AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮ ವಿದ್ಯುತ್ ಸಂಪರ್ಕ: ಬೆಸ್ಕಾಂಗೆ ದಂಡ ಪಾವತಿಸಿದ ಹೆಚ್​​ಡಿ ಕುಮಾರಸ್ವಾಮಿ, ಎಷ್ಟು ಗೊತ್ತಾ?

ದೀಪಾವಳಿ ಪ್ರಯುಕ್ತ ತಮ್ಮ ನಿವಾಸ ದೀಪಾಲಂಕಾರಕ್ಕೆ ಬೀದಿದೀಪದ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರಿಗೆ ಬೆಸ್ಕಾಂ ಜಾಗೃತ ದಳ ದಂಡ ವಿಧಿಸಿತ್ತು. ಈ ದಂಡದ ಮೊತ್ತವನ್ನು ಕುಮಾರಸ್ವಾಮಿ ಅವರು ಪಾವತಿಸಿದ್ದಾರೆ.

ಅಕ್ರಮ ವಿದ್ಯುತ್ ಸಂಪರ್ಕ: ಬೆಸ್ಕಾಂಗೆ ದಂಡ ಪಾವತಿಸಿದ ಹೆಚ್​​ಡಿ ಕುಮಾರಸ್ವಾಮಿ, ಎಷ್ಟು ಗೊತ್ತಾ?
ಅಕ್ರಮ ವಿದ್ಯುತ್ ಸಂಪರ್ಕ ಪ್ರಕರಣ ಸಂಬಂಧ ಬೆಸ್ಕಾಂಗೆ ದಂಡ ಪಾವತಿಸಿದ ಹೆಚ್​​ಡಿ ಕುಮಾರಸ್ವಾಮಿ
Follow us
TV9 Web
| Updated By: Rakesh Nayak Manchi

Updated on:Nov 17, 2023 | 11:46 AM

ಬೆಂಗಳೂರು, ನ.17: ದೀಪಾವಳಿ ಪ್ರಯುಕ್ತ ತಮ್ಮ ನಿವಾಸ ದೀಪಾಲಂಕಾರಕ್ಕೆ ಬೀದಿದೀಪದ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಪ್ರಕರಣ ಸಂಬಂಧ ಬೆಸ್ಕಾಂ (BESCOM) ವಿಧಿಸಿದ 68,526 ರೂ. ದಂಡದ ಮೊತ್ತವನ್ನು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅವರು ಪಾವತಿಸಿದ್ದಾರೆ.

ದಂಡದ ಮೊತ್ತವನ್ನು ಕುಮಾರಸ್ವಾಮಿ ಅವರು ಆನ್​ಲೈನ್ ಮೂಲಕ ಪಾವತಿಸಿದ್ದು, ಬೆಸ್ಕಾಂಗೆ ದಂಡ ಕಟ್ಟಿರುವ ರಸೀದಿ ಟಿವಿ9ಗೆ ಲಭ್ಯವಾಗಿದೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ಬೆಸ್ಕಾಂ 2.5 ಕಿಲೋ ವ್ಯಾಟ್​​​ಗೆ ಲೆಕ್ಕ ತೆಗೆದುಕೊಂಡಿದೆ. 7 ದಿನಕ್ಕೆ 71 ಯೂನಿಟ್ ಆಗಲಿದೆ ಅಂತ ಕೊಟ್ಟಿದ್ದಾರೆ. ಬೆಸ್ಕಾಂ ಪ್ರಕಾರ, 2,526 ರೂ. ಬಿಲ್ ಬರಬೇಕಿತ್ತು. ಆದರೆ, 68,526 ರೂ. ಕರೆಂಟ್​ ಬಿಲ್ ನೀಡಿದೆ.  ಹೀಗಾಗಿ ಕರೆಂಟ್​ ಬಿಲ್​ ಬಗ್ಗೆ ಪುನರ್​ ಪರಿಶೀಲನೆ ಮಾಡಲು ಹೇಳಿದ್ದಾಗಿ ತಿಳಿಸಿದರು.

ಇದನ್ನೂ ಓದಿ: ತೆಲಂಗಾಣಕ್ಕೆ ಸೂಟ್​ಕೇಸ್​ಗಳಲ್ಲಿ ಹಣ ಒಯ್ಯತ್ತಿರುವ ಕಾಂಗ್ರೆಸ್ ನಾಯಕರ ಪೋಸ್ಟರ್​ಗಳನ್ನು ಯಾಕೆ ಅಂಟಿಸಬಾದು? ಹೆಚ್ ಡಿ ಕುಮಾರಸ್ವಾಮಿ

ಹೆಚ್​ಡಿ ಕುಮಾರಸ್ವಾಮಿ ಅವರ ನಿವಾಸಕ್ಕೆ ದೀಪಾವಳಿ ದೀಪಾಲಂಕಾರಕ್ಕಾಗಿ ಅನಧಿಕೃತವಾಗಿ ಬೀದಿ ದೀಪದ ಕಂಬದಿಂದ ನೇರವಾಗಿ ವಿದ್ಯುತ್ ಪಡೆದಿರುವ ಆರೋಪವನ್ನು ಕಾಂಗ್ರೆಸ್​ ಮಾಡಿತ್ತು. ಇದರ ಬೆನ್ನಲ್ಲೇ, ಜಯನಗರದ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಕುಮಾರಸ್ವಾಮಿ ಮನೆಗೆ ತೆರಳಿ ಪರಿಶೀಲನೆ ಮಾಡಿ ಎಫ್​ಐಆರ್ ದಾಖಲಿಸಿದ್ದರು. ಬಳಿಕ ದಂಡ ವಿಧಿಸಿದ್ದರು.

ಬೆಸ್ಕಾಂ ಜಾಗೃತಾ ದಳದ ಡಿವೈಎಸ್​ಪಿ ಅನುಷ ನೇತೃತ್ವದಲ್ಲಿ ವಿದ್ಯುತ್ ಬಳಕೆ ಕೌಂಟಿಂಗ್ ಮಾಡಿ, 10 ನಿಮಿಷಕ್ಕೆ​ ಎಷ್ಟು ವಿದ್ಯುತ್ ಬಳಕೆ ಆಗುತ್ತದೆ ಎನ್ನುವುದನ್ನು ಲೆಕ್ಕ ಮಾಡಿದ್ದರು. ಇದರಿಂದ ಎರಡು ದಿನ ಎಷ್ಟು ಬಳಕೆ ಆಗಿದೆ ಎಂಬುದರ ಲೆಕ್ಕ ತೆಗೆದು, ಅಧಿಕಾರಿಗಳು ವರದಿ ನೀಡಿದ್ದರು. ಇದರ ಅನ್ವಯ ಬೆಸ್ಕಾಂ ಇಲಾಖೆ ಬರೊಬ್ಬರಿ 68 ಸಾವಿರ ದಂಡವನ್ನು ವಿಧಿಸಿ ಏಳು ದಿನಗಳೊಳಗಾಗಿ ಕಟ್ಟುವಂತೆ ಸೂಚಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:24 am, Fri, 17 November 23

ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
ಮೋದಿ ನೇತೃತ್ವದ ಭಾರತದಲ್ಲಿ ಎಲ್ಲರೂ ಸಮಾನರು, ಸುರಕ್ಷಿತರು: ಕೇಂದ್ರ ಸಚಿವೆ
ಮೋದಿ ನೇತೃತ್ವದ ಭಾರತದಲ್ಲಿ ಎಲ್ಲರೂ ಸಮಾನರು, ಸುರಕ್ಷಿತರು: ಕೇಂದ್ರ ಸಚಿವೆ
VIDEO: 5 ವರ್ಷದ ಪೋರನ ಸ್ಫೋಟಕ ಬ್ಯಾಟಿಂಗ್ ನೀವು ನೋಡಲೇಬೇಕು
VIDEO: 5 ವರ್ಷದ ಪೋರನ ಸ್ಫೋಟಕ ಬ್ಯಾಟಿಂಗ್ ನೀವು ನೋಡಲೇಬೇಕು
ನಟಿ ಪ್ರೇಮಾ ಈಗಲೂ ಹೇಗೆ ಡ್ಯಾನ್ಸ್ ಮಾಡ್ತಾರೆ ನೋಡಿ; ಇಲ್ಲಿದೆ ವಿಡಿಯೋ
ನಟಿ ಪ್ರೇಮಾ ಈಗಲೂ ಹೇಗೆ ಡ್ಯಾನ್ಸ್ ಮಾಡ್ತಾರೆ ನೋಡಿ; ಇಲ್ಲಿದೆ ವಿಡಿಯೋ
ಹುಲಿಗಳನ್ನು ಕೊಂದ ಅಪರಾಧಿಗಳಿಗೆ ಡಬಲ್ ಶಿಕ್ಷೆಯಾಗಲಿದೆ: ಅರಣ್ಯಾಧಿಕಾರಿ
ಹುಲಿಗಳನ್ನು ಕೊಂದ ಅಪರಾಧಿಗಳಿಗೆ ಡಬಲ್ ಶಿಕ್ಷೆಯಾಗಲಿದೆ: ಅರಣ್ಯಾಧಿಕಾರಿ
VIDEO: ಕೊನೆಯ ಎಸೆತದಲ್ಲಿ ಸಿಕ್ಸ್​... ದಾಖಲೆಯ ರನ್ ಚೇಸ್​..!
VIDEO: ಕೊನೆಯ ಎಸೆತದಲ್ಲಿ ಸಿಕ್ಸ್​... ದಾಖಲೆಯ ರನ್ ಚೇಸ್​..!
ಗರ್ಭವತಿಯಾದ ಹೆಣ್ಣಿನ ಸಂತೋಷ ಕುಟುಂಬಕ್ಕೆ ಸರ್ವಶುಭಮಂಗಳ ಹೇಗೆ?
ಗರ್ಭವತಿಯಾದ ಹೆಣ್ಣಿನ ಸಂತೋಷ ಕುಟುಂಬಕ್ಕೆ ಸರ್ವಶುಭಮಂಗಳ ಹೇಗೆ?
Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ
Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್