ಬೆಂಗಳೂರು: ನಾನು ಹಿರಿತನದ ಆಧಾರದ ಮೇಲೆ ಹಾಗೆ ಹೇಳಿದ್ದೆ. ಅವರಿಗೆ (ರೈತ ಮಹಿಳೆಗೆ) ಬೇಸರ ಆದರೆ ನಾನು ಕೂಡ ಕ್ಷಮೆ ಕೇಳ್ತೇನೆ. ಸಿಎಂ ಕೇಳಿದ್ರೂ ನಾನು ಅವರಿಗೆ ನಡೆದ ಘಟನೆಯನ್ನೇ ಹೇಳ್ತೀನಿ. ರಾಜೀನಾಮೆ ಕೊಡು ಅಂದ್ರೂ ಕೊಡ್ತೀನಿ. ಸ್ವಾಭಿಮಾನಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದು ನಿನ್ನೆ ಕೋಲಾರದಲ್ಲಿ ನಡೆದಿರುವ ಅಹಿತಕರ ಘಟನೆ ಬಗ್ಗೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ಅಸೆಂಬ್ಲಿಯಲ್ಲಿ ಕೋಲಾರಕ್ಕೆ ನೀರಿನ ವಿಚಾರ ಚರ್ಚೆ ಬಂದಿತ್ತು. ಈ ವಿಚಾರದ ಬಗ್ಗೆ ಅಲ್ಲಿ ಚರ್ಚೆ ಮಾಡ್ತಾ ಇದ್ವಿ. ಕೆರೆಯಲ್ಲಿ ಜಾಲಿ ಗಿಡಗಳಿವೆ. ಅದನ್ನ ಕ್ಲಿಯರ್ ಮಾಡಿಸಿ ಅಂದ್ರು. ಈ ಸಂದರ್ಭದಲ್ಲಿ ಜನ ಬಂದ್ರು. ಸುತ್ತಲೂ ಜನ ಇದ್ರು. ಎಸ್. ಅಗ್ರಹಾರ ಕೆರೆ ಹತ್ರ ಹೆಣ್ಣುಮಕ್ಕಳು ಇದ್ರು. ತಮ್ಮ ಕಷ್ಟ ಹೇಳ್ತಾ ಇದ್ರು. ನಮ್ ಸೆಕ್ರೆಟರಿ ಕೂಡ ಉತ್ತರ ಕೊಡ್ತಾ ಇದ್ರು. ಎಲ್ಲಾ ರೀತಿಯಲ್ಲೂ ಉತ್ತರ ಕೊಡ್ತಾ ಇದ್ದೆ. ಆದರೂ ಕೂಡ ಅವರು ನಮ್ಮ ಮೇಲೆ ಏರು ದನಿಯಲ್ಲಿ ಮಾತನಾಡ್ತಾ ಇದ್ರು. ನಮಗೆ ಆದೇಶ ಕೊಡೋ ರೀತಿ ಮಾತನಾಡ ಬೇಡಿ ಎಂದಿ ಸೂಚ್ಯವಾಗಿ ಹೇಳಿದ್ದಾಗಿ ಸಚಿವ ಮಾಧುಸ್ವಾಮಿ ಘಟನೆಯ ವೃತ್ತಾಂತವನ್ನು ಬಿಡಿಸಿ ಹೇಳಿದ್ದಾರೆ.
ಈ ವೇಳೆ ಮುಚ್ಚು ಬಾಯಿ ರಾಸ್ಕಲ್ ಎಂದಿದ್ದು ನಿಜ. ಹಿರಿತನದ ಆಧಾರದ ಮೇಲೆ ನಾನು ಹಾಗೆ ಹೇಳಿದ್ದೆ. ಅವರಿಗೆ ಬೇಸರ ಆದರೆ ನಾನು ಕೂಡ ಕ್ಷಮೆ ಕೇಳ್ತೇನೆ. ಸಿಎಂ ಕೇಳಿದ್ರೂ ನಾನು ಅವರಿಗೆ ನಡೆದ ಘಟನೆಯನ್ನೇ ಹೇಳ್ತಿನಿ. ರಾಜೀನಾಮೆ ಕೊಡು ಅಂದ್ರೆ ಕೊಡ್ತಿನಿ. ಸ್ವಾಭಿಮಾನಕ್ಕಿಂತ ದೊಡ್ಡದು ಯಾವುದೂ ಇಲ್ಲ. ಸಿದ್ದರಾಮಯ್ಯ ರಾಜೀನಾಮೆ ಕೊಡೋದಿಕ್ಕೆ ಹೇಳಿದ್ದಾರಂತೆ. ಅವರಲ್ಲ ನನ್ನನ್ನು ಮಿನಿಸ್ಟರ್ ಮಾಡಿರುವುದು. ಯಡಿಯೂರಪ್ಪ ಕೇಳಿದ್ರೆ ಕೊಡ್ತೀನಿ ಎಂದು ಸೂಚ್ಯವಾಗಿ ಸಚಿವ ಮಾಧುಸ್ವಾಮಿ ಸುದ್ದಿಗಾರರ ಬಳಿ ಹೇಳಿದರು.