IT Raid on Khodeys Group: ಬೆಂಗಳೂರಿನಲ್ಲಿ ಖೋಡೇಸ್ ಗ್ರೂಪ್ ಮೇಲೆ ಐಟಿ ದಾಳಿ; ಹರಿಖೋಡೆ ಸೋದರನ ಮನೆ ಮೇಲೂ IT Raid
IT Raid on Khodeys group ಬೆಂಗಳೂರಿನಲ್ಲಿ ಖೋಡೇಸ್ ಗ್ರೂಪ್ ಮೇಲೆ ಐಟಿ ದಾಳಿ ನಡೆದಿದೆ. ಶೇಷಾದ್ರಿ ರಸ್ತೆಯಲ್ಲಿರುವ ಮನೆ ಮತ್ತು ಆಫೀಸ್, ಕೋಣನಕುಂಟೆಯ ಫ್ಯಾಕ್ಟರಿ ಸೇರಿದಂತೆ 15 ಕ್ಕೂ ಹೆಚ್ಚು ಕಡೆ ದಾಳಿಗಳು ನಡೆದಿವೆ.
ಬೆಂಗಳೂರು: ಮದ್ಯ ಸಾಮ್ರಾಜ್ಯದ ಪ್ರಮುಖ ಕಂಪನಿಯಾದ ಬೆಂಗಳೂರಿನ ಖೋಡೇಸ್ ಗ್ರೂಪ್ ಮೇಲೆ ಐಟಿ ದಾಳಿ ನಡೆದಿದೆ. ಖೋಡೇಸ್ ಗ್ರೂಪ್ ಮಾಲೀಕರ ಮನೆ ಮತ್ತು ಕಚೇರಿ ಮೇಲೆ ಈ ದಾಳಿ ನಡೆದಿದೆ. ಖೋಡೇಸ್ ಗ್ರೂಪ್ನ 15ಕ್ಕೂ ಹೆಚ್ಚು ಕಡೆ ಐಟಿ ದಾಳಿಗಳು ನಡೆದಿದ್ದು, ಶೇಷಾದ್ರಿ ರಸ್ತೆಯಲ್ಲಿರುವ ಮನೆ ಮತ್ತು ಆಫೀಸ್, ಕೋಣನಕುಂಟೆಯ ಫ್ಯಾಕ್ಟರಿ ಸೇರಿದಂತೆ 15 ಕ್ಕೂ ಹೆಚ್ಚು ಕಡೆ ದಾಳಿಗಳು ನಡೆದಿವೆ. ಖೋಡೇಸ್ ಬ್ರಿವರೇಜಸ್ , ಖೋಡೆ ಆರ್ ಸಿ ಎ , ಖೋಡೆ ಇಂಡಿಯಾ ಫ್ಯಾಕ್ಟರಿಗಳ ಮೇಲೆ ಐಟಿ ದಾಳಿಯಾಗಿದೆ. ರಾಮಚಂದ್ರ ಖೋಡೆ , ಹರಿ ಖೋಡೆ ಸಹೋದರರ ಮನೆ ಮೇಲೆಯೂ ಐಟಿ ದಾಳಿಗಳು ನಡೆದಿದ್ದು, ಐಟಿ ಅಧಿಕಾರಿಗಳು ತಂಡೋಪತಂಡವಾಗಿ ಪರಿಶೀಲನೆ ನಡೆಸ್ತಿದ್ದಾರೆ.
Published On - 11:26 am, Tue, 9 February 21