ವಿಜಯಪುರ: ಹಿರಿಯ IAS ಅಧಿಕಾರಿ, KSRP ADGP ಅಲೋಕ್ ಕುಮಾರ್ ಅವರು ವೇದಿಕೆಯ ಮೇಲೆ ಹಾಡು ಹಾಡಿದ್ದು, ಅದರ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೊರವಲಯದಲ್ಲಿರುವ ಅರಕೇರಿ ಬಳಿಯ ಐಆರ್ಬಿ ಬೆಟಾಲಿಯನ್ನಲ್ಲಿ ಕಳೆದ ಜನವರಿ 6ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಲೋಕ್ ಕುಮಾರ್ ಹಾಡಿದ್ದರು. ಹಿಂದಿಯ ಖ್ಯಾತ ಗಾಯಕ ಕಿಶೋರ್ ಕುಮಾರ್ ಹಾಡಿದ್ದ, ಪ್ರೇಮ್ ಪೂಜಾರಿ ಚಿತ್ರದ ಗೀತೆ ಹಾಡೊಂದನ್ನು ಮಧುರವಾಗಿ ಹಾಡಿದ್ದರು. ಈ ವಿಡಿಯೋ ಈಗ ವೈರಲ್ ಆಗಿದೆ. ಖಡಕ್ ಅಧಿಕಾರಿಯ ಮಧುರ ಗಾಯನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published On - 11:29 am, Sat, 9 January 21