ಅಧಿಕಾರದಲ್ಲಿದ್ದರೂ ಮೇಕೆದಾಟು ಯೋಜನೆಗಾಗಿ ಶಿವಕುಮಾರ್ ಏನೂ ಮಾಡಿಲ್ಲ: ಬಸನಗೌಡ ಯತ್ನಾಳ್
ಮೇಕೆದಾಟು ಪದದ ಅರ್ಥ ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್, ಪಾದಯಾತ್ರೆ ನಡೆಯುತ್ತಿದ್ದಾಗ ಹಿನ್ನೆಲೆಯಲ್ಲಿ ಕೇಳಿಸುತ್ತಿದ್ದ ಕಚ್ಚಾ ಬಾದಾಮ್ ಹಾಡಿಗೆ ಶಿವಕುಮಾರ್ ಡ್ಯಾನ್ಸ್ ಮಾಡುತ್ತಿದ್ದರು ಅಂತ ಹೇಳಿದರಲ್ಲದೆ ಕುಣಿತ ಹೇಗಿರುತ್ತಿತ್ತು ಅನ್ನೋದನ್ನು ತೋರಿಸಿದರು. ಸಂಜೆ ಅರು ಗಂಟೆಯಾದ ಕೂಡಲೇ ಕಂಠಮಟ್ಟ ಕುಡಿಯುವುದು ಪಾದಯಾತ್ರೆಯಲ್ಲಿ ನಡೆಯುತಿತ್ತು ಎಂದು ಯತ್ನಾಳ್ ಹೇಳಿದರು.
ಹಾವೇರಿ: ಶಿಗ್ಗಾವಿ ಉಪ ಚುನಾವಣೆ ಪ್ರಯುಕ್ತ ಗ್ರಾಮವೊಂದರಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಮಾಡಿದ ಪ್ರಚಾರ ಭಾಷಣದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಶಿವಕುಮಾರ್ರನ್ನು ಟಾರ್ಗೆಟ್ ಮಾಡಿದರು. ಮೇಕೆದಾಟು ಯೋಜನೆಗಾಗಿ ಶಿವಕುಮಾರ್ ಪಾದಯಾತ್ರೆಯನ್ನು ಗೇಲಿ ಮಾಡಿದ ಯತ್ನಾಳ್ ಅದರಿಂದ ಆದ ಪ್ರಯೋಜನವೇನು ಎಂದು ಪ್ರಶ್ನಿಸಿದರು. ಬಸವರಾಜ ಬೊಮ್ಮಯಿ ಮೇಕೆದಾಟು ಯೋಜನೆಗಾಗಿ ₹ 1,000 ಕೋಟಿ ಬಿಡುಗಡೆ ಮಾಡಿದ್ದರು, ಶಿವಕುಮಾರ್ ಈಗ ಅಧಿಕಾರದಲ್ಲಿದ್ದರೂ ಏನೂ ಮಾಡಿಲ್ಲ ಎಂದು ಯತ್ನಾಳ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯ ಮುಂದಿನ ಜನ್ಮದವರೆಗೆ ಕಾಯೋದ್ಯಾಕೆ ಈಗಲೇ ಮುಸ್ಲಿಂ ಆಗಲಿ: ಬಸನಗೌಡ ಪಾಟೀಲ್ ಯತ್ನಾಳ್
Follow Us
Latest Videos

