ಚನ್ನಪಟ್ಟಣದಲ್ಲಿ ದೇವೇಗೌಡ, ಕುಮಾರಸ್ವಾಮಿ ಗುಂಟೆ ಜಮೀನಾದರೂ ದಾನ ಮಾಡಿದ್ದಾರಾ? ಶಿವಕುಮಾರ್
ದೇವೇಗೌಡರು ಬಹಳ ಹಿರಿಯರು, ಅವರ ವಯಸ್ಸಿಗೆ ಗೌರವ ಕೊಡ್ತೀನಿ, ಅದರೆ ಅವರು ಜನರಿಗೆ ಮಾಡಿರುವ ಮೋಸವನ್ನು ಹೇಳುವುದು ನನ್ನ ಕರ್ತವ್ಯವಾಗಿದೆ ಎಂದು ಹೇಳಿದ ಶಿವಕುಮಾರ್, ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಮನೆಯಲ್ಲಿ ಹೊದ್ದು ಮಲಗಿದ್ದರೆ ಡಿಕೆ ಸುರೇಶ್ ಮನೆಮನೆ ತಿರುಗಿ ಜನರ ಅರೋಗ್ಯ ವಿಚಾರಿಸುತ್ತಿದ್ದರು ಎಂದರು.
ರಾಮನಗರ: ಚನ್ನಪಟ್ಟಣ ಉಪ ಚುನಾವಣೆ ಡಿಕೆ ಶಿವಕುಮಾರ್ ಮತ್ತು ಹೆಚ್ ಡಿ ದೇವೇಗೌಡರ ಕುಟುಂಬಗಳ ನಡುವಿನ ಪ್ರತಿಷ್ಠೆಯ ಕಾಳಗವಾಗಿದೆ. ಚಕ್ಕೆರೆ ಗ್ರಾಮದಲ್ಲಿ ಯೋಗೇಶ್ವರ್ ಪರ ಪ್ರಚಾರ ಮಾಡಿದ ಶಿವಕುಮಾರ್, ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೆರವಾಗಲು ನನ್ನ ತಂದೆ ದೊಡ್ಡಾಲನಹಳ್ಳಿ ಕೆಂಪೇಗೌಡರ ಹೆಸರಲ್ಲಿ 25 ಎಕರೆ ಜಮೀನು ದಾನ ನೀಡಿ ಶಾಲೆಗಳನ್ನು ಕಟ್ಟಿಸಿದ್ದೇನೆ, ಆದರೆ ದೇವೇಗೌಡರಾಗಲೀ ಕುಮಾರಸ್ವಾಮಿಯಾಗಲೀ ಒಂದು ಗುಂಟೆ ಜಮೀನಾದರೂ ದಾನವಾಗಿ ಕೊಟ್ಟಿದ್ದರಾ ಎಂದು ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕೌಂಟರ್: ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂದ ಬೆಂಬಲಿಗರು