‘ಆ ಪ್ರಭಾವಿ ವ್ಯಕ್ತಿ’ಗೆ ಬುದ್ಧಿ ಕಲಿಸಬೇಕು ಅಣ್ಣ ಎಂದು ಸಂತ್ರಸ್ತ ಯುವತಿ ನನ್ನ ಬಳಿ ಬಂದಿದ್ದಳು: ಎಸ್​ಐಟಿಗೆ ಹೇಳಿಕೆ ಕೊಟ್ಟ ನರೇಶ್

ನನಗೆ ಹಲವರ ಕಾಟ್ಯಾಂಕ್ಟ್ ಇದೆ. ನಾನು ಮಾಧ್ಯಮದಲ್ಲಿ ಕೆಲಸ ಮಾಡುತಿದ್ದೆ. ಹೀಗಾಗಿ ನಾನು ಹಲವರನ್ನು ಸಂಪರ್ಕ ಮಾಡಿದ್ದೇನೆ. ಸುದ್ದಿಗಳ ಸಂಬಂಧವಾಗಿ ಹಲವು ಗಣ್ಯರ ಸಂಪರ್ಕ ಮಾಡಿದ್ದೇನೆ. ಮಿನಿಸ್ಟರ್, ಎಂಎಲ್ಎ ಹಾಗೂ ಹಲವರನ್ನು ಹಲವು ಬಾರಿ ಸಂಪರ್ಕ ಮಾಡಿದ್ದೇನೆ. ಆದರೆ ವಿಡಿಯೋ ಬಗ್ಗೆ ನನಗೆ ಏನು ಗೊತ್ತಿಲ್ಲ - ನರೇಶ್ ಎಸ್​ಐಟಿ ಅಧಿಕಾರಿಗಳ ಎದುರು ಹೇಳಿದ್ದು

‘ಆ ಪ್ರಭಾವಿ ವ್ಯಕ್ತಿ’ಗೆ ಬುದ್ಧಿ ಕಲಿಸಬೇಕು ಅಣ್ಣ ಎಂದು ಸಂತ್ರಸ್ತ ಯುವತಿ ನನ್ನ ಬಳಿ ಬಂದಿದ್ದಳು: ಎಸ್​ಐಟಿಗೆ ಹೇಳಿಕೆ ಕೊಟ್ಟ ನರೇಶ್
‘ಆ ಪ್ರಭಾವಿ ವ್ಯಕ್ತಿ’ಗೆ ಬುದ್ಧಿ ಕಲಿಸಬೇಕು ಅಣ್ಣ ಎಂದು ಸಂತ್ರಸ್ತ ಯುವತಿ ನನ್ನ ಬಳಿ ಬಂದಿದ್ದಳು: ಎಸ್​ಐಟಿ ಎದುರು ಹೇಳಿಕೆ ಕೊಟ್ಟ ನರೇಶ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 14, 2021 | 11:51 AM

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣ ಸಂಬಂಧ ನರೇಶ್ ಗೌಡ ಹಾಗೂ ಶ್ರವಣ್ ಇಂದು ಮಧ್ಯಾಹ್ನ ಆಡುಗೋಡಿಯಲ್ಲಿ ಎಸ್​ಐಟಿ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ಸತತ ಮೂರು ಗಂಟೆಗೂ ಹೆಚ್ಚು ಸಮಯದಿಂದ ವಿಚಾರಣೆ ನಡೆಯುತ್ತಿದ್ದಾರೆ. ನರೇಶ್ ಹಾಗೂ ಶ್ರವಣ್ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗುತ್ತಿದೆ. ವಿಚಾರಣೆ ವೇಳೆ ಇಬ್ಬರು ಬಹಳಷ್ಟು ಮಹತ್ವದ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸಂತ್ರಸ್ತ ಯುವತಿ ಬಗೆಗೆ ಕೆಲ ಮಹತ್ವದ ಮಾಹಿತಿ ಹೇಳಿದ್ದಾರೆ.

ನರೇಶ್​ ಗೌಡ ಮತ್ತು ಶ್ರವಣ್ ಅವರಿಬ್ಬರೂ ಎಸ್​​ಐಟಿ ವಿಚಾರಣೆ ಮುಗಿಸಿ, ಆಡುಗೋಡಿ ಟೆಕ್ನಿಕಲ್ ಸೆಲ್​ನಿಂದ ತೆರಳಿದ್ದಾರೆ. ಎಸ್ಐಟಿ ವಿಚಾರಣೆಗೆ ಹಾಜರಾದ ನರೇಶ್ ಗೌಡ, ಶ್ರವಣ್ ಅವರಿಬ್ಬರನ್ನೂ SIT ಅಧಿಕಾರಿಗಳು ಈವರೆಗೂ ಯಾವುದೇ ಪ್ರಶ್ನೆಯನ್ನು ಕೇಳಿಲ್ಲ. ಶ್ರವಣ್ ಮತ್ತು ನರೇಶ್ ತಮ್ಮ ಪರಿಚಯ ಮಾಡಿಕೊಂಡು ಸಿಡಿ ಕೇಸ್​​ಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಇಬ್ಬರ ಹೇಳಿಕೆಗಳನ್ನೂ ಎಸ್‌ಐಟಿ ಅಧಿಕಾರಿಗಳು ಪ್ರತ್ಯೇಕವಾಗಿ ದಾಖಲಿಸಿಕೊಂಡಿದ್ದಾರೆ. ಆದರೆ ಈ ವೇಳೆ ಅವರಿಬ್ಬರ ಮೊಬೈಲ್‌ಗಳನ್ನ ವಶಕ್ಕೆ ಪಡೆದು, ಪರಿಶೀಲಿಸಿದ್ದಾರೆ.

ಎಸ್​​ಐಟಿ ಅಧಿಕಾರಿಗಳ ಮುಂದೆ ಆರೋಪಿ ಶ್ರವಣ್​ ಹೇಳಿಕೆ

ಸಂತ್ರಸ್ತ ಯುವತಿ ನನಗೆ ಕಾಲೇಜ್‌ನಲ್ಲಿ ಪರಿಚಯವಾಗಿದ್ರು. ಕಾಲೇಜಿನ ಪ್ರತಿಭಟನೆಯೊಂದರಲ್ಲಿ ಯುವತಿಯ ಪರಿಚಯವಾಯ್ತು. ನಾವು ಯಾರ ಬಳಿಯೂ ಹಣಕ್ಕೆ ಡಿಮ್ಯಾಂಡ್‌ ಮಾಡಿಲ್ಲ. ಸಚಿವರಿಂದ ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಎಂದಿದ್ದಳು. ಮಾಧ್ಯಮದಲ್ಲಿದ್ದ ಕಾರಣ ನ್ಯಾಯ ಕೊಡಿಸಲು ಮುಂದಾಗಿದ್ವಿ ಎಂದು ಎಸ್​​ಐಟಿ ಅಧಿಕಾರಿಗಳ ಮುಂದೆ ಆರೋಪಿ ಶ್ರವಣ್​ ಹೇಳಿಕೆ ನೀಡಿದ್ದಾರೆ.

ಮತ್ತೊಬ್ಬ ಆರೋಪಿ ನರೇಶ್ ಹೇಳಿದ್ದೇನು?

ಅದಕ್ಕೂ ಮೊದಲು ಮಾಜಿ ಮಂತ್ರಿಯ ಸಿ.ಡಿ. ವಿಡಿಯೋ ಬಗ್ಗೆ ನನಗೇನು ಗೊತ್ತಿಲ್ಲ ಎಂದು ನರೇಶ್ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ಮುಂದೆ ಹೇಳಿದ್ದಾರೆ. ಇನ್ನು ಸಂತ್ರಸ್ತ ಯುವತಿ ಪರಿಚಯವಾಗಿದ್ದು ಹೇಗೆ..? ಎಲ್ಲಿ..? ಎಂಬ ಬಗ್ಗೆ ನರೇಶ್ ಹೇಳಿಕೊಂಡಿದ್ದಾರೆ. ಯುವತಿ ನನಗೆ ಶ್ರವಣ್ ಮತ್ತು ಓರ್ವ ಯುವತಿ ಮುಖಾಂತರ ಪರಿಚಯವಾಗಿತ್ತು. ಆಕೆಗೆ ಅನ್ಯಾಯವಾಗಿದೆ ಅಂತ ನನ್ನ ಬಳಿ ಬಂದಿದ್ದರು. ನನ್ನನ್ನು ಆಕೆ ಅಣ್ಣ ಎಂದು ಸಹ ಕರೆಯುತಿದ್ದರು ಎಂದು ನರೇಶ್ ಎಸಿಪಿ ಧರ್ಮೇಂದ್ರ ಅವರಿಗೆ ಮಾಹಿತಿ ನೀಡಿದ್ದಾರೆ.

ಮುಂದುವರಿದು ಪ್ರಕರಣದ ನಾನಾ ಮಜಲುಗಳನ್ನು ತೆರೆದಿಟ್ಟಿರುವ ನರೇಶ್… ಪ್ರಭಾವಿಯೊಬ್ಬರು ನನಗೆ ಅನ್ಯಾಯಾ ಮಾಡಿದ್ದಾರೆ. ನನಗೆ ಮೊಸ ಮಾಡಿದ್ದಾರೆ ಅಣ್ಣ ಅಂತ ಬಂದಿದ್ದರು. ಜೊತೆಗೆ ನನಗೆ ನ್ಯಾಯಾ ಕೊಡಿಸಿ ಅಣ್ಣ ಎಂದಿದ್ದಳು. ಅಲ್ಲದೇ ಆ ಪ್ರಭಾವಿ ವ್ಯಕ್ತಿಗೆ ಬುದ್ಧಿ ಕಲಿಸಬೇಕು ಅಣ್ಣ ಎಂದಿದ್ದಳು. ನಾನು ಮೀಡಿಯಾದಲ್ಲಿ ಕೆಲಸ ಮಾಡುತಿರುವುದಕ್ಕೆ ಆಕೆ ನನ್ನ ಬಳಿ ಹೇಳಿಕೊಂಡಿದ್ದಳು. ಆದರೆ‌ ಆಕೆಯ ಹೇಳಿಕೆ ವಿಚಾರ ಬಿಟ್ಟು ವಿಡಿಯೋ ಬಗ್ಗೆ, ಯಾವುದೇ ವಸೂಲಿ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ನರೇಶ್ ಹೇಳಿದ್ದಾರೆ.

ಹೌದು, ನನಗೆ ಹಲವರ ಕಾಟ್ಯಾಂಕ್ಟ್ ಇದೆ. ನಾನು ಮಾಧ್ಯಮದಲ್ಲಿ ಕೆಲಸ ಮಾಡುತಿದ್ದೆ. ಹೀಗಾಗಿ ನಾನು ಹಲವರನ್ನು ಸಂಪರ್ಕ ಮಾಡಿದ್ದೇನೆ. ಸುದ್ದಿಗಳ ಸಂಬಂಧವಾಗಿ ಹಲವು ಗಣ್ಯರ ಸಂಪರ್ಕ ಮಾಡಿದ್ದೇನೆ. ಮಿನಿಸ್ಟರ್ ಗಳು, ಎಂಎಲ್ಎಗಳು ಹಾಗೂ ಹಲವರನ್ನು ಹಲವು ಬಾರಿ ಸಂಪರ್ಕ ಮಾಡಿದ್ದೇನೆ. ಆದರೆ ವಿಡಿಯೋ ಬಗ್ಗೆ ನನಗೆ ಏನು ಗೊತ್ತಿಲ್ಲ. ವಸೂಲಿ ವಿಚಾರವೂ ಗೊತ್ತಿಲ್ಲ ಎಂದು ನರೇಶ್ ಇದೇ ವೇಳೆ ಸ್ಪಷ್ಟ ನುಡಿಗಳಲ್ಲಿ ಎಸ್​ಐಟಿ ಅಧಿಕಾರಿಗೆ ತಿಳಿಸಿದ್ದಾರೆ.

ಎಸ್​ಐಟಿ ಕಚೇರಿಯಲ್ಲೇ ನರೇಶ್ ಹಾಗೂ ಶ್ರವಣಗೆ ಊಟ..

ನರೇಶ್ ಹಾಗೂ ಶ್ರವಣ್ ಅವರಿಬ್ಬರ ನಿರಂತರ ವಿಚಾರಣೆಯ ನಡುವೆ ಊಟಕ್ಕೆ ಕೊಂಚ ಬ್ರೇಕ್ ನೀಡಲಾಗಿತ್ತು. ಎಸ್​ಐಟಿ ಸಿಬ್ಬಂದಿಯೇ ತಂದು ಕೊಟ್ಟ ಊಟ ಸೇವಿಸಿದರು. ಕೆಲ ನಿಮಿಷ ಊಟಕ್ಕೆ ಬ್ರೇಕ್ ನೀಡಿದ ಬಳಿಕ ಎಸ್​ಐಟಿ ಅಧಿಕಾರಿಗಳು ಇದೀಗ ಮತ್ತೆ ವಿಚಾರಣೆ ಆರಂಭಿಸಿದ್ದಾರೆ.

(Ramesh Jarkiholi cd case accused naresh shravan narrates the details to sit acp dharmendra)

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ತನಿಖಾಧಿಕಾರಿಗಳ ಮುಂದೆ ಹಾಜರಾದ ನರೇಶ್ – ಶ್ರವಣ್! ಮುಂದೇನು?

Published On - 5:35 pm, Sat, 12 June 21

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ