ದಕ್ಷಿಣ ಕನ್ನಡ, ಡಿ.05: ಐಎಂಪಿಎಸ್(IMPS) ಮೂಲಕ 820 ಕೋಟಿ ರೂಪಾಯಿ ಹಣ ವಹಿವಾಟು ಆರೋಪದ ಹಿನ್ನಲೆ ಅನಾಮಿಕ ವ್ಯಕ್ತಿಗಳ ಮೇಲೆ ಆರೋಪಿಸಿ ಯುಕೋ ಬ್ಯಾಂಕ್ ದೂರು ನೀಡಿತ್ತು. ಈ ಹಿನ್ನಲೆ ಇದೀಗ ಕರ್ನಾಟಕ ಸೇರಿದಂತೆ ಪಶ್ಚಿಮ ಬಂಗಾಳದ 13 ಸ್ಥಳಗಳಲ್ಲಿ ಸಿಬಿಐ(CBI) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಏಕಕಾಲದಲ್ಲಿ ಕೋಲ್ಕತ್ತಾ ಹಾಗೂ ರಾಜ್ಯದ ಮಂಗಳೂರಿ(Mangalore)ನಲ್ಲಿ ಬ್ಯಾಂಕ್ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳ ನಿವಾಸಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೊಬೈಲ್, ಲ್ಯಾಪ್ಟ್ಯಾಪ್, ಕಂಪ್ಯೂಟರ್ಗಳು, ಇ-ಮೇಲ್ ಆರ್ಚೀವ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ.
ನವೆಂಬರ್ 10ರಿಂದ 13ನೇ ತಾರೀಖಿನೊಳಗೆ ಅಂದಾಜು ರೂ. 820 ಕೋಟಿ ರೂ. ವಹಿವಾಟು ನಡೆದಿತ್ತು. ಈ ಹಿನ್ನಲೆ UCO ಬ್ಯಾಂಕ್‌ನೊಂದಿಗೆ ಕೆಲಸ ಮಾಡುವ ಇಬ್ಬರು ಸಿಬ್ಬಂದಿಗಳು ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಅನುಮಾನ ಬಂದ ಹಿನ್ನಲೆ UCO ಬ್ಯಾಂಕ್ ದೂರು ನೀಡಿತ್ತು. ಏಳು ಖಾಸಗಿ ಬ್ಯಾಂಕ್‌ಗಳಲ್ಲಿ 14000 ಖಾತೆದಾರರಿಂದ IMPS ಒಳಗಿನ ವಹಿವಾಟುಗಳನ್ನು IMPS ಮೂಲಕ UCO ಬ್ಯಾಂಕ್‌ನ 41000 ಖಾತೆದಾರರಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:CBI Operation Chakra: ಕರ್ನಾಟಕದಲ್ಲೂ ಆಪರೇಷನ್ ಚಕ್ರ, ಸಿಬಿಐ ದಾಳಿ ವೇಳೆ ಹಣ ಸಿಕ್ಕಿದ್ದಿಷ್ಟು!
ಈ ಜಾಲವು 8,53,049 ವಹಿವಾಟುಗಳನ್ನು ಒಳಗೊಂಡಿದ್ದು, ಮತ್ತು ಈ ವಹಿವಾಟುಗಳನ್ನು UCO ಬ್ಯಾಂಕ್ ಖಾತೆದಾರರ ದಾಖಲೆಗಳಲ್ಲಿ ತಪ್ಪಾಗಿ ಮಾಹಿತಿ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು. ಹಲವಾರು ಖಾತೆದಾರರು ಈ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. UCO ಬ್ಯಾಂಕ್‌ನಿಂದ ವಿವಿಧ ಬ್ಯಾಂಕಿಂಗ್ ಚಾನೆಲ್‌ಗಳ ಮೂಲಕ ಅಕ್ರಮವಾಗಿ ಹಣವನ್ನು ಹಿಂತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ದೂರು ಹಿನ್ನೆಲೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ಇಂದು ಒಟ್ಟು 13 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:17 pm, Tue, 5 December 23