AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ವಿಜಯ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ನಾಚಿ ನೀರಾದ ನಟಿ ತ್ರಿಶಾ: ವಿಡಿಯೋ ವೈರಲ್

ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಅವರು ಸಿಕ್ಕಾಪಟ್ಟೆ ಆಪ್ತವಾಗಿದ್ದಾರೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಅದಕ್ಕೆ ಹಲವು ಸಾಕ್ಷಿಗಳು ಸಿಗುತ್ತಿವೆ. ‘ಕರುಪ್ಪು’ ಚಿತ್ರದ ಪ್ರದರ್ಶನಕ್ಕೆ ತ್ರಿಶಾ ಆಗಮಿಸಿದ ವೇಳೆ ಅಭಿಮಾನಿಗಳು ವಿಜಯ್ ಹೆಸರು ಪ್ರಸ್ತಾಪಿಸಿದ್ದಾರೆ. ಆಗ ತ್ರಿಶಾ ಮುಖದಲ್ಲಿ ನಗು ಅರಳಿದೆ.

ಸಿಎಂ ವಿಜಯ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ನಾಚಿ ನೀರಾದ ನಟಿ ತ್ರಿಶಾ: ವಿಡಿಯೋ ವೈರಲ್
Trisha Krishnan, Thalapathy Vijay
ಮದನ್​ ಕುಮಾರ್​
|

Updated on: May 15, 2026 | 9:22 PM

Share

ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರು ಇತ್ತೀಚಿನ ದಿನಗಳಲ್ಲಿ ಸಖತ್ ಸುದ್ದಿ ಆಗುತ್ತಿದ್ದಾರೆ. ಇತ್ತೀಚೆಗಷ್ಟೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಟ ವಿಜಯ್ (Thalapathy Vijay) ಮತ್ತು ತ್ರಿಶಾ ನಡುವೆ ಆಪ್ತ ಗೆಳತನವಿದೆ ಎಂಬ ವದಂತಿಗಳು ಕಾಲಿವುಡ್‌ನಲ್ಲಿ ದಟ್ಟವಾಗಿವೆ. ಈ ನಡುವೆ, ಅಭಿಮಾನಿಯೊಬ್ಬರು ವಿಜಯ್ ಹೆಸರು ಎತ್ತುತ್ತಿದ್ದಂತೆ ತ್ರಿಶಾ ಸಿಕ್ಕಾಪಟ್ಟೆ ನಾಚಿಕೊಂಡಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಶುಕ್ರವಾರ (ಮೇ 15) ಚೆನ್ನೈನ ಪ್ರಖ್ಯಾತ ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಚಿತ್ರಮಂದಿರದಲ್ಲಿ ತ್ರಿಶಾ ಮತ್ತು ಸೂರ್ಯ ನಟನೆಯ ಬಿಗ್ ಬಜೆಟ್ ಸಿನಿಮಾ ‘ಕರುಪ್ಪು’ ಚಿತ್ರದ ಮೊದಲ ಪ್ರದರ್ಶನ ಇತ್ತು. ಈ ವೇಳೆ ಚಿತ್ರಮಂದಿರದಿಂದ ಹೊರಬಂದ ತ್ರಿಶಾ ಅವರನ್ನು ಅಭಿಮಾನಿಗಳು ಸುತ್ತುವರಿದರು. ತ್ರಿಶಾ ಅವರು ತಮ್ಮ ಕಾರಿನೊಳಗೆ ಕುಳಿತುಕೊಳ್ಳುತ್ತಿದ್ದಂತೆಯೇ ಫೋಟೋ ಮತ್ತು ವಿಡಿಯೋಗಳಿಗಾಗಿ ಅಭಿಮಾನಿಗಳು ಮುಗಿಬಿದ್ದರು.

ಈ ವೇಳೆ ಕಾರಿನ ಬಳಿ ಬಂದ ಅಭಿಮಾನಿಯೊಬ್ಬರು, ‘ದಳಪತಿಯನ್ನು ಕೇಳಿದೆ ಅಂತ ಹೇಳಿ’ ಎಂದು ನಗುತ್ತಾ ಹೇಳಿದರು. ಇದನ್ನು ಕೇಳಿದ ತಕ್ಷಣ ತ್ರಿಶಾ ಮುಖದಲ್ಲಿ ದೊಡ್ಡ ನಗು ಮೂಡಿತು. ಅವರು ನಗುತ್ತಲೇ ‘ಖಂಡಿತವಾಗಿ’ ಎಂದು ಉತ್ತರಿಸಿ, ನಾಚಿಕೆಯಿಂದ ತಲೆ ತಗ್ಗಿಸಿದರು. ಕಾರಿನಲ್ಲಿ ಕುಳಿತು ಯಾರಿಗೋ ಮೆಸೇಜ್ ಕಳುಹಿಸುತ್ತಾ ಅವರು ನಿರಂತರವಾಗಿ ಮುಗುಳ್ನಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಳಿಕ ತಮ್ಮ ಹೆಸರು ಕೂಗುತ್ತಿದ್ದ ಅಭಿಮಾನಿಗಳತ್ತ ಕೈ ಬೀಸಿದರು.

ತ್ರಿಶಾ ವೈರಲ್ ವಿಡಿಯೋ:

ಮೇ 10ರಂದು ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆ ಭವ್ಯ ಸಮಾರಂಭದಲ್ಲಿ ತ್ರಿಶಾ ಅವರು ಎಲ್ಲರ ಗಮನ ಸೆಳೆದಿದ್ದರು. ಅತ್ಯಾಕರ್ಷಕ ನೀಲಿ ಮತ್ತು ಬಂಗಾರದ ಬಣ್ಣದ ಸೀರೆಯನ್ನು ಉಟ್ಟು, ಮಲ್ಲಿಗೆ ಮುಡಿದು ಬಂದಿದ್ದ ಅವರು ವಿಜಯ್ ತಾಯಿ ಶೋಭಾ ಅವರನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸಿದ್ದರು. ಅಲ್ಲದೆ, ವಿಜಯ್ ಅವರ ತಂದೆ ಎಸ್‌ಎ ಚಂದ್ರಶೇಖರ್ ಮತ್ತು ತಾಯಿಯ ಜೊತೆಗೇ ಮುಂಭಾಗದ ಸಾಲಿನಲ್ಲಿ ಕುಳಿತಿದ್ದರು.

ಇದನ್ನೂ ಓದಿ: ತ್ರಿಶಾಗೆ ಒಲಿದು ಬಂದ ಬಿಗ್ ಆಫರ್; ರಜನಿ-ಕಮಲ್ ಹೊಸ ಸಿನಿಮಾಗೆ ನಾಯಕಿ?

ತ್ರಿಶಾ ಅವರಿಗೆ 2015ರಲ್ಲಿ ಉದ್ಯಮಿ ವರುಣ್ ಮಣಿಯನ್ ಜೊತೆ ನಿಶ್ಚಿತಾರ್ಥ ಆಗಿತ್ತಾದರೂ ಅದೇ ವರ್ಷ ಆ ಸಂಬಂಧ ಮುರಿದುಬಿದ್ದಿತ್ತು. ಇತ್ತ ನಟ ವಿಜಯ್ ಅವರು 1999ರಲ್ಲಿ ತಮ್ಮ ಅಭಿಮಾನಿ ಸಂಗೀತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, ಸುಮಾರು ಮೂರು ದಶಕಗಳ ದಾಂಪತ್ಯ ಜೀವನದ ನಂತರ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಅವರು ಖ್ಯಾತ ನಟಿಯೊಬ್ಬರ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More