IT Raid: ಕಾರಿಗೆ ಫುಟ್​ಬಾಲ್​ ಸ್ಟಿಕರ್​ ಅಂಟಿಸಿ ಫೀಲ್ಡ್​ಗಿಳಿದ ಐಟಿ ಅಧಿಕಾರಿಗಳು, ತೆರಿಗೆ ವಂಚಕರ ವಿರುದ್ಧ ‘ಚೆಂಡಾ’ಮಂಡಲ

|

Updated on: Feb 17, 2021 | 12:53 PM

IT Department: ದಾಳಿ ನಡೆಸಲು ಸಿದ್ಧವಾಗಿದ್ದ ಅಧಿಕಾರಿಗಳು ನಿನ್ನೆ ಸಂಜೆ‌ಯೇ 60 ಕಾರುಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಯಾರಿಗೂ ಅನುಮಾನಬಾರದೆಂಬ ಕಾರಣಕ್ಕೆ ಇಂಟರ್​ಸ್ಟೇಟ್ ಫುಟ್ಬಾಲ್ ಚಾಂಪಿಯನ್​ಶಿಪ್​ ಆಡಲು ಕೇರಳಕ್ಕೆ ಹೋಗಬೇಕು ಎಂಬ ಕಾರಣ ನೀಡಿದ್ದರು.

IT Raid: ಕಾರಿಗೆ ಫುಟ್​ಬಾಲ್​ ಸ್ಟಿಕರ್​ ಅಂಟಿಸಿ ಫೀಲ್ಡ್​ಗಿಳಿದ ಐಟಿ ಅಧಿಕಾರಿಗಳು, ತೆರಿಗೆ ವಂಚಕರ ವಿರುದ್ಧ ‘ಚೆಂಡಾ’ಮಂಡಲ
ಫುಟ್​ಬಾಲ್​ ಚಾಂಪಿಯನ್​ಶಿಪ್​ ಸ್ಟಿಕರ್​ ಅಂಟಿಸಿಕೊಂಡು ಅಖಾಡಕ್ಕಿಳಿದ ಐಟಿ ಅಧಿಕಾರಿಗಳು
Follow us on

ರಾಜ್ಯದ ವಿವಿಧೆಡೆ ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ತೆರಿಗೆ ವಂಚಕರನ್ನು ಬೆಚ್ಚಿಬೀಳಿಸಿದ್ದಾರೆ. ಸಾಧಾರಣವಾಗಿ ದಾಳಿ ವಿಚಾರವನ್ನು ಅತ್ಯಂತ್ಯ ಗೌಪ್ಯವಾಗಿಡುವ ಅಧಿಕಾರಿಗಳು, ಪ್ರತಿಬಾರಿಯೂ ಗುಟ್ಟು ಬಿಟ್ಟುಕೊಡದೇ ಇರಲು ಒಂದಕ್ಕಿಂತ ಒಂದು ಅದ್ಭುತ ತಂತ್ರಗಳನ್ನು ಹೆಣೆಯುತ್ತಾರೆ. ಅಂತೆಯೇ ಈ ಬಾರಿಯೂ ದಾಳಿಗೆ ಮುನ್ನ ಮಾಸ್ಟರ್ ಪ್ಲಾನ್ ರೂಪಿಸಿದ ಐಟಿ ಅಧಿಕಾರಿಗಳು ಕಾರಿಗೆ ಫುಟ್​ಬಾಲ್​ ಸ್ಟಿಕರ್​ ಅಂಟಿಸಿಕೊಂಡು ಅಖಾಡಕ್ಕೆ ಇಳಿದಿದ್ದಾರೆ.

ದಾಳಿ ನಡೆಸಲು ಸಿದ್ಧವಾಗಿದ್ದ ಅಧಿಕಾರಿಗಳು ನಿನ್ನೆ ಸಂಜೆ‌ಯೇ 60 ಕಾರುಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಯಾರಿಗೂ ಅನುಮಾನಬಾರದೆಂಬ ಕಾರಣಕ್ಕೆ ಇಂಟರ್-​ಸ್ಟೇಟ್ ಫುಟ್ಬಾಲ್ ಚಾಂಪಿಯನ್​ಶಿಪ್​ ಆಡಲು ಕೇರಳಕ್ಕೆ ಹೋಗಬೇಕು ಎಂಬ ಕಾರಣ ನೀಡಿದ್ದರು. ನಂತರ ಎಲ್ಲಾ ಕಾರುಗಳ ಮೇಲೆ ಫುಟ್ಬಾಲ್ ಸ್ಟಿಕರ್ ಅಂಟಿಸಿದ್ದ ಸಿಬ್ಬಂದಿ ಇಂದು ಬೆಳಗ್ಗೆ ತೆರಿಗೆ ವಂಚಕರ ಮೇಲೆ ದಾಳಿ ಮಾಡಿ ಅಕ್ಷರಶಃ ಫುಟ್ಬಾಲ್ ಆಡಿದ್ದಾರೆ.

ಇದನ್ನೂ ಓದಿ: ಖಾಸಗಿ ಆಸ್ಪತ್ರೆ ಮಾಲೀಕರಿಗೆ ಐಟಿ ಶಾಕ್​ ಟ್ರೀಟ್​ಮೆಂಟ್, ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ದಾಳಿ​

ಕೊರೊನಾ ಸಂದರ್ಭದಲ್ಲಿ ಅವ್ಯವಹಾರ ನಡೆದಿದೆ ಮತ್ತು ಮೆಡಿಕಲ್​ ಕಾಲೇಜ್​ ಶುಲ್ಕ ವಿಚಾರದಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂಬ ಕಾರಣಕ್ಕೆ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿರುವ ಅಧಿಕಾರಿಗಳು, ಮಂಗಳೂರು, ಬೆಂಗಳೂರು, ನೆಲಮಂಗಲ, ತುಮಕೂರು ಸೇರಿದಂತೆ ವಿವಿಧೆಡೆ ದಾಳಿ ನಡೆಸಿ ಶಾಕ್​ ನೀಡಿದ್ದಾರೆ.

Published On - 12:50 pm, Wed, 17 February 21