ಬೆಂಗಳೂರಿಗರಿಗೆ ನೀರಿನ ಬರ ನೀಗಿಸುವುದರ ಜೊತೆಗೆ ದರ ಏರಿಕೆ ಶಾಕ್ ಕೊಟ್ಟ ಡಿಕೆಶಿ
ಬೆಂಗಳೂರಿನಲ್ಲಿ 5ನೇ ಹಂತದ ಕಾವೇರಿ ನೀರು ಪೂರೈಕೆಗೆ ರಾಜ್ಯ ಸರ್ಕಾರ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ವಿಜಯದಶಮಿ ದಿನದಂದು ಯೋಜನೆ ಉದ್ಘಾಟಿಸಲು ಸಿದ್ಧತೆಗಳು ನಡೆದಿವೆ. ಈ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು . ಇಂದು (ಸೆ.23) ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕು, ಹಲಗೂರು ಸಮೀಪದ ತೊರೆಕಾಡನಹಳ್ಳಿಯಲ್ಲಿ ಕಾವೇರಿ 5ನೇ ಹಂತದಲ್ಲಿ ನಿರ್ಮಿಸಲಾದ ಜಲರೇಚಕ ಯಂತ್ರಾಗಾರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದರೊಂದಿಗೆ ಬೆಂಗಳೂರಿಗರಿಗೆ ನೀರಿನ ಬರ ನೀಗಿಸಲು ಸರ್ಕಾರದ ಮುಂದಾಗಿದೆ. ಇದರ ಜೊತೆ ನೀರಿನ ದರ ಏರಿಕೆ ಶಾಕ್ ಕೊಟ್ಟಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್ 23): ಬೆಂಗಳೂರಿನಲ್ಲಿ 5ನೇ ಹಂತದ ಕಾವೇರಿ ನೀರು ಪೂರೈಕೆಗೆ ಸಿದ್ಧತೆ ಮಾಡಿಕೊಂಡಿದ್ದು, ಇದೇ ವಿಜಯದಶಮಿಯಂದು ಬೆಂಗಳೂರಿಗರಿಗೆ ನೀರಿನ ಬರ ನೀಗಿಸಲು ಸರ್ಕಾರ ಮುಂದಾಗಿದೆ. ಇದರ್ ಮಧ್ಯ ಬೆಂಗಳೂರಿಗರಿಗೆ ನೀರಿದ ದರ ಏರಿಕೆ ಶಾಕ್ ಕೊಟ್ಟಿದೆ. ಹೌದು…ಕಾವೇರಿ ನೀರಿನ ದರ ಏರಿಕೆ ಮಾಡಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಸ್ವತಃ ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಕೆ ಶಿವಕುಮಾರ್ ಅವರೇ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಅವರು ಇಂದು(ಸೆಪ್ಟೆಂಬರ್ 23) ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕು, ಹಲಗೂರು ಸಮೀಪದ ತೊರೆಕಾಡನಹಳ್ಳಿಯಲ್ಲಿ ಕಾವೇರಿ 5ನೇ ಹಂತದಲ್ಲಿ ನಿರ್ಮಿಸಲಾದ ಜಲರೇಚಕ ಯಂತ್ರಾಗಾರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾವೇರಿ ನೀರಿನ ದರವನ್ನು ಏರಿಕೆ ಮಾಡಲಾಗುತ್ತದೆ. ಯಾವಾಗಿನಿಂದ ನೀರಿನ ದರ ಏರಿಕೆ ಮಾಡುತ್ತೇವೆ ಎಂಬುದರ ಕುರಿತು ಶೀಘ್ರದಲ್ಲಿ ಹೇಳುತ್ತೆನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕಾವೇರಿನ ನೀರಿನ ದರ ಏರಿಕೆಯಾಗುವುದು ಪಕ್ಕಾ ಆದಂತಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 5ನೇ ಹಂತದ ಕಾವೇರಿ ನೀರು ಪೂರೈಕೆ: ವಿಜಯದಶಮಿಯಂದು ಉದ್ಘಾಟನೆಗೆ ಸಿದ್ಧತೆ
ಈಗಾಗಲೇ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ. ಅಲ್ಲದೇ ಅಡುಗೆ ಎಣ್ಣೆ ಸಹ ಏರಿಕೆಯಾಗಿದೆ. ಇದೀಗ ಬಸ್ ಟಿಕೆಟ್ ದರ ಮತ್ತು ನಂದಿನಿ ಹಾಲಿನ ದರ ಹೆಚ್ಚಳ ಮಾಡಲು ಚಿಂತನೆ ನಡೆಸಿದೆ. ಇದರ ಮಧ್ಯ ಈಗ ಕಾವೇರಿ ನೀರಿನ ದರ ಏರಿಕೆ ಮಾಡಲು ಸರ್ಕಾರ ಮುಂದಾಗಿದ್ದು, ಬೆಂಗಳೂರಿಗರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.
ಇತ್ತೀಚೆಗೆ, ಬೆಂಗಳೂರು ನೀರು ಸರಬರಾಜು ಮಂಡಳಿಯು ನೀರಿನ ಶುಲ್ಕವನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಅದರ ಬಗ್ಗೆ ಪ್ರತಿಕ್ರಿಯಿಸಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ನೀರಿನ ಶುಲ್ಕವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಸುಮಾರು 10 ವರ್ಷಗಳಿಂದ ನೀರಿನ ಶುಲ್ಕವನ್ನು ಹೆಚ್ಚಿಸಿಲ್ಲ. ಈಗ ನೀರಿನ ಸರಬರಾಜು ವೆಚ್ಛ, ಸರಬರಾಜು ವ್ಯವಸ್ಥೆಯ ನಿರ್ವಹಣಾ ವೆಚ್ಚ ಅಧಿಕವಾಗಿರುವುದಿರಂದ ನೀರಿನ ಶುಲ್ಕ ಏರಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದರು.
ಆದ್ರೆ, ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಪೆಟ್ರೋಲ್ ದರ, ಹಾಲಿನ ದರ ಹಾಗೂ ಮದ್ಯದ ದರವನ್ನು ರಾಜ್ಯ ಸರ್ಕಾರ ಹೆಚ್ಚಿಸಿತ್ತು. ಅದರಲ್ಲೂ ವಿಶೇಷವಾಗಿ, ಪೆಟ್ರೋಲ್ ದರ, ಹಾಲಿನ ದರ ಏರಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ನೀರಿನ ಶುಲ್ಕ ಹೆಚ್ಚಿಸದೇ ಇರಲು ನಿರ್ಧರಿಸಿತ್ತು. ಆದ್ರೆ, ಇದೀಗ ಡಿಕೆ ಶಿವಕುಮಾರ್ ಏಕಾಏಕಿ ಕಾವೇರಿನ ನೀರಿನ ದರ ಏರಿಕೆ ಮಾಡಲಾಗುತ್ತೆ ಎಂದು ಅಧಿಕೃತವಾಗಿಯೇ ಘೋಷಣೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:06 pm, Mon, 23 September 24