ಬೆಂಗಳೂರು, ನ.17: ಮನೆಯ ದೀಪಾಲಂಕಾರಕ್ಕಾಗಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಪ್ರಕರಣ ಸಂಬಂಧ ಬೆಸ್ಕಾಂ (BESCOM) ವಿಧಿಸಿದ 68,526 ರೂಪಾಯಿ ದಂಡದ ಮೊತ್ತವನ್ನು ಪಾವತಿಸಿದ ನಂತರ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy), 71 ಯೂನಿಟ್ಗೆ ಬೆಸ್ಕಾಂ ಮೂರು ಪಟ್ಟು ದಂಡ ವಿಧಿಸಿದ್ದಾಗಿ ಆರೋಪಿಸಿದರು.
ಬೆಸ್ಕಾಂ ಇಲಾಖೆ ಅಧಿಕಾರಿಗಳು 2,526 ರೂ. ಬಿಲ್ ಬದಲು 68,526 ರೂಪಾಯಿ ದಂಡದ ಬಿಲ್ ನೀಡಿದ್ದಾರೆ. ಕರೆಂಟ್ ಬಿಲ್ ಕಟ್ಟಲು ನಾನು ಸಿದ್ಧನಿದ್ದೇನೆ. ಲೈಟಿಂಗ್ ಹಾಕಿದ್ದಕ್ಕೆ ಹೆಚ್ಚು ಕರೆಂಟ್ ತೆಗೆದುಕೊಳ್ಳುವುದಿಲ್ಲ. ಅದು 1 ಕಿಲೋ ವ್ಯಾಟ್ಗಿಂತ ಕಡಿಮೆ ಇರುತ್ತದೆ. ಆದರೆ ಇವರು 2.5 ಕಿಲೋ ವ್ಯಾಟ್ಗೆ ಲೆಕ್ಕ ತೆಗೆದುಕೊಂಡಿದ್ದಾರೆ. 7 ದಿನಕ್ಕೆ 71 ಯೂನಿಟ್ ಆಗಲಿದೆ ಅಂತ ಕೊಟ್ಟಿದ್ದಾರೆ. ಆದರೆ ಅವರು 71 ಯೂನಿಟ್ಗೆ ಮೂರು ಪಟ್ಟು ದಂಡ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಕರೆಂಟ್ ಬಿಲ್ ಬಗ್ಗೆ ಪುನರ್ ಪರಿಶೀಲನೆ ಮಾಡಲು ಹೇಳಿದ್ದೇನೆ ಎಂದು ತಿಳಿಸಿದ ಕುಮಾರಸ್ವಾಮಿ, ನೀವು (ಬೆಸ್ಕಾಂ) ನೀಡಿದ ಬಿಲ್ ಕೂಡ ಸರಿ ಇಲ್ಲ ಅಂತ ಪ್ರತಿಭಟನೆ ಮಾಡಿದ್ದೇನೆ. ಬೆಸ್ಕಾಂ ಇಲಾಖೆ ಪ್ರಕಾರ 2,526 ರೂಪಾಯಿ ಬಿಲ್ ನೀಡಬೇಕಿತ್ತು. ಆದರೆ ಬೆಸ್ಕಾಂ ಇಲಾಖೆ 68,526 ರೂ. ಕರೆಂಟ್ ಬಿಲ್ ನೀಡಿದೆ ಎಂದು ಆರೋಪಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ