ಗದಗ ಜಿಲ್ಲೆಯಲ್ಲಿ ಹಳ್ಳಹಿಡಿದ ಜಲ ಜೀವನ್​ ಯೋಜನೆ: ನೀರು ಬರುವ ಮೊದಲೇ ತುಕ್ಕು ಹಿಡಿದ ಪೈಪ್​ಗಳು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 09, 2024 | 10:57 PM

ಜಲ ಜೀವನ ಮಷಿನ್ ಯೋಜನೆ ಕಾಮಗಾರಿ ಗದಗ ಜಿಲ್ಲೆ ನಂಬರ್ ಒನ್ ಸ್ಥಾನದಲ್ಲಿದೆ. ಆದ್ರೆ, ಕಳಪೆ ಹಾಗೂ ಬೇಕಾಬಿಟ್ಟಿ ಗುತ್ತಿಗೆದಾರರು ಕಾಮಗಾರಿ ಮಾಡಿದ್ರಿಂದ ಜಿಲ್ಲೆಯಲ್ಲಿ ಜೆಜೆಎಂ ಯೋಜನೆ ಬಹುತೇಕ ಗ್ರಾಮಗಳಲ್ಲಿ ಹಳ್ಳ ಹಿಡಿದಿದೆ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು ತನಿಖೆ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಹಳ್ಳಹಿಡಿದ ಜಲ ಜೀವನ್​ ಯೋಜನೆ: ನೀರು ಬರುವ ಮೊದಲೇ ತುಕ್ಕು ಹಿಡಿದ ಪೈಪ್​ಗಳು
ಗದಗ ಜಿಲ್ಲೆಯಲ್ಲಿ ಹಳ್ಳಹಿಡಿದ ಜಲ ಜೀವನ್​ ಯೋಜನೆ: ನೀರು ಬರುವ ಮೊದಲೇ ತುಕ್ಕು ಹಿಡಿದ ಪೈಪ್​ಗಳು
Follow us on

ಗದಗ, ಆಗಸ್ಟ್​ 09: ಕೇಂದ್ರ ಸರ್ಕಾರ ಪ್ರತಿ ಗ್ರಾಮಗಳ ಮನೆ ಮನೆಗೆ ಕುಡಿಯುವ ನೀರು (water) ಪೂರೈಕೆ ಮಾಡುವ ಉದ್ದೇಶದಿಂದ ಜಲ ಜೀವನ ಮಷಿನ್ ಯೋಜನೆ (Jal Jeevan Yojana) ಜಾರಿ ಮಾಡಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವ್ರ ಮಹತ್ವಾಕಾಂಕ್ಷಿ ಯೋಜನೆ. ಇದು ಗದಗ ಜಿಲ್ಲೆಯಲ್ಲಿ ಸಂಪೂರ್ಣ ಹಳ್ಳಹಿಡಿದಿದೆ. ರಾಜ್ಯದ ಪ್ರತಿಯೊಂದು ಮನೆಗೆ ಕುಡಿಯವ ನೀರು ಸಿಗಲಿ ಅಂತ ಕೇಂದ್ರ ಸರ್ಕಾರ ಕೋಟಿ ಕೋಟಿ ಅನುದಾನ ನೀಡಿದೆ. ಆದ್ರೆ, ಕಾಮಗಾರಿ ಮುಗಿದು ಮೂರ್ನಾಲ್ಕು ವರ್ಷಗಳು ಕಳೆದ್ರೂ ಬಹುತೇಕ ಗ್ರಾಮಗಳ ಪೈಪ್ ನಲ್ಲಿ ಇನ್ನೂ ಹನಿ ನೀರು ಬರ್ತಾಯಿಲ್ಲ.

ಗದಗ ತಾಲೂಕಿನ ಚಿಕ್ಕಹಂದಿಗೋಳ, ಹುಯಿಲಗೋಳ ಗ್ರಾಮ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಮುಗಿದು ಹಲವು ವರ್ಷಗಳು ಕಳೆದಿವೆ. ಆದರೆ ನಲ್ಲಿಯಲ್ಲಿ ನೀರು ಬರುವ ಮುನ್ನವೇ ಪೈಪ್ ಗಳು ತುಕ್ಕು ಹಿಡಿದು ಯೋಜನೆ ಹಳ್ಳ ಹಿಡಿದು ಹೋಗಿವೆ. ಇನ್ನೂ ಕೆಲ ಗ್ರಾಮಗಳಲ್ಲಿ ಅರ್ಧಮರ್ಧ ಪೈಪುಗಳ ಹಾಕಿ ಗುತ್ತಿಗೆದಾರರು ಎಸ್ಕೇಪ ಆಗಿದ್ದಾರೆ. ಪ್ರತಿ ಗ್ರಾಮಗಳಲ್ಲಿ ಮನೆ ಮನೆಗೆ ನೀರು ಕೊಡುವ ಯೋಜನೆ ಇದಾಗಿದೆ. ಅಷ್ಟೇ ಅಲ್ಲ ಪೈಪ್ ಹಾಕಲು ಇಡೀ ಗ್ರಾಮದಲ್ಲಿ ರಸ್ತೆ ಅಗೇದು ಹಾಳು ಮಾಡಿದ್ದಾರೆ.

ಇದನ್ನೂ ಓದಿ: ಹಾಲಿನಂತೆ ಭೋರ್ಗರೆಯುತ್ತಿರೋ ತುಂಗಭದ್ರಾ! ಸೆಲ್ಫಿ ಕ್ಲಿಕ್ಕಿಸಿಕೊಂಡು ಪ್ರವಾಸಿಗರು​ ಖುಷ್​

ರಸ್ತೆ ರಿಪೇರಿ ಮಾಡದೇ ಹೋಗಿದ್ದಾರೆ ಅಂತ ಮಹಿಳೆಯರು ಆಕ್ರೋಶ ಹೊರ ಹಾಕಿದ್ದಾರೆ. ನೀರು ಇಲ್ಲ. ಒಳ್ಳೆಯ ರಸ್ತೆಗಳು ಹಾಳಾಗಿ ನಿತ್ಯವೂ ಗ್ರಾಮಸ್ಥರು ನರಕಯಾತನೆ ಅನುಭವಿಸುವಂತಾಗಿದೆ. ಚಿಕ್ಕಹಂದಿಗೋಳ, ಹುಯಿಲಗೋಳ ಗ್ರಾಮಗಳು ನರಗುಂದ ಮತಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.

ಜಲ ಜೀವನ ಮಷಿನ್ ಯೋಜನೆ ಕಾಮಗಾರಿ ಗದಗ ಜಿಲ್ಲೆ ನಂಬರ್ ಒನ್ ಸ್ಥಾನದಲ್ಲಿದೆ. ಆದ್ರೆ, ಕಳಪೆ ಹಾಗೂ ಬೇಕಾಬಿಟ್ಟಿ ಗುತ್ತಿಗೆದಾರರು ಕಾಗಮಗಾರಿ ಮಾಡಿದ್ರಿಂದ ಜಿಲ್ಲೆಯಲ್ಲಿ ಜೆಜೆಎಂ ಯೋಜನೆ ಬಹುತೇಕ ಗ್ರಾಮಗಳಲ್ಲಿ ಹಳ್ಳ ಹಿಡಿದಿದೆ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಕನಸಿನ ಯೋಜನೆ ಗುತ್ತಿಗೆದಾರರು, ಅಧಿಕಾರಿಗಳು ಸೇರಿ ಹಳ್ಳಹಿಡಿಸಿದ್ದಾರೆ. ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು ತನಿಖೆ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.

ಯೋಜನೆ ಹದಗೆಟ್ರು ಗುತ್ತಿಗೆದಾರರಿಗೆ ಅಧಿಕಾರಿಗಳು ಈಗಾಗಲೇ ಎಲ್ಲ ಹಣ ಪಾವತಿ ಮಾಡಿದ್ದಾರೆ. ಗದಗ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ನಿತ್ಯವೂ ಜೆಜೆಎಂ ಯೋಜನೆ ವಿರುದ್ಧ ದೂರು ಬಂದ್ರೂ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರವೂ ಕೂಡ ಮೌನವಾಗಿತ್ತು. ಪೈಪ್ ನೆಲದಲ್ಲಿ ಕನಿಷ್ಠ ಮೂರು ಫೂಟ್ ಅಗೆದು ಹಾಕಬೇಕು ಅಂತ ಯೋಜನೆಯಲ್ಲಿದೆ. ಆದ್ರೆ, ಗುತ್ತಿಗೆದಾರರು 1 ಫೂಟ್ ಒಂದೂವರೆ ಫೂಟ್ ಅಗೆದು ಬೇಕಾಬಿಟ್ಟಿ ಪೈಪ್ ಹಾಕಿ ಕಾಮಗಾರಿ ಮುಗಿಸಿದ್ದಾರಂತೆ. ಪೈಪ್ ಗಳು ಸಂಪೂರ್ಣ ಕಳಪೆ ಹಾಕಿದ್ದರಿಂದ ಮುರಿದು ಹೋಗುತ್ತಿವೆ. ಇನ್ನೂ ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಬಿಜೆಪಿ ಶಾಸಕ ಸಿ ಸಿ ಪಾಟೀಲರು ಕ್ಯಾರೇ ಎನ್ನುತ್ತಿಲ್ಲ ಅಂತ ಜನ್ರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಗದಗ: ಶಾಲಾ ಮಕ್ಕಳ ಕೂದಲು ಕಟ್ ಮಾಡಿದ ಶಿಕ್ಷಕನಿಗೆ ಬಿತ್ತು ಪೋಷಕರಿಂದ ಧರ್ಮದೇಟು!

ಗುತ್ತಿಗೆದಾರರು ಜನ್ರಿಗೆ ನೀರು ತಲುಪಿದ್ರೆನೂ ಬಿಟ್ರೆನೂ ನಾವು ಮಾಡಿದ್ದೇ ಕಾಮಗಾರಿ ಅಂತ ಬೇಕಾಬಿಟ್ಟಿ ಮಾಡಿ ಹೋಗಿದ್ದಾರೆ. ಅಷ್ಟೇ ಅಲ್ಲ ಗ್ರಾಮಗಳಲ್ಲಿ ಮಾಡಿದ್ದ ಸಿಮೆಂಟ್ ಕಾಂಕ್ರಿಟ್ ರಸ್ತೆಗಳು ಸಂಪೂರ್ಣ ಹಾಳು ಮಾಡಿದ್ದಾರೆ. ಜೆಜೆಎಂ ಯೋಜನೆ ಬಂತು ನಮ್ಮ ಮನೆಗೆ ಮನೆಗೆ ನೀರು ಬರುತ್ತೆ ಅಂದ್ಕೊಂಡ ಜನ್ರು ಭ್ರಮನಿರಸಗೊಂಡಿದ್ದಾರೆ. ಇನ್ನಾದ್ರೂ ಕ್ಷೇತ್ರದ ಸಂಸದರು, ಶಾಸಕರು, ಸಚಿವರು, ಜಿಲ್ಲಾಡಳಿತ ಜೆಜೆಎಂ ಯೋಜನೆ ಕಾಮಗಾರಿ ಮಾಡಿದ ಗುತ್ತಿಗೆದಾರರು, ಅಧಿಕಾರಿಗಳಿಗೆ ಚಾಟಿ ಬೀಸುವ ಮೂಲಕ ಯೋಜನೆಯಿಂದ ಜನ್ರಿಗೆ ಆದ ಹಿಂಸೆಯಿಂದ ಮುಕ್ತಿ ನೀಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.