ನನ್ನ ರಾಜಕಾರಣ ಮಂಡ್ಯದಲ್ಲೇ: ಜನವರಿಯಿಂದ ಮತ್ತೆ ಪಕ್ಷ ಸಂಘಟನೆ ಮಾಡುತ್ತೇನೆ, ಮಾಜಿ ಸಂಸದೆ ಸುಮಲತಾ

ಲೋಕಸಭಾ ಚುನಾವಣೆಯ ನಂತರ ವಿಶ್ರಾಂತಿ ಪಡೆದಿರುವ ಮಾಜಿ ಸಂಸದೆ ಸುಮಲತಾ ಅಂಬರೀಶ್, ಜನವರಿಯಿಂದ ಮಂಡ್ಯದಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗುವುದಾಗಿ ತಿಳಿಸಿದ್ದಾರೆ. ತಮ್ಮ ರಾಜಕೀಯ ಭವಿಷ್ಯ ಮಂಡ್ಯದಲ್ಲೇ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ. ನನ್ನ ಹಿಂದೆ ಮಾತನಾಡಿದರೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.

ನನ್ನ ರಾಜಕಾರಣ ಮಂಡ್ಯದಲ್ಲೇ: ಜನವರಿಯಿಂದ ಮತ್ತೆ ಪಕ್ಷ ಸಂಘಟನೆ ಮಾಡುತ್ತೇನೆ, ಮಾಜಿ ಸಂಸದೆ ಸುಮಲತಾ
ನನ್ನ ರಾಜಕಾರಣ ಮಂಡ್ಯದಲ್ಲೇ: ಜನವರಿಯಿಂದ ಮತ್ತೆ ಪಕ್ಷ ಸಂಘಟನೆ ಮಾಡುತ್ತೇನೆ, ಮಾಜಿ ಸಂಸದೆ ಸುಮಲತಾ
Follow us
ಪ್ರಶಾಂತ್​ ಬಿ.
| Updated By: ಗಂಗಾಧರ​ ಬ. ಸಾಬೋಜಿ

Updated on:Nov 08, 2024 | 7:07 PM

ಮಂಡ್ಯ, ನವೆಂಬರ್​ 08: ಲೋಕಸಭಾ ಚುನಾವಣೆ ನಂತರ ಕೆಲ ತಿಂಗಳು ಗ್ಯಾಪ್ ಪಡೆದು ವಿಶ್ರಾಂತಿ ಮಾಡಿದ್ದೇನೆ. ಹೊಸ ವರ್ಷಕ್ಕೆ ಜನವರಿಯಿಂದ ಮತ್ತೆ ಪಕ್ಷ ಸಂಘಟನೆ ಮಾಡುತ್ತೇನೆ. ನನ್ನ ರಾಜಕಾರಣ ಮಂಡ್ಯದಲ್ಲೇ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ (Sumalatha) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐದು ವರ್ಷಗಳಲ್ಲಿ ನನಗೆ ಅಂತಾ ಸಮಯವಿರಲಿಲ್ಲ. ಇನ್ನು ಮೇಲೆ ಮಂಡ್ಯದಲ್ಲಿ ಓಡಾಡುತ್ತೇನೆ ಎಂದಿದ್ದಾರೆ.

ನನಗೆ ಒಂದು ರೆಸ್ಟ್ ಬೇಕಿತ್ತು. ಐದು ವರ್ಷದಲ್ಲಿ ಸಾಕಷ್ಟು ಹಳ್ಳಿಗಳಿಗೆ ಹೋಗಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಬೆಲೆಕೊಟ್ಟು ಕ್ಷೇತ್ರ ತ್ಯಾಗ ಮಾಡಿದೆ. ಜನವರಿಯಿಂದ  ಸಕ್ರೀಯವಾಗಿ ಮಂಡ್ಯದಲ್ಲಿ ಓಡಾಡುತ್ತೇನೆ ಎಂದು ಹೇಳಿದ್ದಾರೆ.

ಬಿಜೆಪಿಯಲ್ಲಿ ಸುಮಲತಾ ಸೈಡ್ ಲೈನ್ ಆದ್ರಾ?

ಬಿಜೆಪಿಯಲ್ಲಿ ಸುಮಲತಾ ಸೈಡ್ ಲೈನ್ ಆದರಾ ಎಂಬ ವಿಚಾರವಾಗಿ ಮಾತನಾಡಿದ ಅವರು, ನಾನು ಸೈಡ್ ಲೈನ್ ಅಂತಾ ನೋಡುತ್ತಿಲ್ಲ. ಬಿಜೆಪಿ ಅವರು ನನ್ನನ್ನ ಚುನಾವಣಾ ಪ್ರಚಾರಕ್ಕೆ ಕರೆಯದೇ ಇರುವ ಬಗ್ಗೆ ಅಷ್ಟಾಗಿ ನಾನು ಗಮನ ಕೊಟ್ಟಿಲ್ಲ. ನನ್ನ ಅಗತ್ಯ ಎಲ್ಲಿದೆ ಅಂತಾ ಅನಿಸುತ್ತೆ ಅಲ್ಲಿಗೆ ಕರೆಯುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ನನ್ನ ರಾಜಕೀಯ ಬದುಕಿನ 62 ವರ್ಷಗಳಲ್ಲಿ ಇಂಥ ಕೆಟ್ಟ ಸರ್ಕಾರವನ್ನು ಯಾವತ್ತೂ ನೋಡಿರಲಿಲ್ಲ: ದೇವೇಗೌಡ

ಕಳೆದ ಚುನಾವಣೆಯಲ್ಲಿ ಮಂಡ್ಯದಲ್ಲಿ ಯಾರು ಇಂತಹ ದಿನಾಂಕದಂದು ಪ್ರಚಾರಕ್ಕೆ ಬರಬೇಕು ಅಂತಾ ಹೇಳಲಿಲ್ಲ. ನಾನು ಇದನ್ನ ದೊಡ್ಡ ವಿಷಯ ಅಂದುಕೊಂಡಿಲ್ಲ. ಬೇರೆ ಕಡೆ ಪ್ರಚಾರ ಮಾಡಿದ್ದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಇದ್ದಿದ್ದರೆ ನನ್ನನ್ನ ಕರೆಯುತ್ತಿದ್ದರು ಅನಿಸುತ್ತೆ. ಆದರೆ ಮೈತ್ರಿ ಅಭ್ಯರ್ಥಿ ಇರುವುದರಿಂದ ಮಂಡ್ಯ ಲೋಕಸಭಾ ಚುನಾವಣೆ ನೋಡಿ ಕರೆದಿಲ್ಲ. ನಮಗೆ ಏನು ದ್ವೇಷವಿಲ್ಲ. ಅದು ಹಳೆದಾಗಿ ಹೋಗಿದೆ ಎಂದು ಹೇಳಿದ್ದಾರೆ.

ಮಂಡ್ಯದಲ್ಲಿ ಪಕ್ಷ ಬಲಪಡಿಸಬೇಕು ಎಂದು ಈಗಾಗಲೇ ಹೈಕಮಾಂಡ್​ಗೆ ಹೇಳಿದ್ದೇನೆ. ಹೆಚ್ಚು ಸಕ್ರೀಯವಾಗಿ ಇಲ್ಲ. ನನ್ನ ಅಸಮಾಧಾನವನ್ನ ತಿಳಿಸಿದ್ದೇನೆ. ಮೈತ್ರಿ ಇದ್ದಾಗ ಪಕ್ಷ ಸಂಘಟನೆ ಒಂದು ಚಾಲೆಂಜ್​. ಚುನಾವಣೆ ನಂತರ ಈ ಕಡೆ ಗಮನಹರಿಸುತ್ತಾರೆ. ನಾನು ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡಿಲ್ಲ. ಬೆಂಬಲಿಗರು ಆಸೆ ಪಡುವುದರಲ್ಲಿ ತಪ್ಪಿಲ್ಲ. ನನ್ನ ರಾಜಕಾರಣ ಮಂಡ್ಯದಲ್ಲಿ ಇರುತ್ತದೆ ಎಂದಿದ್ದಾರೆ.

ನನ್ನ ಹಿಂದೆ ಮಾತನಾಡಿದ್ರೆ ನಾನು ಪ್ರತಿಕ್ರಿಯೆ ನೀಡಲ್ಲ

ಪಕ್ಷದಿಂದ ಸೂಚನೆ ಬಂದರೆ ಉಪಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ. ನನ್ನ ಹಿಂದೆ ಮಾತನಾಡಿದರೆ ನಾನು ಪ್ರತಿಕ್ರಿಯೆ ನೀಡಲ್ಲ. ಮಂಡ್ಯದಲ್ಲಿ ಕೆಲವು ವಿಚಾರಗಳು ಸರಿಹೋಗಬೇಕು. ರಾಜ್ಯ ನಾಯಕರು ಮಂಡ್ಯದಲ್ಲಿ ಪಕ್ಷ ಸಂಘಟನೆ ಬಗ್ಗೆ ಇನ್ನು ಗಮನ ಕೊಟ್ಟಿಲ್ಲ. ಕೆಳ ಹಂತದಿಂದ ಪಕ್ಷ ಸಂಘಟನೆ ಮಾಡಿದರೆ ಮುಂದೆ ಚುನಾವಣೆ ‌ಎದುರಿಸಬಹುದು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:01 pm, Fri, 8 November 24

ಮಕ್ಕಳ ಮೇಲೆ ಗ್ರಹಗಳ ಪ್ರಭಾವ ಹೇಗಿರುತ್ತೆ ? ವಿಡಿಯೋ ನೋಡಿ
ಮಕ್ಕಳ ಮೇಲೆ ಗ್ರಹಗಳ ಪ್ರಭಾವ ಹೇಗಿರುತ್ತೆ ? ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಇಂದು ಹೆಚ್ಚಿನ ಧನ ಪ್ರಾಪ್ತಿಯಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಹೆಚ್ಚಿನ ಧನ ಪ್ರಾಪ್ತಿಯಾಗಲಿದೆ
ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಪೊಲೀಸರ ಬಿಗಿ ಭದ್ರತೆ
ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಪೊಲೀಸರ ಬಿಗಿ ಭದ್ರತೆ
ಆಸ್ಪತ್ರೆಯೊಳಗೆ ಜೋರಾಗಿ ಹಾಡು ಹಾಕಿ ನರ್ಸ್​ಗಳ ಡ್ಯಾನ್ಸ್
ಆಸ್ಪತ್ರೆಯೊಳಗೆ ಜೋರಾಗಿ ಹಾಡು ಹಾಕಿ ನರ್ಸ್​ಗಳ ಡ್ಯಾನ್ಸ್
ಗುಲ್ಮಾರ್ಗ್​ನಲ್ಲಿ ತಾಜಾ ಹಿಮಪಾತ; ಕುಣಿದು ಕುಪ್ಪಳಿಸಿದ ಪ್ರವಾಸಿಗರು
ಗುಲ್ಮಾರ್ಗ್​ನಲ್ಲಿ ತಾಜಾ ಹಿಮಪಾತ; ಕುಣಿದು ಕುಪ್ಪಳಿಸಿದ ಪ್ರವಾಸಿಗರು
ದತ್ತಜಯಂತಿ: ಶೋಭಾಯಾತ್ರೆಯ ಮನಮೋಹಕ ದೃಶ್ಯ ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ದತ್ತಜಯಂತಿ: ಶೋಭಾಯಾತ್ರೆಯ ಮನಮೋಹಕ ದೃಶ್ಯ ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ಬಿಜೆಪಿ ಅಧಿಕಾರದಲ್ಲಿದ್ದಾಗ ಯತ್ನಾಳ್ ಯಾಕೆ ವಕ್ಫ್ ವಿಷಯ ಮಾತಾಡಲಿಲ್ಲ: ಸಚಿವ
ಬಿಜೆಪಿ ಅಧಿಕಾರದಲ್ಲಿದ್ದಾಗ ಯತ್ನಾಳ್ ಯಾಕೆ ವಕ್ಫ್ ವಿಷಯ ಮಾತಾಡಲಿಲ್ಲ: ಸಚಿವ
ಕ್ಲಾಸ್​ ರೂಂನಲ್ಲೇ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿಗಳು
ಕ್ಲಾಸ್​ ರೂಂನಲ್ಲೇ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿಗಳು
ದರ್ಶನ್ ನಂಬಿಕೊಂಡು ಹಲವು ಕುಟುಂಬಗಳು ಇವೆ: ತರುಣ್ ಸುಧೀರ್​
ದರ್ಶನ್ ನಂಬಿಕೊಂಡು ಹಲವು ಕುಟುಂಬಗಳು ಇವೆ: ತರುಣ್ ಸುಧೀರ್​
ಧಾರವಾಡ ಸಭೆಯಲ್ಲಿ ಭಾಗಿಯಾಗಿದ್ದ ಬೆಲ್ಲದ್ ಸತ್ಯ ಸಭೆಗೆ ತಿಳಿಸಲಿ: ಜಮೀರ್
ಧಾರವಾಡ ಸಭೆಯಲ್ಲಿ ಭಾಗಿಯಾಗಿದ್ದ ಬೆಲ್ಲದ್ ಸತ್ಯ ಸಭೆಗೆ ತಿಳಿಸಲಿ: ಜಮೀರ್