ಕರ್ನಾಟಕದ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ; 19 ಪೊಲೀಸರಿಗೆ ಪೊಲೀಸ್ ಸೇವಾ ಪದಕ ಘೋಷಣೆ
ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಕರ್ನಾಟಕದ ಎಡಿಜಿಪಿಗಳಾದ ಉಮೇಶ್ ಕುಮಾರ್ ಮತ್ತು ಅರುಣ್ ಚಕ್ರವರ್ತಿ ಅವರಿಗೆ ರಾಷ್ಟ್ರಪ್ರತಿ ಪದಕ ಘೋಷಿಸಲಾಗಿದೆ. ಹಾಗೇ, ಕರ್ನಾಟಕದ 19 ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಸೇವಾ ಪದಕ ವಿತರಿಸಲಾಗುವುದು.
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅತ್ಯುತ್ತಮ ಸೇವೆ ಸಲ್ಲಿಸಿದ ಭಾರತದ 1,380 ಪೊಲೀಸ್ ಸಿಬ್ಬಂದಿಗೆ ನಾಳೆ ರಾಷ್ಟ್ರಪತಿ ಪದಕ ಹಾಗೂ ಪೊಲೀಸ್ ಸೇವಾ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ. ಆ ಪಟ್ಟಿಯಲ್ಲಿ ಕರ್ನಾಟಕದ 21 ಪೊಲೀಸ್ ಅಧಿಕಾರಿಗಳು ಕೂಡ ಇದ್ದಾರೆ. ಕರ್ನಾಟಕದ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ (President’s Police Medal) ಹಾಗೂ 19 ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಸೇವಾ ಪದಕ ಘೋಷಿಸಲಾಗಿದೆ.
ಭಾರತದ 88 ಪೊಲೀಸ್ ಅಧಿಕಾರಿಗಳಿಗೆ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಾಷ್ಟ್ರಪತಿ ಪದಕ ನೀಡಲಾಗುವುದು. ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಶೌರ್ಯ ಪದಕ ಘೋಷಿಸಲಾಗಿದೆ. ಹಾಗೇ, 662 ಪೊಲೀಸರಿಗೆ ಪೊಲೀಸ್ ಸೇವಾ ಪದಕ ನೀಡಲಾಗುವುದು. ಕರ್ನಾಟಕದ ಇಬ್ಬರು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ)ರಾದ ಉಮೇಶ್ ಕುಮಾರ್, ಅರುಣ್ ಚಕ್ರವರ್ತಿ ಅವರಿಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ. ಹಾಗೇ, 19 ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಸೇವಾ ಪದಕ ವಿತರಿಸಲಾಗುವುದು.
ಪೊಲೀಸ್ ಸೇವಾ ಪದಕ ಪ್ರಶಸ್ತಿ ವಿಜೇತ ಅಧಿಕಾರಿಗಳು: * ಮೋಹನ, ಎಎಸ್ಪಿ, ಸೈಬರ್ ಕ್ರೈಂ ಪೊಲೀಸ್ ಠಾಣೆ, ಮಂಗಳೂರು * ರಾಮಕೃಷ್ಣ ಪ್ರಸಾದ್ ವಿ.ಎಂ, ಕಮಾಂಡೆಂಟ್, 3ನೇ ಬೆಟಾಲಿಯನ್, ಕೆ ಎಸ್ಆರ್ಪಿಸಿ, ಬೆಂಗಳೂರು * ವೆಂಕಟೇಶ ನಾಯ್ಡು, ಎಸಿಪಿ, ಮಲ್ಲೇಶ್ವರಂ, ಬೆಂಗಳೂರು * ರವೀಂದ್ರ ಪಾಂಡುರಂಗಪ್ಪ, ಎಸಿಪಿ, ಚಿಕ್ಕಪೇಟೆ, ಬೆಂಗಳೂರು * ನವೀನ್ ಕುಲಕರ್ಣಿ, ಡಿಸಿಪಿ, ಎಡಿಜಿಪಿ ಇಂಟೆಲಿಜೆನ್ಸ್, ಬೆಂಗಳೂರು * ಸಿದ್ದರಾಜು ಜಿ, ಪಿಐ, ತಲಘಟ್ಟಪುರ, ಬೆಂಗಳೂರು * ದಯಾನಂದ್ ಎಂ. ಜೆ, ಪೊಲೀಸ್ ಇನ್ಸ್ಪೆಕ್ಟರ್, ಎಸಿಬಿ, ಬೆಂಗಳೂರು * ಗೀತಾ ಈಶ್ವರಪ್ಪ, ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್, ಸ್ಟೇಟ್ ಇಂಟೆಲಿಜೆನ್ಸ್, ಬೆಂಗಳೂರು * ಗೋವರ್ಧನ ರಾವ್ ಡಿ. ಎಸ್, ಸ್ಪೆಷಲ್ ಅಸಿಸ್ಟೆಂಟ್ ರಿಸರ್ವ್ ಸಬ್ ಇನ್ಸ್ಪೆಕ್ಟರ್, 3ನೇ ಬೆಟಾಲಿಯನ್, ಕೆಎಸ್ಆರ್ಪಿ, ಬೆಂಗಳೂರು
* ವಿ. ಸೋಮಶಂಕರ್, ಎಎಚ್ಸಿ, ಎಪಿಟಿಎಸ್, ಯಲಹಂಕ, ಬೆಂಗಳೂರು * ರಾಮ ನಾಯ್ಕ್, ಎಎಸ್ಪಿ, ಬೆಂಗಳೂರು * ಮೊಹಮದ್ ಮುನಾವರ್ ಪಾಷಾ, ಸಿವಿಲ್ ಹೆಡ್ ಕಾನ್ಸ್ಟೇಬಲ್, ಜಯನಗರ ಪೊಲೀಸ್ ಠಾಣೆ, ತುಮಕೂರು * ಸಂಗನಬಸು ಪರಮನ್ನ ಕೆರುಟಗಿ, ರಿಸರ್ವ್ ಹೆಡ್ ಕಾನ್ಸ್ಟೇಬಲ್, 4ನೇ ಬೆಟಾಲಿಯನ್, ಕೆಎಸ್ಆರ್ಪಿ, ಬೆಂಗಳೂರು * ದಾದಾ ಅಮೀರ್ ಬಿ.ಎಸ್, ಆರ್ಮಡ್ ಹೆಡ್ ಕಾನ್ಸ್ಟೇಬಲ್, ಐಜಿಪಿ ಆಫೀಸ್, ಬಳ್ಳಾರಿ * ರಾಜಪ್ಪ ಕುಮಾರ್, ಸಿವಿಲ್ ಹೆಡ್ ಕಾನ್ಸ್ಟೇಬಲ್, ಜಿಲ್ಲಾ ಪೊಲೀಸ್ ಕಚೇರಿ, ಚಿಕ್ಕಮಗಳೂರು * ಸೈಯದ್ ಅಬ್ದುಲ್ ಖಾದರ್, ಸ್ಪೆಷಲ್ ರಿಸರ್ವ್ ಹೆಡ್ ಕಾನ್ಸ್ಟೇಬಲ್, 3ನೇ ಬೆಟಾಲಿಯನ್ ಕೆಎಸ್ಆರ್ಪಿ, ಬೆಂಗಳೂರು * ಗೋಪಾಲಪ್ಪ ದೇವೇಂದ್ರಪ್ಪ ಕೊಟಬಗಿ, ಪೊಲೀಸ್ ಹೆಡ್ ಕಾನ್ಸ್ಟೇಬಲ್, ಸಿಸಿಆರ್ಬಿ, ಹುಬ್ಬಳ್ಳಿ- ಧಾರವಾಡ * ಶಂಕರ್ ಗೌಡ ಪಾಟೀಲ್, ಸರ್ಕಲ್ ಇನ್ಸ್ಪೆಕ್ಟರ್, ಕಲಬುರ್ಗಿ ಗ್ರಾಮೀಣ * ಶೆಟಪ್ಪ ಬಸವಂತ್ ಮಾಳಗಿ, ರಿಸರ್ವ್ ಸಬ್ ಇನ್ಸ್ಪೆಕ್ಟರ್, ಕೆಎಸ್ಆರ್ಪಿ, ಪಿಟಿಎಸ್, ಬೆಳಗಾವಿ
ಈ 21 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಪದಕಗಳನ್ನು ವಿತರಿಸಲಿದ್ದಾರೆ.
ಇದನ್ನೂ ಓದಿ: 75ನೇ ಸ್ವಾತಂತ್ರ್ಯೋತ್ಸವ: ಇಂದು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ರಾಷ್ಟ್ರಪತಿ ರಾಮನಾಥ ಕೋವಿಂದ್
(Including Two IPS Officers 21 Police Officers of Karnataka Conferred for President’s Medal and Police Medal )
Published On - 7:38 pm, Sat, 14 August 21