ರಾಜ್ಯದಲ್ಲಿ ತಲೆ ಎತ್ತಿವೆ ಸಾವಿರಾರು ಅನಧಿಕೃತ ಶಾಲೆಗಳು; 1645 ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಖಡಕ್ ಎಚ್ಚರಿಕೆ

ರಾಜ್ಯದಲ್ಲಿ ಬರೋಬ್ಬರಿ 1645 ಅನಧಿಕೃತ ಶಾಲೆಗಳು ತಲೆ ಎತ್ತಿವೆ. ಕೆಲ ಶಾಲೆಗಳು ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಕದ್ದು ಮುಚ್ಚಿ ಕ್ಲಾಸ್​ನಲ್ಲಿ CBSE, ICSE ಪಠ್ಯ ಬೋಧಿಸ್ತಿದ್ರೆ, ಮತ್ತೆ ಕೆಲವು ಶಾಲೆಗಳು ಶಿಕ್ಷಣ ಇಲಾಖೆಯ ಅನುಮತಿಯನ್ನೇ ಪಡೆಯದೆ ಶಾಲೆ ನಡೆಸುತ್ತಿವೆ.

ರಾಜ್ಯದಲ್ಲಿ ತಲೆ ಎತ್ತಿವೆ ಸಾವಿರಾರು ಅನಧಿಕೃತ ಶಾಲೆಗಳು; 1645 ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಖಡಕ್ ಎಚ್ಚರಿಕೆ
ಬಿಸಿ ನಾಗೇಶ್ (ಸಂಗ್ರಹ ಚಿತ್ರ)
Follow us
ಆಯೇಷಾ ಬಾನು
|

Updated on: Mar 27, 2023 | 10:13 AM

ಬೆಂಗಳೂರು: ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಐಎಎಸ್, ಐಪಿಎಸ್ ಹುದ್ದೆಗೇರಿಸಬೇಕು ಅಂತಾ ಅದೇಷ್ಟೋ ಪೋಷಕರು ಹಗಲಿರಳು ಕಷ್ಟಪಟ್ಟು ದುಡಿದು ಲಕ್ಷ ಲಕ್ಷ ಶುಲ್ಕ ಕಟ್ಟಿ ಓದಿಸುತ್ತಾರೆ. ಮಕ್ಕಳನ್ನ ಹೈಟೆಕ್ ಶಾಲೆ ಸಿಬಿಎಸ್ಇ ಸಿಲೆಬಸ್ ಅಂದ್ರೆ ಹಿಂದೆ ಮುಂದೆ ನೋಡ್ದೆ ಪ್ರತಿಷ್ಠತೆಯನ್ನೇ ಪಣಕ್ಕಿಟ್ಟು ಮಕ್ಕಳ ದಾಖಲಾತಿ ಮಾಡಿಸ್ತಾರೆ. ಆದ್ರೆ ಲಕ್ಷ ಲಕ್ಷ ಶುಲ್ಕ ಕಟ್ಟಿಸಿಕೊಂಡ ಶಾಲೆಗಳು ಕಳ್ಳಾಟಕ್ಕೆ ಮುಂದಾಗಿವೆ. ಹೀಗಾಗಿ ರಾಜ್ಯದಲ್ಲಿ ತಲೆ ಎತ್ತಿರುವ ಸಾವಿರಾರು ಅನಧಿಕೃತ ಶಾಲೆಗಳಿಗೆ ಶಿಕ್ಷಣ ಇಲಾಖೆ ಖಡಕ್ ಎಚ್ಚರಿಕೆ ಕೊಟ್ಟಿದೆ.

1645 ಶಾಲೆಗಳಿಗೆ ಶಿಕ್ಷಣ ಇಲಾಖೆ ಖಡಕ್ ವಾರ್ನಿಂಗ್

ಸಿಟಿಯಲ್ಲಿ ಆರ್ಕಿಡ್ ಶಾಲೆಗಳ ಕರ್ಮಕಾಂಡ ಹೊರ ಬರ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತಿತ್ತು. ಶಾಲೆಗಳ ಕಳ್ಳಾಟ ಬಯಲಿಗೆಳೆಯಲು 3 ಸದಸ್ಯರ ಸಮಿತಿ ರಚಿಸಿ, ತನಿಖೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಈಗ ಸಮಿತಿಯ ವರದಿ ಹೊರಬಂದಿದ್ದು, ಖಾಸಗಿ ಶಾಲೆಗಳ ಕಳ್ಳಾಟವು ಬಯಲಾಗಿದೆ. ಒಂದಲ್ಲ, ಎರಡಲ್ಲ ರಾಜ್ಯದಲ್ಲಿ ಬರೋಬ್ಬರಿ 1645 ಅನಧಿಕೃತ ಶಾಲೆಗಳು ತಲೆ ಎತ್ತಿವೆ. ಕೆಲ ಶಾಲೆಗಳು ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಕದ್ದು ಮುಚ್ಚಿ ಕ್ಲಾಸ್​ನಲ್ಲಿ CBSE, ICSE ಪಠ್ಯ ಬೋಧಿಸ್ತಿದ್ರೆ, ಮತ್ತೆ ಕೆಲವು ಶಾಲೆಗಳು ಶಿಕ್ಷಣ ಇಲಾಖೆಯ ಅನುಮತಿಯನ್ನೇ ಪಡೆಯದೆ ಶಾಲೆ ನಡೆಸುತ್ತಿವೆ. ಈ ಎಲ್ಲ ಕಳ್ಳಾಟದ ಶಾಲೆಗಳಿಗೆ ಶಿಕ್ಷಣ ಇಲಾಖೆ ಈಗ ಶಾಕ್ ಕೊಟ್ಟಿದೆ. ಕಳ್ಳಾಟವಾಡಿರುವ 1645 ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿದ್ದು ಡೆಡ್ ಲೈನ್ ಫಿಕ್ಸ್ ಮಾಡಿದೆ.

ಇದನ್ನೂ ಓದಿ: ಶುಲ್ಕದ ಲೆಕ್ಕದಲ್ಲಿ ಶಾಲೆ ಕಳ್ಳಾಟ; ಫುಲ್ ಫೀಸ್ ಕಟ್ಟಿದ ಸಿಬಿಎಸ್​ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಫುಲ್ ಮಾರ್ಕ್ಸ್

ಪೋಷಕರಿಗೆ ಸುಳ್ಳು ಹೇಳಿ ದಾಖಲಾತಿ ಮಾಡಿಸಿಕೊಂಡಿರುವ ಶಾಲೆಗಳಿಗೆ ಬೆಂಡೆತ್ತಲು ಸರ್ಕಾರವೂ ಸಜ್ಜಾಗಿದೆ. ಅನಧಿಕೃತ ಶಾಲೆಗಳಿಗೆ 1 ತಿಂಗಳ ಗಡುವು ನೀಡಿದ್ದು, ಕಾಲಮಿತಿಯೊಳಗೆ ಸೂಕ್ತ ದಾಖಲೆ ಸಲ್ಲಿಸದಿದ್ರೆ, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ದಾಖಲಾತಿಗೆ ಬ್ರೇಕ್ ಹಾಕೋದಾಗಿ ಖಡಕ್​ ಎಚ್ಚರಿಕೆ ನೀಡಿದೆ.

ಇನ್ನು ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮೂಗುದಾರ ಹಾಕಲು ಇನ್ಮುಂದೆ ಖಾಸಗಿ ಶಿಕ್ಷಣ ಸಂಸ್ಥೆಗಳು ಯಾವ ಸಿಲೆಬಸ್? ಸೌಲಭ್ಯ ಏನು? ಪಠ್ಯಕ್ರಮ ಎಲ್ಲ ಡಿಟೈಲ್ಸ್ ಬೋರ್ಡ್ ಗಳನ್ನ ಶಾಲೆಯ ಮುಂದೆ ದೊಡ್ಡದಾಗಿ ಹಾಕಬೇಕು. ದಾಖಲಾತಿ ವೇಳೆ ಪೋಷಕರಿಗೆ ಈ ಫಲಕ ಸ್ಪಷ್ಟವಾಗಿ ತೋರಿಸುವಂತಿರಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳು ಕಂಪ್ಲೀಟ್ ಡಿಟೈಲ್ಸ್ ಮಾಹಿತಿಯನ್ನ ಶಿಕ್ಷಣ ಇಲಾಖೆ ಸ್ಟ್ಯಾಟ್ಸ್ ಗೆ ಹಾಕಲು ಮುಂದಾಗಿದ್ದು ರ್ಯಾಂಡಮ್ ಸೆಲೆಕ್ಷನ್ ಮೂಲಕ ಶಾಲೆಗಳ ಸ್ಥಳ ಪರಿಶೀಲನೆಗೂ ಇಲಾಖೆ ಮುಂದಾಗಿದೆ. ಶಿಕ್ಷಣ ಇಲಾಖೆಗೆ ಸುಳ್ಳು ಮಾಹಿತಿ ನೀಡುವ ವಂಚಿಸುವ ಶಾಲೆಗಳಿಗೆ ಕನಿಷ್ಠ 2 ವರ್ಷಗಳ ಅವಧಿಯವರೆಗೆ ಮಾನ್ಯತೆಯನ್ನ ರದ್ದುಗೊಳಿಸುವ ಪ್ರಕ್ರಿಯೇ ಯಿಂದ ಡಿಬಾರ್ ಮಾಡಲು ಇಲಾಖೆ ಮುಂದಾಗಿದೆ.

ವರದಿ: ವಿನಯಕುಮಾರ್ ಕಾಶಪ್ಪನವರ್, ಟಿವಿ9 ಬೆಂಗಳೂರು

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ