AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲೇ ಪತ್ತೆಯಾಯ್ತು ಅಕ್ರಮ ಕೊವಿಡ್ ಕೇರ್ ಸೆಂಟರ್! ದಾಳಿ ನಡೆಸಿದ ಅಧಿಕಾರಿಗಳು

Illegal Covid Care Center: ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಅಕ್ರಮ ಕೊವಿಡ್ ಕೇರ್ ಸೆಂಟರ್​ನಲ್ಲಿದ್ದ ಕೊವಿಡ್ ಸೋಂಕಿತರನ್ನು ಸರ್ಕಾರಿ ಕೊವಿಡ್ ಕೇರ್ ಸೆಂಟರ್​ಗೆ ರವಾನೆ ಮಾಡಲಾಗಿದೆ.

ಬೆಂಗಳೂರಿನಲ್ಲೇ ಪತ್ತೆಯಾಯ್ತು ಅಕ್ರಮ ಕೊವಿಡ್ ಕೇರ್ ಸೆಂಟರ್! ದಾಳಿ ನಡೆಸಿದ ಅಧಿಕಾರಿಗಳು
TV9 Web
| Edited By: |

Updated on:Jun 12, 2021 | 6:18 PM

Share

ದೇವನಹಳ್ಳಿ: ಅಕ್ರಮವಾಗಿ ರೆಮ್​ಡೆಸಿವಿಡ್ ಸೇರಿದಂತೆ ಹಲವು ಔಷಧಗಳನ್ನು ಕದ್ದು ಮಾರಾಟ ಮಾಡುವ ಹಲವು ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಇನ್ನೂ ಒಂದು ಮಟ್ಟ ಹೆಚ್ಚಿನ ಅಕ್ರಮವೊಂದು ಬಯಲಿಗೆ ಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹ್ಯಾಡಾಳ ಬಳಿಯ ಅಕ್ರಮ ಕೊವಿಡ್ ಕೇರ್ ಸೆಂಟರ್ ಮೇಲೆ ತಹಶೀಲ್ದಾರ್ ದಾಳಿ ನಡೆಸಿದ ಘಟನೆ ನಡೆದಿದೆ. ತಹಶೀಲ್ದಾರ್ ಅನಿಲ್ ಮತ್ತು ತಾಲೂಕಾ ಆರೋಗ್ಯಾಧಿಕಾರಿ ಸಂಜಯ್ ಅವರು ಅಕ್ರಮವಾಗಿ ಸಂಗ್ರಹಿಸಿದ್ದ ರೆಮ್​ಡಿಸಿವಿರ್ ಸೇರಿದಂತೆ ಕೊರೊನಾ ಸೋಂಕಿತರಿಗೆ ನೀಡುವ ಔಷಧಗಳನ್ನು ವಶಪಡಿಸಿಕೊಂಡಿದ್ದಾರೆ.

ಖಾಸಗಿ ಶಾಲೆಯೊಂದರಲ್ಲಿ ಬೆಡ್, ಆಕ್ಸಿಜನ್, ವೈದ್ಯಕೀಯ ಉಪಕರಣಗಳನ್ನು ಇಟ್ಟುಕೊಂಡು ಕೊವಿಡ್ ಕೇರ್ ಸೆಂಟರ್ ನಡೆಸಲಾಗುತ್ತಿತ್ತು. ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಅಕ್ರಮ ಕೊವಿಡ್ ಕೇರ್ ಸೆಂಟರ್​ನಲ್ಲಿದ್ದ ಕೊವಿಡ್ ಸೋಂಕಿತರನ್ನು ಸರ್ಕಾರಿ ಕೊವಿಡ್ ಕೇರ್ ಸೆಂಟರ್​ಗೆ ರವಾನೆ ಮಾಡಲಾಗಿದೆ.

ಮೈಸೂರಿನಲ್ಲಿ ಮಕ್ಕಳ ಮೇಲೆ ಕೊವಿಡ್ ಲಸಿಕೆ ಪ್ರಯೋಗ ಯಶಸ್ವಿಯಾಗುವ ಭರವಸೆ ಜಿಲ್ಲೆಯಲ್ಲಿ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗ ಯಶಸ್ವಿಯಾಗುವ ಹಂತದಲ್ಲಿದ್ದು, ಮೊದಲ ಹಂತದಲ್ಲಿ 30 ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿತ್ತು. ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ನಡೆದ ಪ್ರಯೋಗ ಯಶಸ್ವಿಯಾಗುವ ಹಂತದಲ್ಲಿದ್ದು, ಲಸಿಕೆ ವಿತರಿಸಿದ ಕಳೆದ 6 ದಿನಗಳಿಂದ ಮಕ್ಕಳಿಗೆ ಹೆಚ್ಚಿನ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ. ಪ್ರತಿದಿನ ಮಕ್ಕಳ ಆರೋಗ್ಯವನ್ನು ವೈದ್ಯರು ವಿಚಾರಿಸುತ್ತಿದ್ದು, ಸುಮಾರು 7 ತಿಂಗಳ ಕಾಲ ನಡೆಯಲಿರುವ ಈ ಪ್ರಯೋಗ ನಡೆಯಲಿದೆ.

ಕೆಲವರಿಗೆ ಸೂಜಿ ಚುಚ್ಚಿದ ಜಾಗ ನೋವು ಕಾಣಿಸಿಕೊಂಡಿದ್ದು, ವಯಸ್ಕರಿಗೆ ಕೊಟ್ಟ ಪ್ರಮಾಣದಲ್ಲಿಯೇ ಮಕ್ಕಳಿಗೂ ಡೋಸ್ ನೀಡಲಾಗುತ್ತಿದೆ. ಪ್ರತಿ ದಿನ ಪೋನ್ ಮಾಡಿ ಮಕ್ಕಳ ಆರೋಗ್ಯ ವೈದ್ಯರು ವಿಚಾರಿಸುತ್ತಿದ್ದಾರೆ. 30 ಮಕ್ಕಳ ಪೈಕಿ ಇಬ್ಬರಿಗೆ ಜ್ವರ ಕಾಣಿಸಿಕೊಂಡಿದೆ. ಒಂದು ತಿಂಗಳ ನಂತರ ಲಸಿಕೆ ಪಡೆದ ಮಕ್ಕಳ ರಕ್ತ ಮಾದರಿ ಸಂಗ್ರಹಿಸಿ, ಮಕ್ಕಳ ದೇಹದ ಮೇಲೆ ಲಸಿಕೆ ಪರಿಣಾಮದ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ. ನಂತರದ ದಿನಗಳಲ್ಲಿ 6 ರಿಂದ 12 ಹಾಗೂ 2 ರಿಂದ 6 ವಯಸ್ಸಿನ ಮಕ್ಕಳ ಮೇಲೆ ಪ್ರಯೋಗ ನಡೆಸಲಾಗುತ್ತದೆ.

ಇದನ್ನೂ ಓದಿ: ಕೊರೊನಾ ಲಸಿಕೆಯ ಮೇಲೆ ಜಿಎಸ್‌ಟಿ ಬದಲಾವಣೆ ಇಲ್ಲ; ಉಳಿದ ಕೊರೊನಾ ಸಾಮಗ್ರಿ ಮೇಲೆ ಎಷ್ಟು ಜಿಎಸ್‌ಟಿ ಕಡಿಮೆಯಾಯ್ತು?

ಕೊರೊನಾ ಲಸಿಕೆಯ ಮೇಲೆ ಜಿಎಸ್‌ಟಿ ಬದಲಾವಣೆ ಇಲ್ಲ; ಉಳಿದ ಕೊರೊನಾ ಸಾಮಗ್ರಿ ಮೇಲೆ ಎಷ್ಟು ಜಿಎಸ್‌ಟಿ ಕಡಿಮೆಯಾಯ್ತು?

(Illegal Covid Care Center found in Devanahalli Bengaluru)

Published On - 6:14 pm, Sat, 12 June 21