AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮಹಿಳೆ ಜೊತೆ ಅಕ್ರಮ ಸಂಬಂಧಕ್ಕೆ ಅಡ್ಡಿ, ಆಕೆಯ ಪತಿಯನ್ನೇ ಕೊಲೆ ಮಾಡಿದ ಆರೋಪಿ ಅರೆಸ್ಟ್

ಬೆಂಗಳೂರು ನಗರದ ತಿಲಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಸಂಬಂಧದ ವಿಚಾರದಲ್ಲಿ ಮಹಿಳೆಯ ಪತಿ ತಬ್ರೇಜ್ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಶ್ರೀರಾಂಪುರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಶಬ್ಬೀರ್​ನನ್ನು ಬಂಧಿಸಿದ್ದಾರೆ.

ಬೆಂಗಳೂರು: ಮಹಿಳೆ ಜೊತೆ ಅಕ್ರಮ ಸಂಬಂಧಕ್ಕೆ ಅಡ್ಡಿ, ಆಕೆಯ ಪತಿಯನ್ನೇ ಕೊಲೆ ಮಾಡಿದ ಆರೋಪಿ ಅರೆಸ್ಟ್
ಸಾಂದರ್ಭಿಕ ಚಿತ್ರ
ಜಗದೀಶ ಬಿ.
| Edited By: Rakesh Nayak Manchi|

Updated on: Nov 17, 2023 | 9:55 AM

Share

ಬೆಂಗಳೂರು, ನ.17: ಅಕ್ರಮ ಸಂಬಂಧಕ್ಕೆ ಅಡ್ಡಿ ಬರುತ್ತಿದ್ದ ಮಹಿಳೆಯ ಪತಿ ತಬ್ರೇಜ್​ನನ್ನು ಕೊಲೆ (Muder) ಮಾಡಿದ್ದ ಆರೋಪಿಯನ್ನು ನಗರದ (Bengaluru) ತಿಲಕ್ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಶಬ್ಬೀರ್ ಬಂಧಿತ ಆರೋಪಿಯಾಗಿದ್ದಾನೆ.

ಬೆಂಗಳೂರಿನ ತಿಲಕನಗರ ವ್ಯಾಪ್ತಿಯ ತಬ್ರೇಜ್​​ ಪತ್ನಿ ಜೊತೆ ಶಬ್ಬೀರ್ ಅಕ್ರಮ ಸಂಬಂಧ ಹೊಂದಿದ್ದನು. ಈ ವಿಚಾರವಾಗಿ ತಬ್ರೇಜ್ ಮತ್ತು ಶಬ್ಬೀರ್ ನಡುವೆ ಗಲಾಟೆ ನಡೆದಿತ್ತು. ಬಳಿಕ ರಾಜಿಸಂಧಾನದ ಮೂಲಕ ಸಮಸ್ಯೆಗೆ ಇತೀಶ್ರೀ ಹಾಡಲಾಗಿತ್ತು. ಆದರೂ ತಬ್ರೇಜ್ ಪತ್ನಿಯನ್ನು ಬಿಡದ ಶಬ್ಬೀರ್, ಆಕೆಯನ್ನು ಕರೆದೊಯ್ದಿದ್ದನು.

ಇದನ್ನೂ ಓದಿ: ಉಡುಪಿ: ನಾಲ್ವರ ಕೊಲೆ ಕೇಸ್, ಸ್ಥಳ ಮಹಜರು ವೇಳೆ ಉದ್ರಿಕ್ತರ ಗುಂಪು ಚದುರಿಸಲು ಲಾಠಿಚಾರ್ಜ್

ತಾಯಿಯ ಅಕ್ರಮ ಸಂಬಂಧದ ಬಗ್ಗೆ ತಂದೆ ತಬ್ರೇಜ್​ಗೆ ಮಕ್ಕಳು ಪದೇ ಪದೇ ಹೇಳುತ್ತಿದ್ದರು. ಇದರಿಂದ ಕೊಪಗೊಂಡ ತಬ್ರೇಜ್ ಎರಡು ದಿನಗಳ ಹಿಂದೆ ತಿಲಕ್ ನಗರ ಮಸೀದಿ ಬಳಿ ಶಬ್ಬೀರ್ ಜೊತೆ ಗಲಾಟೆ ಮಾಡಿದ್ದಾನೆ. ಈ ವೇಳೆ ಮಾರಕಾಸ್ತ್ರಗಳಿಂದ ತಬ್ರೇಜ್​ನನ್ನು ಹತ್ಯೆ ಮಾಡಿದ ಶಬ್ಬೀರ್, ಪರಾರಿಯಾಗಿದ್ದನು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More