DP Muralidhar: ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ ಡಿ.ಪಿ. ಮುರಳೀಧರ್ಗೆ ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿ
2022ನೇ ಸಾಲಿನ ರಾಜ್ಯ ಸರ್ಕಾರದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾಗಿರುವ ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾದ ಡಿ.ಪಿ. ಮುರಳೀಧರ್ ಅವರಿಗೆ ಅಭಿನಂದನೆಗಳು.
2022ನೇ ಸಾಲಿನ ರಾಜ್ಯ ಸರ್ಕಾರದ ಸರ್ವೋತ್ತಮ ಸೇವಾ ಪ್ರಶಸ್ತಿಗೆ (Sarvothama Seva Prashasti) ಶ್ರೀಯುತ ಡಿ.ಪಿ. ಮುರಳೀಧರ್ (DP Muralidhar), ಜಂಟಿ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು ಇವರು ಆಯ್ಕೆಯಾಗಿದ್ದಾರೆ.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಆಯ್ಕೆ ಸಮಿತಿ ಸಭೆಯು ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಾಗಿ ಸಲ್ಲಿಸಿರುವ ಎಲ್ಲಾ ಅರ್ಹ ನಾಮ ನಿರ್ದೇಶನಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಅಂತಿಮವಾಗಿ 30 ಅರ್ಹ ಅಧಿಕಾರಿ / ನೌಕರರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ.
ಅತ್ಯುನ್ನತ ಸೇವೆಗೈದ / ಸಾಧನೆಗೈದ ರಾಜ್ಯ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡುವ ಯೋಜನೆ ಜಾರಿಯಲ್ಲಿದೆ. 15-04-2013ರ ಆದೇಶದನ್ವಯ ಜಿಲ್ಲಾವಾರು ಪ್ರಶಸ್ತಿ ಆಯ್ಕೆ ಸಮಿತಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮತ್ತು ರಾಜ್ಯ ಮಟ್ಟದ ಆಯ್ಕೆ ಸಮಿತಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನೊಳಗೊಂಡ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ. ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಳ ಸಂಖ್ಯೆಯನ್ನು 30ಕ್ಕೆ ಏರಿಸಲಾಗಿದೆ. ಇನ್ನು ಪ್ರಸಕ್ತ ಸಾಲಿನಿಂದ ಜಿಲ್ಲಾ ಪ್ರಶಸ್ತಿ ಮೊತ್ತವನ್ನು ರೂ. 10,000/- ದಿಂದ ರೂ. 25,000/- ಕ್ಕೆ ಮತ್ತು ರಾಜ್ಯ ಪ್ರಶಸ್ತಿ ಮೊತ್ತವನ್ನು ರೂ. 25,000/- ದಿಂದ ರೂ. 50,000/- ಕ್ಕೆ ಏರಿಸಲಾಗಿದೆ.
2022ನೇ ಸಾಲಿನ ರಾಜ್ಯ ಸರ್ಕಾರದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾಗಿರುವ ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾದ ಡಿ.ಪಿ. ಮುರಳೀಧರ್ ಅವರಿಗೆ ಅಭಿನಂದನೆಗಳು.
Published On - 10:47 pm, Thu, 30 June 22