ಸಿಂಗ್ ವ್ಯಂಗ್ಯ ಮಾಡಿದ್ದಾರೆ.
ಲಹರ್ ಸಿಂಗ್ ಅವರ ಎಕ್ಸ್ ಪೋಸ್ಟ್
Kharge Jr., Shri @PriyankKharge, is making a lot of noise in Karnataka. He has been writing letters and making provocative statements on the #RSS everyday. He started doing this all of a sudden and there may be a good reason for this.
When regime change within the Congress is…
— Lahar Singh Siroya (@LaharSingh_MP) October 19, 2025
ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಬೇಕು. ಸರ್ಕಾರಿ ಜಾಗಗಳಲ್ಲಿ ಆರೆಸ್ಸೆಸ್ ಕಾರ್ಯಕ್ರಮಗಳಿಗೆ ಅನುಮತಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಲು ಸಾಲು ಪತ್ರಗಳನ್ನು ಬರೆದಿದ್ದಾರೆ. ಈ ವಿಷಯವಾಗಿ ಲಹರ್ ಸಿಂಗ್ ಸಿರೋಯಾ ಈ ಪೋಸ್ಟ್ ಹಾಕಿ ಲೇವಡಿ ಮಾಡಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




