AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರ ಮತ್ತು ಚನ್ನಪಟ್ಟಣಗಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳ ವಿವರ ನೀಡಿದ ಕುಮಾರಸ್ವಾಮಿ

ರಾಮನಗರ ಮತ್ತು ಚನ್ನಪಟ್ಟಣಗಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳ ವಿವರ ನೀಡಿದ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 08, 2024 | 7:49 PM

ತನ್ನನ್ನು ಬೆಳೆಸಿದ್ದು ಚನ್ನಪಟ್ಟಣದ ಜನ, ಇವತ್ತು ಕೇಂದ್ರದಲ್ಲಿ ಸಚಿವನಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಕ್ಕದಲ್ಲಿ ಕೂರುವ ಸೌಭಾಗ್ಯ ತನಗೆ ಸಿಕ್ಕಿದ್ದು ಇಲ್ಲಿಯ ಜನರ ಪ್ರೀತಿ ವಿಶ್ವಾಸಗಳಿಂದ, ತನ್ನನ್ನು ಮನೆ ಮಗನಾಗಿ ಬೆಳೆಸಿದ ಜನರ ಕೈ ಯಾವತ್ತೂ ಬಿಡಲ್ಲ, ತನ್ನ ಹಾಗೆ ನಿಖಿಲ್ ಕುಮಾರಸ್ವಾಮಿಯನ್ನೂ ಬೆಳೆಸುವಂತೆ ಕುಮಾರಸ್ವಾಮಿ ಕೋರಿದರು.

ರಾಮನಗರ: ಚನ್ನಪಟ್ಟಣ ಕ್ಷೇತ್ರದ ನಿಡಗೋಡಿಯಲ್ಲಿ ಮಗನಿಗಾಗಿ ಚುನಾವಣಾ ಪ್ರಚಾರ ಮಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಿಗೆ ತಾವು ಮತ್ತು ಮಾಜಿ ಪ್ರಧಾನಿ ದೇವೇಗೌಡರು ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. 1983ರಲ್ಲಿ ದೇವೇಗೌಡರು ಇಗ್ಲೂರ್ ಜಲಾಶಯ ಕಟ್ಟಿಸಿದ ಬಳಿಕ ಮಾಗಡಿ, ರಾಮನಗರ ಮತ್ತು ಚನ್ನಪಟ್ಟಣ ತಾಲ್ಲೂಕುಗಳಿಗೆ ನೀರು ಕೊಡುವ ಕೆಲಸವನ್ನು ತಾನು ಮಾಡಿದ್ದಾಗಿ ಹೇಳಿದ ಕುಮಾರಸ್ವಾಮಿ ₹550 ಕೋಟಿ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಸುವ ಕೆಲಸವೂ ತಮ್ಮಿಂದಾಗಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಯೋಗೇಶ್ವರ್ ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ಟೋಪಿ ಹಾಕಿದರು: ಕುಮಾರಸ್ವಾಮಿ