ಮಂಗಳೂರು, ನವೆಂಬರ್ 08: 2021ರ ನವೆಂಬರ್ 21ರಂದು ಬಾಲಕಿ (girl) ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ಮೂವರು ಅಪರಾಧಿಗಳಿಗೆ ದಕ್ಷಿಣ ಕನ್ನಡ ಸೆಷನ್ಸ್ ಕೋರ್ಟ್ನಿಂದ ಗಲ್ಲು ಶಿಕ್ಷೆ ಪ್ರಕಟಿಸಲಾಗಿದೆ. ಜಯಸಿಂಗ್, ಮುಕೇಶ್ ಸಿಂಗ್ ಮತ್ತು ಮನೀಶ್ ತಿರ್ಕಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ಮಂಗಳೂರು ಹೊರವಲಯದ ಪರಾರಿ ಹೆಂಚಿನ ರಾಜ್ಟೈಲ್ಸ್ ಫ್ಯಾಕ್ಟರಿಯಲ್ಲಿ 8 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್ ಮಾಡಿ ಬಳಿಕ ಕೊಲೆ ಮಾಡಲಾಗಿತ್ತು. ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶದ ಕಾರ್ಮಿಕರಿಂದ ಕೃತ್ಯವೆಸಗಲಾಗಿತ್ತು. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಿವಮೊಗ್ಗ: ರಸ್ತೆ ಬದಿಯ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಐಟಿಐ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಶಿವಮೊಗ್ಗ ತಾಲೂಕಿನ ಕಾನೇಹಳ್ಳ ಕ್ರಾಸ್ ಬಳಿ ನಡೆದಿದೆ. ನಿಸಾರ್, ಯಶ್ವಂತ್ ಮೃತ ವಿದ್ಯಾರ್ಥಿಗಳು. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನರಗನಹಳ್ಳಿ ಅನ್ನೂ ಈ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಪುಂಡರ ಹಾವಳಿ ಹೆಚ್ಚಾಗಿದೆ. ದಿನಪೂರ್ತಿ ಹೊಲದಲ್ಲಿ ಕೆಲಸ ಜಾನುವಾರುಗಳ ಹಾರೈಕೆ ಅಂತ ಕೆಲಸ ಮಾಡಿ ಮನೆಗೆ ಬರುವ ಜನರು ನಿದ್ದೆಗೆ ಜಾರ್ತಿದ್ದಂತೆ ಮನೆ ಬಳಿಗೆ ಬರುವ ಪುಂಡರು ಮನೆ ಬಾಗಿಲುಗಳನ್ನ ಹೊಡೆದು ಎಸ್ಕೇಪ್ ಆಗ್ತಿದ್ದಾರಂತೆ.
ಇದನ್ನೂ ಓದಿ: ಜೀವಂತವಾಗಿ ಹೂತುಹಾಕಿದ ದುರುಳರು: ಗುಂಡಿಯಿಂದ ಎದ್ದು ಬಂದ ಯೋಗ ಶಿಕ್ಷಕಿ, ಮುಂದೇನಾಯ್ತು?
ಇನ್ನೂ ಇದೇ ರೀತಿ ಕಳೆದ ಕೆಲ ದಿನಗಳ ಹಿಂದೆ ತಡರಾತ್ರಿ ಶೌಚಾಲಯಕ್ಕೆ ಹೋಗೋಕ್ಕೆ ಅಂತ ಮನೆಯಿಂದ ಹೊರಗಡೆ ಬಂದಿದ್ದ ಮಹಿಳೆಯ ಬಾಯಿಯನ್ನು ಹಿಂದಿನಿಂದ ಬಂದ ಕಿಡಿಗೇಡಿಗಳು ಮುಚ್ಚಿಕೊಂಡು ನಿರ್ಜನ ಪ್ರದೇಶಕ್ಕೆ ಎಳೆದೋಯ್ದಿದ್ದು ಮಹಿಳೆಯ ಸರಗಳ್ಳತನಕ್ಕೆ ಯತ್ನಿಸಿದ್ದಾರೆ. ಆದರೆ ಈ ವೇಳೆ ಮಹಿಳೆ ಸರಗಳ್ಳತನ ಮಾಡಲು ಬಿಡದಿದಕ್ಕೆ ಆಕೆಯ ಮೇಲೆ ಹಲ್ಲೆ ನಡೆಸಿದ ಖದೀಮರು ನಂತರ ಆಕೆಯ ಬಟ್ಟೆಗಳನ್ನ ಹರಿದು ಪ್ರಜ್ನೆ ತಪ್ಪಿಸಿ ಸ್ಥಳದಿಂದ ಎಸ್ಕೇಪ್ ಆಗಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.