ಧಾರವಾಡ ಅಪಘಾತದ ಬಗ್ಗೆ ವರದಿ ನೀಡಿ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸಮಿತಿ ಸೂಚನೆ

ಹುಬ್ಬಳ್ಳಿ ಧಾರವಾಡ ಬೈಪಾಸ್​ ರಸ್ತೆಯ 32 ಕಿ.ಮೀ ಅಂತರದಲ್ಲಿ ಕಳೆದ ಎರಡು ವರ್ಷಗಳಲ್ಲಿ ನಡೆದ ಅಪಘಾತ ಮತ್ತು ಅದರಲ್ಲಿ ಮೃತಪಟ್ಟವರ ಬಗ್ಗೆಯೂ ವರದಿ ನೀಡಿ. ಈ ವರದಿ ಫೆಬ್ರವರಿ 15ರ ಒಳಗೆ ನಮ್ಮ ಕೈ ಸೇರಬೇಕು ಎಂದು ಸಮಿತಿ ಸೂಚಿಸಿದೆ.

ಧಾರವಾಡ ಅಪಘಾತದ ಬಗ್ಗೆ ವರದಿ ನೀಡಿ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸಮಿತಿ ಸೂಚನೆ
ಟೆಂಪೋ ಟ್ರಾವೆಲರ್​ಗೆ ಟಿಪ್ಪರ್​ ಡಿಕ್ಕಿ (ಸಂಗ್ರಹ ಚಿತ್ರ)
Edited By:

Updated on: Jan 24, 2021 | 6:41 PM

ನವದೆಹಲಿ: ಧಾರವಾಡದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 13 ಜನರು ಮೃತಪಟ್ಟಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಸ್ತೆ ಸುರಕ್ಷತೆಯ ಕುರಿತ ಸುಪ್ರೀಂ ಕೋರ್ಟ್ ಸಮಿತಿ ಈ ಕುರಿತು  ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ರಾಜ್ಯ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅರ್ಜುನ್​ ಪರ್ವೇಜ್​ ಅವರಿಗೆ ಸಮಿತಿ ಪತ್ರವನ್ನು ಕಳುಹಿಸಿದೆ. ಜನವರಿ 15ರಂದು ಧಾರವಾಡದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಈ ಪ್ರಕರಣದ ವಿಸ್ತೃತ ವರದಿ ನೀಡುವಂತೆ ನಾವು ಸೂಚಿಸುತ್ತಿದ್ದೇವೆ. ಅಲ್ಲದೆ, ಮುಂದಿನ ದಿನಗಳಲ್ಲಿ ಅಪಘಾತ ತಡೆಯಲು ತೆಗೆದುಕೊಳ್ಳುವ ಕ್ರಮದ ಬಗ್ಗೆ ವಿವರಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ ಬೈಪಾಸ್​ ರಸ್ತೆಯ 32 ಕಿ.ಮೀ ಅಂತರದಲ್ಲಿ ಕಳೆದ ಎರಡು ವರ್ಷಗಳಲ್ಲಿ ನಡೆದ ಅಪಘಾತ ಮತ್ತು ಅದರಲ್ಲಿ ಎಷ್ಟು ಜನ ಮೃತಪಟ್ಟಿ್ದಾರೆ ಎನ್ನುವ ಬಗ್ಗೆಯೂ ವರದಿ ನೀಡಿ. ಈ ವರದಿ ಫೆಬ್ರವರಿ 15ರ ಒಳಗೆ ನಮ್ಮ ಕೈ ಸೇರಬೇಕು ಎಂದು ಸಮಿತಿ ಸೂಚಿಸಿದೆ.

ಜನವರಿ 15ರಂದು ದಾವಣಗೆರೆಯ ಒಟ್ಟು 16 ಮಂದಿ ಟಿಟಿ ವಾಹನದಲ್ಲಿ ಗೋವಾಗೆ ಹೊರಟ್ಟಿದ್ದರು. ಈ ಪೈಕಿ 14 ಮಂದಿ ಮಹಿಳೆಯರು ಮತ್ತು ಒಬ್ಬ ಡೈವರ್ ಹಾಗೂ ಕ್ಲೀನರ್ ಇದ್ದರು. ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಬಳಿಯ ರಾ. ಹೆ. 4ರಲ್ಲಿ ಟೆಂಪೊ ಟ್ರಾವೆಲರ್​ಗೆ ಟಿಪ್ಪರ್​ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ 13 ಜನ ಮೃತಪಟ್ಟಿದ್ದರು.

ಇಟ್ಟಿಗಟ್ಟಿ ಅಪಘಾತ; ಮುಂದುವರಿದ ಸಾವಿನ ಸರಣಿ

ಧಾರವಾಡ ಅಪಘಾತ; ಗಂಟಲುಬ್ಬಿ ಕಣ್ಣೀರಾದ ಗೆಳತಿ ಹಂಚಿಕೊಂಡ ಒಡನಾಡಿಗಳ ನೆನಪು

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಸಾವಿನ ರಸ್ತೆಯ ಅಟ್ಟಹಾಸ; ಕಣ್ಮುಚ್ಚಿ ಕುಳಿತರಾ ಅಧಿಕಾರಿಗಳು?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us