AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉರ್ದು ಹಾಗೂ ಅರೇಬಿಕ್ ಶಾಲೆಗಳಲ್ಲಿ ಅಕ್ರಮದ ಆರೋಪ; ಹಿಂದೂ ಸಂಘಟನೆಗಳ ಸಮರ

ವಿದ್ಯಾ ದೇಗುಲದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಧರ್ಮ ವಿವಾದ ಇದೀಗ ಬೇರೆ ಸ್ವರೂಪ ಪಡೆದುಕೊಂಡಿದೆ. ಉರ್ದು ಶಾಲೆ ಹಾಗೂ ಅರೇಬಿಕ್ ಶಾಲೆಗಳಲ್ಲಿ ಅಕ್ರಮ ನಡೆಯುತ್ತಿರುವ ಆರೋಪ ಕೇಳಿ ಬಂದಿದ್ದು ಹಿಂದೂ ಸಂಘಟನೆಗಳು ಹೊಸ ಡಿಮ್ಯಾಂಡ್ ಶುರು ಮಾಡಿವೆ.

ಉರ್ದು ಹಾಗೂ ಅರೇಬಿಕ್ ಶಾಲೆಗಳಲ್ಲಿ ಅಕ್ರಮದ ಆರೋಪ; ಹಿಂದೂ ಸಂಘಟನೆಗಳ ಸಮರ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Mar 28, 2023 | 11:08 PM

ಬೆಂಗಳೂರು: ವಿದ್ಯಾ ದೇಗುಲದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಧರ್ಮ ವಿವಾದ ಇದೀಗ ಬೇರೆ ಸ್ವರೂಪ ಪಡೆದುಕೊಂಡಿದೆ. ಉರ್ದು ಶಾಲೆ ಹಾಗೂ ಅರೇಬಿಕ್ ಶಾಲೆಗಳಲ್ಲಿ (Arabic and Urdu schools) ಅಕ್ರಮ ನಡೆಯುತ್ತಿರುವ ಆರೋಪ ಕೇಳಿ ಬಂದಿದ್ದು ಹಿಂದೂ ಸಂಘಟನೆಗಳು ಹೊಸ ಡಿಮ್ಯಾಂಡ್ ಶುರು ಮಾಡಿವೆ. ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಇಲ್ಲದೆ ಇದ್ರೂ, ಮಕ್ಕಳು ಶಾಲೆಗೆ ಹಾಜರಾಗದೆ ಗೈರಾದ್ರೂ ಶಿಕ್ಷಣ ಇಲಾಖೆಗೆ ಸುಳ್ಳು ದಾಖಲಾತಿ ನೀಡಿ ವಂಚನೆ ಮಾಡ್ತಿವೆಯಾ ಉರ್ದು ಹಾಗೂ ಅರೇಬಿಕ್ ಶಾಲೆಗಳು? ಸುಳ್ಳು ಮಾಹಿತಿ ನೀಡಿ ಕೋಟಿ ಕೋಟಿ ಹಣ ಸುಲಿಗಗೆ ಮುಂದಾಗಿವೆಯಾ ಶಾಲೆಗಳು? ಆರೇಬಿಕ್ ಹಾಗೂ ಉರ್ದು ಶಾಲೆಗಳ ವಿರುದ್ಧ ಹಿಂದೂ ಸಂಘಟನೆಗಳಿಂದ ಈ ಆರೋಪ ಕೇಳಿ ಬಂದಿದೆ.

ಸುಳ್ಳು ದಾಖಲಾತಿ ನೀಡಿ ವಂಚನೆ ಮಾಡ್ತಿವೆಯಾ ಉರ್ದು ಹಾಗೂ ಅರೇಬಿಕ್ ಶಾಲೆಗಳು?

ರಾಜ್ಯದ ಉರ್ದು ಹಾಗೂ ಅರೇಬಿಕ್ ಶಾಲೆಗಳು ಕಳ್ಳಾಟ ಮಾಡ್ತಿವೆ ಎಂದು ಆರೋಪಿಸಿ  ಹಿಂದೂ ಸಂಘಟನೆಗಳು ಶಿಕ್ಷಣ ಇಲಾಖೆಗೆ  ದೂರು ನೀಡಿವೆ. ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಉರ್ದು ಹಾಗೂ ಆರೇಬಿಕ ಶಾಲೆಗಳು ಮುಸ್ಲಿಂತರ ಹಿಂದೂ ಶಿಕ್ಷಕರಿಗೆ ಟಾರ್ಚ್ ಕೊಡುತ್ತಿವೆ. ಶಾಲೆಗೆ ಮಕ್ಕಳು ಬರ್ದೆ ಇದ್ರು ಸುಳ್ಳು ಹಾಜರಾತಿ ಹಾಕುವಂತೆ ಒತ್ತಡ ಹಾಕುತ್ತಿದ್ದಾರೆ. ಸುಳ್ಳು ಹಾಜರಾತಿ ಹಾಕದ ಹಿಂದೂ ಶಿಕ್ಷಕರಿಗೆ ಹಿಂಸೆ ನೀಡಲು ಮುಂದಾಗಿವೆಯಂತೆ. ಮಕ್ಕಳು ಶಾಲೆಗೆ ಬರದೆ ಇದ್ರೂ ಸುಳ್ಳು ದಾಖಲಾತಿ ಹಾಗೂ ಹಾಜರಾತಿ ಮೂಲಕ ಶಿಕ್ಷಣ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಕೋಟಿ ಕೋಟಿ ಸುಲಿಗೆಗೆ ಮುಂದಾಗಿರೊ ಬಗ್ಗೆ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ತಲೆ ಎತ್ತಿವೆ ಸಾವಿರಾರು ಅನಧಿಕೃತ ಶಾಲೆಗಳು; 1645 ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಖಡಕ್ ಎಚ್ಚರಿಕೆ

ರಾಜಕೀಯ ಹಾಗೂ ಸಂಘಟನೆಗಳಲ್ಲಿ ಸೀಮಿತವಾಗಿದ್ದ ಧರ್ಮ ದಂಗಲ್. ಕಳೆದ ಒಂದು ವರ್ಷದಿಂದ ಶಾಲೆಗಳಲ್ಲಿ ತಂದಿದ್ದಾರೆ. ವಿದ್ಯಾ ದೇಗುಲದ ಮಕ್ಕಳಲ್ಲಿ ಜಾತಿ, ಧರ್ಮ ವಿಷ ಬೀಜ ಬಿತ್ತಿ ಕುಲಗೇಡಿಸಿದ್ದಾರೆ. ಆದ್ರೀಗ ಮತ್ತೆ ಧರ್ಮ ದಂಗಲ್ ಮುಂದುವರೆದಿದ್ದು, ಉರ್ದು ಹಾಗೂ ಅರೇಬಿಕ್ ಶಾಲೆಗಳಲ್ಲಿ ಕೆಲಸ ಮಾಡುವ ಹಿಂದೂ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ ಹಿಂಸೆ ನೀಡುತ್ತಿರುವ ಆರೋಪ ಕೇಳಿ ಬರ್ತಿದೆ. ದಾವಣಗೇರಿಯ ಸರಕಾರಿ ಉರ್ದು ಕನ್ನಡ ಮಾದ್ಯಮಿಕ ಶಾಲೆಯಲ್ಲಿ ಹಿಂದೂ ಲಿಂಗಾಯತ ಶಿಕ್ಷಕಿ ನಾಗಲಾಂಬಿಕೆಗೆ ಮಕ್ಕಳ ಸುಳ್ಳು ಹಾಜರಾತಿ ಹಾಕಲು ಮುಖ್ಯ ಶಿಕ್ಷಕಿ ರುಮಿನಾಜ್ ನಿಂದ ಹಿಂಸೆ ಕಿರುಕುಳದ ಆರೋಪ ಈಗ ಚರ್ಚೆಗೆ ಕಾರಣವಾಗಿದ್ದು ಈ ಘಟನೆಯ ಬಳಿಕ ಹಲವು ಉರ್ದು ಹಾಗೂ ಅರೇಬಿಕ ಶಾಲೆಗಳಲ್ಲಿ ಇದೇ ರೀತಿಯ ಕಳ್ಳಾಟದ ಬಗ್ಗೆ ಹಿಂದೂ ಸಂಘಟನೆಗಳಿಂದ ಆರೋಪ ಕೇಳಿ ಬಂದಿದ್ದು ಇತರೆ ರಾಜ್ಯಗಳಂತೆ ನಮ್ಮಲ್ಲಿಯೂ ಉರ್ದು ಹಾಗೂ ಅರೇಬಿಕ ಶಾಲೆಗಳನ್ನ ಬಂದ್ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಶಿಕ್ಷಣ ನೀಡುವಂತೆ ಒತ್ತಾಯ ಕೇಳಿ ಬಂದಿದೆ. ಈ ಕುರಿತು ಸಿಎಂ ಹಾಗೂ ಶಿಕ್ಷಣ ಸಚಿವರ ಒತ್ತಾಯಕ್ಕೆ ಮುಂದಾಗಿದ್ದಾರೆ ಹಿಂದೂ ಜನ ಜಾಗೃತಿ ವೇದಿಕೆ ಸಂಚಾಲಕ ಮೋಹನ್ ಗೌಡ

ಒಟ್ಟಿನಲ್ಲಿ ಈ ಹಿಂದೆಯೂ ಉರ್ದು ಹಾಗೂ ಅರೇಬಿಕ್ ಶಾಲೆಗಳ ಈ ಕಳ್ಳಾಟದ ಬಗ್ಗೆ ಶಿಕ್ಷಣ ಇಲಾಖೆಗೆ ದೂರು ಕೇಳಿ ಬಂದಿತ್ತು ಇಲಾಖೆ ಅಧ್ಯಯನಕ್ಕೂ ಮುಂದಾಗಿತ್ತು. ಆದ್ರೆ ಈಗ ಮತ್ತೆ ಈ ಬಗ್ಗೆ ದೂರು ಕೇಳಿ ಬಂದಿದ್ದು ನೊಂದ ಶಿಕ್ಷಕಿ ಕೊರ್ಟ್ ಮೆಟ್ಟಿಲೇರಿದ್ದು ಶಿಕ್ಷಣ ಇಲಾಖೆ ಯಾವ ಕ್ರಮಕ್ಕೆ ಮುಂದಾಗುತ್ತೆ ಅಂತಾ ಕಾದು ನೋಡಬೇಕಿದೆ.

– ವಿನಯಕುಮಾರ್ ಕಾಶಪ್ಪನವರ್, ಟಿವಿ9, ಬೆಂಗಳೂರು

Published On - 7:42 pm, Tue, 28 March 23