ಯೋಗೇಶ್ವರ್ ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ಟೋಪಿ ಹಾಕಿದರು: ಕುಮಾರಸ್ವಾಮಿ
ಯೋಗೇಶ್ವರ್ ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ಟೋಪಿ ಹಾಕಿದರು, ಅನಿವಾರ್ಯ ಕಾರಣಗಳಿಂದಾಗಿ ನಿಖಿಲ್ ಕುಮಾರಸ್ವಾಮಿಯನ್ನು ಚುನಾವಣೆಗೆ ನಿಲ್ಲಿಸಬೇಕಾಯಿತು, ಸೋಲು ಗೆಲುವು ಮುಖ್ಯವಲ್ಲ, ಕ್ಷೇತ್ರದ ಕಾರ್ಯಕರ್ತರು ಮುಖ್ಯ, ಅವರಿಗಾಗಿ ಸ್ಪರ್ಧಿಸಲೇಬೇಕು ಎಂದು ನಿಖಿಲ್ಗೆ ಹೇಳಿದ್ದೆ ಎಂದು ಕುಮಾರಸ್ವಾಮಿ ಹೇಳಿದರು.
ರಾಮನಗರ: ಯೋಗೇಶ್ವರ್ ಬಿಜೆಪಿಯಿಂದ ಸ್ಪರ್ಧಿಸುವ ಹಟ ಮಾಡುತ್ತಿದ್ದರು, ಆದರೆ ಕಳೆದ 20 ವರ್ಷಗಳಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಅವರು ತುಂಬ ನೋವು ಕೊಟ್ಟಿದ್ದಾರೆ, ಅವರ ಜೊತೆ ಬೆರೆತು ವಿಶ್ವಾಸ ಗಳಿಸಿಕೊಳ್ಳಲಿ ಎಂದು ಹೇಳಿದ್ದೆ, ನಂತರ ಯೋಗೇಶ್ವರ್ ಅವರು ಜೆಡಿಎಸ್ ಷಕ್ಷದಿಂದ ಸ್ಪರ್ಧಿಸುವ ಒಲವು ತೋರಿದಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಅವರ ಬೇಡ ಅನ್ನಲಿಲ್ಲ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹ ನನಗೆ ಫೋನ್ ಮಾಡಿ ದೊಡ್ಡ ಮನಸ್ಸು ಮಾಡಲು ಹೇಳಿದರು, ಸರಿ ಎಂದು ನಾನು ಯೋಗೇಶ್ವರ್ ಜೆಡಿಎಸ್ನಿಂದ ಸ್ಪರ್ಧಿಸಲು ಒಪ್ಪಿಕೊಂಡಿದ್ದೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಟಿಟ್ ಫಾರ್ ಟ್ಯಾಟ್; ಡಿಕೆ ಸುರೇಶ್ ಆಡಿಯೋ ಬಹಿರಂಗಗೊಳಿಸಿದ ಹೆಚ್ ಡಿ ಕುಮಾರಸ್ವಾಮಿ
Latest Videos