Cairn Energyಗೆ ₹8,000 ಕೋಟಿ ನೀಡುವಂತೆ ಭಾರತಕ್ಕೆ ಅಂತಾರಾಷ್ಟ್ರೀಯ ನ್ಯಾಯಮಂಡಳಿ ಸೂಚನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 23, 2020 | 3:40 PM

ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಪ್ರಕರಣ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿತ್ತು. ಆದರೆ, ಈಗ ಭಾರತವು ಪ್ರಕರಣವನ್ನು ಸೋತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಏತನ್ಮಧ್ಯೆ, Cairn Energy Plc ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

Cairn Energyಗೆ ₹8,000 ಕೋಟಿ ನೀಡುವಂತೆ ಭಾರತಕ್ಕೆ ಅಂತಾರಾಷ್ಟ್ರೀಯ ನ್ಯಾಯಮಂಡಳಿ ಸೂಚನೆ
ಸಾಂಕೇತಿಕ ಚಿತ್ರ
Follow us on

ನವದೆಹಲಿ: ಬ್ರಿಟನ್​ ಮೂಲದ ತೈಲ ಉತ್ಪಾದಕ ಸಂಸ್ಥೆ ಕೇರ್ನ್ ಎನರ್ಜಿಗೆ Cairn Energy PLC ₹8,000 ಸಾವಿರ ಕೋಟಿ ರೂಪಾಯಿ ನೀಡಬೇಕೆಂದು ಭಾರತ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ಸೂಚನೆ ನೀಡಿದೆ. ಈ ಸಂಸ್ಥೆಗೆ ನಷ್ಟ ಮಾಡಿದ ಆರೋಪದ ಮೇಲೆ ಇಷ್ಟು ದೊಡ್ಡ ಮೊತ್ತದ ಹಣ ಪಾವತಿಗೆ ಸೂಚಿಸಲಾಗಿದೆ.

ಈ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಪ್ರಕರಣ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿತ್ತು. ಆದರೆ, ಈಗ ಭಾರತವು ಪ್ರಕರಣವನ್ನು ಸೋತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ, Cairn Energy Plc ಮಾತ್ರ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಭಾರತದ ಕಂಪನಿಯೊಂದಿಗೆ ವಿಲೀನ ಅಥವಾ ಮಾರಾಟ ಪ್ರಕ್ರಿಯೆ ನಡೆದರೆ ಭಾರತ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು ಎನ್ನುವ ಕಾನೂನನ್ನು ಭಾರತ ಸರ್ಕಾರ ಜಾರಿ ಮಾಡಿತ್ತು. ಆದರೆ, ಭಾರತದಲ್ಲಿ ವೇದಾಂತ ಕಂಪನಿಯ ಜೊತೆಗೆ ವಿಲೀನಗೊಂಡ ಹೊರತಾಗಿಯೂ Cairn Energy Plc ತೆರಿಗೆ ಕಟ್ಟಲು ನಿರಾಕರಿಸಿತ್ತು. ಅಲ್ಲದೆ, ಈ ಬಗ್ಗೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿಯಲ್ಲಿ ದಾವೆಯನ್ನೂ ಹೂಡಿತ್ತು.

2018ರ ಡಿಸೆಂಬರ್​ನಲ್ಲಿಯೇ ವಿಚಾರಣೆ ಪೂರ್ಣಗೊಂಡಿತ್ತು. ಆದರೆ, ತೀರ್ಪಿನ ದಿನಾಂಕವನ್ನು ಮುಂದೂಡಲಾಗಿತ್ತು. ಈಗ ತೀರ್ಪು ಹೊರಬಂದಿದ್ದು Cairn Energyಗೆ ಜಯ ಸಿಕ್ಕಂತಾಗಿದೆ. ಈ ತೀರ್ಪಿನ ನಂತರ Cairn Energyಗೆ ನಷ್ಟ ಮಾಡಿದ ಆರೋಪದಲ್ಲಿ ₹ 8,000 ಕೋಟಿಯನ್ನು ಭಾರತ ಸರ್ಕಾರ ಪಾವತಿ ಮಾಡಬೇಕಿದೆ. ಈ ಮೊದಲು ವೊಡಾಫೋನ್​ ವಿರುದ್ಧದ ಪ್ರಕರಣದಲ್ಲಿಯೂ ಭಾರತ ಸೋತಿತ್ತು.

ಕೊರೊನಾ ರೂಪಾಂತರ: ಬ್ರಿಟನ್​ನಿಂದ ಆಗಮಿಸುವವರ ತಪಾಸಣೆಗಾಗಿ ಕೇಂದ್ರದಿಂದ ನಿಯಮಾವಳಿ ಬಿಡುಗಡೆ