ಸಿದ್ದರಾಮಯ್ಯ ಹೊಸಪಕ್ಷಕ್ಕೆ ಹಸುವಿನ ಕೆಚ್ಚಲು ಕೊಯ್ಯುತ್ತಿರುವ ದೃಶ್ಯವೇ ಚಿಹ್ನೆಯಾಗಲಿದೆ: ಪ್ರತಾಪ್ ಸಿಂಹ
ಕಳೆದ ವಾರ ಬೆಂಗಳೂರು ನಗರದ ಚಾಮರಾಜಪೇಟೆಯಲ್ಲಿ ಶೇಖ್ ನಸ್ರು ಹೆಸರಿನ ವ್ಯಕ್ತಿಯೊಬ್ಬ ರಾತ್ರಿ ಸಮಯದಲ್ಲಿ ವಿಶ್ರಮಮಿಸುತ್ತಿದ್ದ ಹಸುಗಳ ಕೆಚ್ಚಲು ಕೊಯ್ದಿದನ್ನು ಖಂಡಿಸಿ ಪ್ರತಾಪ್ ಸಿಂಹ ನೇತೃತ್ವದಲ್ಲಿ ಮೈಸೂರಿನ ಬಿಜೆಪಿ ಮುಖಂಡರು ಜಲದರ್ಶಿನಿ ಗೇಟ್ ಎದುರು ಗೋಪೂಜೆ ನೆರವೇರಿಸಿ, ಹಸುಗಳ ಹಾಲು ಕರೆದು, ಅವುಗಳಿಗೆ ಬೆಲ್ಲ ಮತ್ತು ಕಬ್ಬನ್ನು ತಿನ್ನಿಸಿ ತಮಗಾಗಿರುವ ನೋವನ್ನು ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಿದರು.
ಮೈಸೂರು: ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಎಐಸಿಸಿ ಸ್ಥಾನ ನೀಡಿದರೆ ಅವರು ನಿಶ್ಚಯವಾಗಿ ತಮ್ಮ ಬೆಂಬಲಿಗರೊಂದಿಗೆ ಹೊರಬಂದು ಹೊಸಪಕ್ಷವನ್ನು ಸ್ಥಾಪಿಸುತ್ತಾರೆ ಮತ್ತು ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ಹಸುವಿನ ಕೆಚ್ಚಲು ಕೊಯ್ಯುತ್ತಿರುವ ಚಿತ್ರವನ್ನು ತಮ್ಮ ಪಕ್ಷದ ಚಿಹ್ನೆಯನ್ನಾಗಿ ಮಾಡಿಕೊಳ್ಳಲಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು. ನಗರರದಲ್ಲಿಂದು ಮಾಧ್ಯಮದವರನ್ನು ಉದ್ದೇಶಿಸಿ ಮಾತಾಡಿದ ಅವರು 1952 ರಲ್ಲಿ ದೇಶದ ಮೊದಲ ಸಾರ್ವತ್ರಿಕ ಚುನಾವಣೆ ನಡೆದಾಗ ಕಾಂಗ್ರೆಸ್ ಪಕ್ಷದ ಚಿಹ್ನೆ ಜೋಡೆತ್ತಾಗಿತ್ತು, ನಂತರ 1969ರಲ್ಲಿ ಇಂದಿರಾ ಗಾಂಧಿಯವರು ಕಾಂಗ್ರೆಸ್ ಪಕ್ಷವನ್ನು ಒಡೆದು ತಮ್ಮ ಬಣಕ್ಕೆ ಹಸುವಿನ ಹಾಲು ಕುಡಿಯುತ್ತಿರುವ ಕರುವಿನ ಚಿತ್ರವನ್ನು ಪಕ್ಷದ ಚಿಹ್ನೆಯಾಗಿ ಪಡೆದಿದ್ದರು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸಿಡಿದೆದ್ದ ಸ್ವಪಕ್ಷದ ಮುಖಂಡರು, ಉಚ್ಚಾಟನೆಗೆ ಪತ್ರ..!