ಡ್ರಗ್​ ಪ್ರಕರಣಗಳಲ್ಲಿ ನಮ್ಮನ್ನು ಟಾರ್ಗೆಟ್​ ಮಾಡಲಾಗುತ್ತಿದೆ; ಭಾರತೀಯರೂ ನಮ್ಮನ್ನು ಹೊರದಬ್ಬುತ್ತಿದ್ದಾರೆ: ನೈಜೀರಿಯಾ ಪ್ರಜೆಗಳ ಅಸಮಾಧಾನ

ಆಫ್ರಿಕಾದಲ್ಲಿಯೂ ಆಫ್ರಿಕನ್ ಪ್ರಜೆಗಳಿಗೆ ನೆಲೆಯಿಲ್ಲದಂತಾಗಿದೆ. ಆಫ್ರಿಕನ್ ರಾಷ್ಟ್ರವಾಗಿದ್ದರೂ ಘಾನಾ ದೇಶದಲ್ಲಿ ನೈಜೀರಿಯನ್ನರನ್ನ ಹೊರಕಳುಹಿಸಲಾಯ್ತು, ಭಾರತವೂ ಆಫ್ರಿಕಾ ಪ್ರಜೆಗಳನ್ನು ಹೊರದಬ್ಬುತ್ತಿದೆ. ದಾಖಲಾತಿ ಪರಿಶೀಲನೆ ನೆಪದಲ್ಲಿ ಆಫ್ರಿಕನ್ ಪ್ರಜೆಗಳ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅಸಮಾಧಾನ.

ಡ್ರಗ್​ ಪ್ರಕರಣಗಳಲ್ಲಿ ನಮ್ಮನ್ನು ಟಾರ್ಗೆಟ್​ ಮಾಡಲಾಗುತ್ತಿದೆ; ಭಾರತೀಯರೂ ನಮ್ಮನ್ನು ಹೊರದಬ್ಬುತ್ತಿದ್ದಾರೆ: ನೈಜೀರಿಯಾ ಪ್ರಜೆಗಳ ಅಸಮಾಧಾನ
ಸಾಂಕೇತಿಕ ಚಿತ್ರ
Follow us
TV9 Web
| Updated By: Skanda

Updated on: Jul 17, 2021 | 8:17 AM

ಬೆಂಗಳೂರು: ಬೆಂಗಳೂರಿನಾದ್ಯಂತ ಡ್ರಗ್ಸ್ ಪ್ರಕರಣದಲ್ಲಿ (Drug Case) ಹೆಚ್ಚಾಗಿ ಆಫ್ರಿಕನ್ ಪ್ರಜೆಗಳೇ ಸಿಕ್ಕಿಬೀಳುತ್ತಿದ್ದು, ಬೆಂಗಳೂರು ಪೊಲೀಸರು (Bengaluru Police) ಎಷ್ಟೇ ಎಚ್ಚರಿಕೆ ನೀಡಿದರೂ ಅವರು ಪುಂಡಾಟ ನಿಲ್ಲಿಸುತ್ತಿಲ್ಲ. ಬೆಂಗಳೂರಿನ ಹಲವೆಡೆ ಅಕ್ರಮವಾಗಿ ವಾಸ್ತವ್ಯ ಹೂಡಿರುವ ಆಫ್ರಿಕಾದ (Africa) ಹಲವು ದೇಶದ ಪ್ರಜೆಗಳು, ಮಾದಕ ವಸ್ತು ಜಾಲದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಈ ಹಿಂದೆ ಒಮ್ಮೆ ಆಫ್ರಿಕನ್ನರನ್ನ ಒಗ್ಗೂಡಿಸಿ ಭೇಟಿಯಾಗಿದ್ದ ಬೆಂಗಳೂರು ಪೊಲೀಸರು, ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ಜತೆಗೆ ಮನವಿ ಸಹ ಮಾಡಿದ್ದರು. ಅಷ್ಟಾದ ನಂತರವೂ ಅವರು ತಪ್ಪು ತಿದ್ದುಕೊಳ್ಳದ ಕಾರಣ ವಿಶೇಷ ಕಾರ್ಯಾಚರಣೆ ನಡೆಸಿದ್ದ 100 ಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳು ಮತ್ತು ಪೊಲೀಸರು ವೀಸಾ ಅವಧಿ ಮುಗಿದ ಬಳಿಕವೂ ವಾಸವಿದ್ದ 100 ಜನರನ್ನು ಪತ್ತೆ ಮಾಡಿದ್ದರು, ದಾಳಿ ವೇಳೆ 90 ಎಕ್ಸ್ಟೇಸಿ ಟ್ಯಾಬ್ಲೆಟ್, 25 ಗ್ರಾಂ ಗಾಂಜಾ ಸಹ ಪತ್ತೆಯಾಗಿತ್ತು. ಆದರೆ, ಈ ಕಾರ್ಯಾಚರಣೆ ವಿರುದ್ಧ ಇದೀಗ ನೈಜೀರಿಯಾದ ಸಾಮಾಜಿಕ ಕಾರ್ಯಕರ್ತರು (Social Activists) ಧ್ವನಿ ಎತ್ತಿದ್ದಾರೆ.

ಮಾದಕ ವಸ್ತು ಜಾಲದಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ನೈಜೀರಿಯನ್​ ಪ್ರಜೆಗಳನ್ನು ಬೇಕಂತಲೇ ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ ಎಂದು ನೈಜೀರಿಯಾದ ಸಾಮಾಜಿಕ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೈಜೀರಿಯಾದಲ್ಲೇ ಕುಳಿತು ಸಾಮಾಜಿಕ ಜಾಲತಾಣಗಳ ಮೂಲಕ ಈ ಬಗ್ಗೆ ಪೋಸ್ಟ್ ಹಂಚಿಕೊಳ್ಳುತ್ತಿರುವ ಅವರು, ಆಫ್ರಿಕನ್ ಪ್ರಜೆಗಳೇ ಪೊಲೀಸ್ ಕಾರ್ಯಾಚರಣೆಯಲ್ಲಿ ಮುಖ್ಯ ಭೂಮಿಕೆಗೆ ಬರುತ್ತಿರುವುದು ಏಕೆ? ಆಫ್ರಿಕರನ್ನು ಬೇಕಂತಲೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಭಾರತದಲ್ಲಿ ಚೀನಾ, ಪಾಕ್​, ಅಮೆರಿಕ, ಆಫ್ಘನ್​, ಯುರೋಪ್​ ಸೇರಿದಂತೆ ಬೇರೆ ಬೇರೆ ದೇಶದವರಿದ್ದಾರೆ. ಆದರೆ ಭಾರತೀಯರು ಹೊರದಬ್ಬುತ್ತಿರುವುದು ಆಫ್ರಿಕನ್ನರನ್ನು. ಆಫ್ರಿಕಾದಲ್ಲಿಯೂ ಆಫ್ರಿಕನ್ ಪ್ರಜೆಗಳಿಗೆ ನೆಲೆಯಿಲ್ಲದಂತಾಗಿದೆ. ಆಫ್ರಿಕನ್ ರಾಷ್ಟ್ರವಾಗಿದ್ದರೂ ಘಾನಾ ದೇಶದಲ್ಲಿ ನೈಜೀರಿಯನ್ನರನ್ನ ಹೊರಕಳುಹಿಸಲಾಯ್ತು, ಭಾರತವೂ ಆಫ್ರಿಕಾ ಪ್ರಜೆಗಳನ್ನು ಹೊರದಬ್ಬುತ್ತಿದೆ. ದಾಖಲಾತಿ ಪರಿಶೀಲನೆ ನೆಪದಲ್ಲಿ ಆಫ್ರಿಕನ್ ಪ್ರಜೆಗಳ ಟಾರ್ಗೆಟ್ ಮಾಡಲಾಗುತ್ತಿದ್ದು, ವಿಶ್ವದಲ್ಲಿ ನಮ್ಮ ಕಾಳಜಿ ವಹಿಸುವವರು ಯಾರೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಪೊಲೀಸರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಾಮಾಜಿಕ ಕಾರ್ಯಕರ್ತರು, ಆಫ್ರಿಕರನ್ನು ಎಲ್ಲರೂ ಬೇಕಂತಲೇ ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಆಫ್ರಿಕನ್ ಪ್ರಜೆಗಳೇ ಪೊಲೀಸ್ ಕಾರ್ಯಾಚರಣೆಯಲ್ಲಿ ಕಾಣಿಸಿಕೊಳ್ಳುವುದರ ಹಿಂದೆ ನಮ್ಮನ್ನು ಉದ್ದೇಶಪೂರ್ವಕವಾಗಿ ಹೊರದಬ್ಬುವ ಯೋಜನೆ ಅಡಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಮಾದಕ ದ್ರವ್ಯ ಜಾಲದಲ್ಲಿ ಸಕ್ರಿಯರಾಗಿದ್ದ ನಾಲ್ವರು ನೈಜೀರಿಯಾ ಪ್ರಜೆಗಳ ಬಂಧನ 

ನಮ್ಮ ಜವಾಬ್ದಾರಿ ಕೇವಲ ಡ್ರಗ್ ಪೆಡ್ಲರ್​ಗಳ ಬಂಧನವಲ್ಲ, ಮಾದಕ ವಸ್ತು ಜಾಲ ನಿರ್ಮೂಲನೆ ಮಾಡಲು ನಾವು ಸಿದ್ಧ; ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್