ಪ್ರಧಾನಿ ಮೋದಿ ಸಂಪುಟದ ನೂತನ ಸಚಿವರಿಂದ ಆ.16 ರಿಂದ ದೇಶಾದ್ಯಂತ ಜನ ಆಶೀರ್ವಾದ ಯಾತ್ರೆ: ಟೂರ್​ ಪ್ಲ್ಯಾನ್​ ವಿವರ ಹೀಗಿದೆ

Jan Ashirwaad Yatra: ಆಗಸ್ಟ್ 13ರವರೆಗೆ ಸಂಸತ್‌ನ ಮಾನ್ಸೂನ್ ಅಧಿವೇಶನ ನಡೆಯಲಿದೆ. ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡುವರು. ಮಾರನೇ ದಿನವೇ 43 ಕೇಂದ್ರ ಮಂತ್ರಿಗಳ ಜನ ಆಶೀರ್ವಾದ ಯಾತ್ರೆ ಆರಂಭವಾಗಲಿದೆ. ದೇಶದ 19 ರಾಜ್ಯಗಳಲ್ಲಿ ಕೇಂದ್ರ ಮಂತ್ರಿಗಳು ಜನ ಆಶೀರ್ವಾದ ಯಾತ್ರೆ ಮಾಡುವರು.

ಪ್ರಧಾನಿ ಮೋದಿ ಸಂಪುಟದ ನೂತನ ಸಚಿವರಿಂದ ಆ.16 ರಿಂದ ದೇಶಾದ್ಯಂತ ಜನ ಆಶೀರ್ವಾದ ಯಾತ್ರೆ: ಟೂರ್​ ಪ್ಲ್ಯಾನ್​ ವಿವರ ಹೀಗಿದೆ
ಪ್ರಧಾನಿ ನರೇಂದ್ರ ಮೋದಿ
Follow us
S Chandramohan
| Updated By: ಸಾಧು ಶ್ರೀನಾಥ್​

Updated on:Jul 31, 2021 | 1:47 PM

ಈ ತಿಂಗಳ ಆರಂಭದಲ್ಲಿ ಮೋದಿ ಕ್ಯಾಬಿನೆಟ್ ಪುನರ್ ರಚನೆಯಿಂದ ಕ್ಯಾಬಿನೆಟ್ ಸೇರಿದ 43 ಮಂದಿ ಕೇಂದ್ರ ಸಚಿವರು ದೇಶಾದ್ಯಂತ ಜನ ಅಶೀರ್ವಾದ ಯಾತ್ರೆ ಕೈಗೊಳ್ಳಲು ಪ್ಲ್ಯಾನ್ ಸಿದ್ದವಾಗಿದೆ. 43 ಸಚಿವರು ತಲಾ 300 ರಿಂದ 400 ಕಿಲೋಮೀಟರ್ ಸಂಚಾರ ಮಾಡಿ ಯಾತ್ರೆ ಮಾಡಲಿದ್ದಾರೆ. ದೇಶದ 150 ಲೋಕಸಭಾ ಕ್ಷೇತ್ರಗಳಲ್ಲಿ ಯಾತ್ರೆ ಸಾಗುವಂತೆ ಪ್ಲ್ಯಾನ್ ಮಾಡಲಾಗಿದೆ. ಜನ ಅಶೀರ್ವಾದ ಯಾತ್ರೆಯ ಉದ್ದೇಶವೇನು? ಯಾತ್ರೆಯ ವೇಳೆ ಸಚಿವರು ಮಾಡುವುದೇನು? ಎನ್ನುವುದರ ಡೀಟೈಲ್ಸ್ ಇಲ್ಲಿದೆ ನೋಡಿ.

ಕೇಂದ್ರದ ನೂತನ ಸಚಿವರಿಂದ ದೇಶದಲ್ಲಿ ಜನ ಆಶೀರ್ವಾದ ಯಾತ್ರೆ

ಪ್ರಧಾನಿ ನರೇಂದ್ರಮೋದಿ ಈ ತಿಂಗಳ 7ರಂದು 43 ಮಂದಿಯನ್ನು ತಮ್ಮ ಕ್ಯಾಬಿನೆಟ್ ಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಆದರೆ, ಬಳಿಕ ಕೇಂದ್ರದ ನೂತನ ಸಚಿವರನ್ನು ಸಂಸತ್ ಅಧಿವೇಶನದ ವೇಳೆ ಲೋಕಸಭೆ, ರಾಜ್ಯಸಭೆಗೆ ಪರಿಚಯ ಮಾಡಿಕೊಡಲು ವಿಪಕ್ಷಗಳು ಅವಕಾಶ ಕೊಟ್ಟಿಲ್ಲ. ವಿಪಕ್ಷಗಳು ಸದನದಲ್ಲಿ ಗದ್ದಲ ಎಬ್ಬಿಸಿದ್ದವು. ಈ ರೀತಿ ನೂತನ ಸಚಿವರನ್ನು ಪರಿಚಯಿಸುವಾಗ ಗದ್ದಲ ಎದ್ದಿದ್ದು ಇದೇ ಮೊದಲೇನೂ ಅಲ್ಲ, ಯುಪಿಎ ಸರ್ಕಾರದ ಕಾಲದಲ್ಲಿ 2004 ರಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ತಮ್ಮ ಕ್ಯಾಬಿನೆಟ್ ಸಚಿವರನ್ನು ಲೋಕಸಭೆಗೆ ಪರಿಚಯಿಸಲು ಬಿಜೆಪಿ ಸಂಸದರು ಕೂಡ ಅವಕಾಶ ಕೊಟ್ಟಿರಲಿಲ್ಲ. ಆಗ ಬಿಜೆಪಿ ಸಂಸದರು ಸದನದಲ್ಲಿ ಗದ್ದಲ ಎಬ್ಬಿಸಿದ್ದರು. ಅದೇ ಇತಿಹಾಸ ಈಗ ಪುನಾರಾವರ್ತನೆ ಆಗಿದೆ ಅಷ್ಟೇ.

ತಮ್ಮ ಕ್ಯಾಬಿನೆಟ್‌ನ ಹೊಸ ಸಚಿವರನ್ನು ಲೋಕಸಭೆ, ರಾಜ್ಯಸಭೆಗೆ ಪರಿಚಯಿಸಲು ಅವಕಾಶ ಸಿಗದಿದ್ದರೇನಂತೆ, ನೇರವಾಗಿ ದೇಶದ ಜನರಿಗೆ ತಮ್ಮ ಕ್ಯಾಬಿನೆಟ್ ನ ಹೊಸ ಸಚಿವರನ್ನ ಪರಿಚಯಿಸಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ಇದಕ್ಕಾಗಿ ಕ್ಯಾಬಿನೆಟ್‌ಗೆ ಸೇರ್ಪಡೆಯಾದ ಎಲ್ಲ 43 ಸಚಿವರಿಗೂ ಸಂಸತ್ ಅಧಿವೇಶನ ಮುಗಿದ ಬಳಿಕ ಜನ ಆಶೀರ್ವಾದ ಯಾತ್ರೆ  (Jan Ashirwaad Yatra) ನಡೆಸಲು ಸೂಚಿಸಿದ್ದಾರೆ. ಈ ಬಗ್ಗೆ ಬಿಜೆಪಿ ಕೇಂದ್ರ ಘಟಕದಿಂದಲೇ ಪ್ಲ್ಯಾನ್ ಕೂಡ ಸಿದ್ದವಾಗಿದೆ.

ಆಗಸ್ಟ್ 13ರವರೆಗೆ ಸಂಸತ್‌ನ ಮಾನ್ಸೂನ್ ಅಧಿವೇಶನ ನಡೆಯಲಿದೆ. ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡುವರು. ಮಾರನೇ ದಿನವೇ 43 ಕೇಂದ್ರ ಮಂತ್ರಿಗಳ ಜನ ಆಶೀರ್ವಾದ ಯಾತ್ರೆ ಆರಂಭವಾಗಲಿದೆ. ದೇಶದ 19 ರಾಜ್ಯಗಳಲ್ಲಿ ಕೇಂದ್ರ ಮಂತ್ರಿಗಳು ಜನ ಆಶೀರ್ವಾದ ಯಾತ್ರೆ ಮಾಡುವರು.

ಕೇಂದ್ರ ಮಂತ್ರಿಗಳು ಆಗಸ್ಟ್ 16 ರಿಂದ ಮೂರು ದಿನಗಳ ಕಾಲ ಮೂರರಿಂದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಸಂಚಾರ ಮಾಡಬೇಕು. ಜನರನ್ನು ಭೇಟಿಯಾಗಬೇಕು. ಅಲ್ಲಲ್ಲಿ ಜನರನ್ನು ಉದ್ದೇಶಿಸಿ ಚಿಕ್ಕ ಭಾಷಣಗಳನ್ನು ಮಾಡಬೇಕು. ಮೋದಿ ಸರ್ಕಾರದ ಉದ್ದೇಶ, ಕಾರ್ಯಕ್ರಮ, ತಮ್ಮ ಆದ್ಯತೆಗಳ ಬಗ್ಗೆ ಜನರನ್ನು ಉದ್ದೇಶಿಸಿ ಭಾಷಣ ಮಾಡಬೇಕೆಂದು ಸೂಚಿಸಲಾಗಿದೆ.

43 ಕೇಂದ್ರ ಮಂತ್ರಿಗಳು ತೆರೆದ ವಾಹನದಲ್ಲಿ ತಲಾ ಮೂರರಿಂದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಿದರೇ, ಕನಿಷ್ಠ 150 ಲೋಕಸಭಾ ಕ್ಷೇತ್ರಗಳನ್ನು ಸುತ್ತಬಹುದು ಎಂಬ ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ಕೇಂದ್ರ ಮಂತ್ರಿಯೊಬ್ಬರು 300 ರಿಂದ 400 ಕಿಲೋಮೀಟರ್ ಸಂಚಾರ ಮಾಡಬೇಕು. 43 ಮಂತ್ರಿಗಳು ಸುಮಾರು 15 ಸಾವಿರ ಕಿಲೋಮೀಟರ್ ಸಂಚಾರ ಮಾಡಲಿದ್ದಾರೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುವ ಉತ್ತರ ಪ್ರದೇಶ, ಮಣಿಪುರ, ಉತ್ತರಾಖಂಡ್ ರಾಜ್ಯಗಳಿಗೆ ವಿಶೇಷ ಒತ್ತು ನೀಡಲಾಗುತ್ತೆ.

ಜನ ಆಶೀರ್ವಾದ ಯಾತ್ರೆ ಮೂಲಕವೇ ತಮ್ಮ ಸ್ವಕ್ಷೇತ್ರ ಪ್ರವೇಶ

ಕೇಂದ್ರದ ಇಂಧನ ಖಾತೆ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಬಡ್ತಿ ಪಡೆದಿರುವ ಆರ್‌.ಕೆ.ಸಿಂಗ್ ಅವರು ಬಿಹಾರದ ಗಯಾಗೆ ಮೊದಲು ಭೇಟಿ ನೀಡುವರು. ಗಯಾದಿಂದ ತಮ್ಮ ಲೋಕಸಭಾ ಕ್ಷೇತ್ರವಾದ ಅರಾ ಕಡೆಗೆ ಸಂಚಾರ ಮಾಡುವರು. ಗಯಾದಿಂದ ಅರಾ ಮಧ್ಯೆ ಸಿಗುವ ಮೂರರಿಂದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಆರ್.ಕೆ.ಸಿಂಗ್ ಜನ ಆಶೀರ್ವಾದ ಯಾತ್ರೆ ಮಾಡುವರು. ಇದೇ ರೀತಿ ಕೇಂದ್ರದ ಕಾರ್ಮಿಕ ಖಾತೆ ಮಂತ್ರಿಯಾಗಿ ಕ್ಯಾಬಿನೆಟ್ ಗೆ ಸೇರ್ಪಡೆ ಆಗಿರುವ ಭೂಪೇಂದ್ರ ಯಾದವ್, ತಮ್ಮ ತವರು ರಾಜ್ಯವಾದ ರಾಜಸ್ಥಾನದಲ್ಲಿ ಜನ ಆಶೀರ್ವಾದ ಯಾತ್ರೆ ಮಾಡುವರು.

ಮಾರ್ಗ ಮಧ್ಯೆ ಸಿಗುವ ಸಣ್ಣ ಹಳ್ಳಿ, ಸಣ್ಣ ಟೌನ್ ಗಳಲ್ಲೇ ಭೂಪೇಂದ್ರ ಯಾದವ್ ಸೇರಿದಂತೆ ಕೇಂದ್ರ ಸಚಿವರು ವಾಸ್ತವ್ಯ ಹೂಡುವರು. ಮಾರ್ಗ ಮಧ್ಯೆ ಎಲ್ಲ ವರ್ಗದ ಜನರನ್ನು ಕೇಂದ್ರ ಸಚಿವರು ಭೇಟಿಯಾಗುವರು. ಮಾರ್ಗ ಮಧ್ಯೆ ಸಿಗುವ ಧಾರ್ಮಿಕ ಸಂತರು, ಸಾಮಾಜಿಕ ಕಾರ್ಯಕರ್ತರು, ರಾಷ್ಟ್ರೀಯ, ರಾಜ್ಯ ಮಟ್ಟದ ಆಟಗಾರರು, ಹುತಾತ್ಮ ಸೈನಿಕರ ಕುಟುಂಬ, ಪಕ್ಷದ ಕೇಡರ್ ಸೇರಿದಂತೆ ಎಲ್ಲರನ್ನೂ ಭೇಟಿಯಾಗುವರು. ಧಾರ್ಮಿಕ ಸ್ಥಳಗಳಿಗೂ ಕೇಂದ್ರ ಸಚಿವರು ಭೇಟಿ ಮಾಡುವರು.

ಕರ್ನಾಟಕದಲ್ಲೂ ಕೇಂದ್ರ ಸಚಿವರ ಜನ ಆಶೀರ್ವಾದ ಯಾತ್ರೆ ನಮ್ಮ ಕರ್ನಾಟಕದಿಂದ ಕೇಂದ್ರ ಸಚಿವರಾಗಿರುವ ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ, ಆನೇಕಲ್ ನಾರಾಯಣಸ್ವಾಮಿ, ರಾಜೀವ್ ಚಂದ್ರಶೇಖರ್ ಕೂಡ ಕರ್ನಾಟಕದಲ್ಲಿ ತಲಾ ಮೂರರಿಂದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಜನ ಆಶೀರ್ವಾದ ಯಾತ್ರೆ ಮಾಡುವರು. ಕೇಂದ್ರದ ಕೃಷಿ, ರೈತ ಕಲ್ಯಾಣ ಖಾತೆ ರಾಜ್ಯ ಮಂತ್ರಿಯಾಗಿರುವ ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸುತ್ತಲಿನ ಮೂರರಿಂದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಜನ ಆಶೀರ್ವಾದ ಯಾತ್ರೆ ಕೈಗೊಂಡು ತಮ್ಮ ಸ್ವಕ್ಷೇತ್ರ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಪ್ರವೇಶಿಸುವರು.

ಶೋಭಾ ಕರಂದ್ಲಾಜೆ ಕೇಂದ್ರ ಮಂತ್ರಿಯಾದ ಬಳಿಕ ನೇರವಾಗಿ ಉಡುಪಿ-ಚಿಕ್ಕಮಗಳೂರಿಗೆ ಹೋಗಲು ಅವಕಾಶವಿಲ್ಲ. ಜನ ಆಶೀರ್ವಾದ ಯಾತ್ರೆಯ ಮೂಲಕವೇ ಈಗ ಕೇಂದ್ರದ ನೂತನ ಸಚಿವರು ತಮ್ಮ ಲೋಕಸಭಾ ಕ್ಷೇತ್ರ ಪ್ರವೇಶ ಮಾಡಬೇಕಾಗಿದೆ. ಮಹಾರಾಷ್ಟ್ರದ ಬಿಜೆಪಿ ನಾಯಕಿ ಪಂಕಜಾ ಮುಂಡೆ, ಕರ್ನಾಟಕ, ತೆಲಂಗಾಣ ರಾಜ್ಯಗಳಲ್ಲಿ ಕೇಂದ್ರ ಸಚಿವರ ಜನ ಆಶೀರ್ವಾದ ಯಾತ್ರೆಯ ಮೇಲುಸ್ತುವಾರಿ ನೋಡಿಕೊಳ್ಳುವರು.

ಎಲ್ಲ ಬಿಜೆಪಿ ಲೋಕಸಭಾ ಸದಸ್ಯರು ಆಗಸ್ಟ್ 16 ರಿಂದ ತಮ್ಮ ಕ್ಷೇತ್ರಗಳಲ್ಲೇ ಇರುವಂತೆ ಸೂಚನೆ ನೀಡಲಾಗಿದೆ. ಕೇಂದ್ರ ಸಚಿವರು ಜನರ ಕೈಗೆ ಸಿಗಲ್ಲ. ಜನರಿಂದ ದೂರ ಇರುತ್ತಾರೆ ಎಂಬ ಟೀಕೆಗಳಿವೆ. ಇದನ್ನು ಹೋಗಲಾಡಿಸಲು ಪ್ರಧಾನಿ ಮೋದಿ, ಈ ಜನ ಆಶೀರ್ವಾದ ಯಾತ್ರೆ ಕೈಗೊಳ್ಳಲು ಕೇಂದ್ರ ಸಚಿವರಿಗೆ ಸೂಚಿಸಿದ್ದಾರೆ ಎಂದು ಬಿಜೆಪಿ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಎಲ್ಲ ಕೇಂದ್ರ ಸಚಿವರು ಜನರೊಂದಿಗೆ ಸಂಪರ್ಕ ಹೊಂದಿರಬೇಕು. ಜನರಿಗೂ ಕೂಡ ತಾವು ಸಚಿವರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂಬ ಭಾವನೆ ಬರಬೇಕೆಂದು ಬಿಜೆಪಿ ಪಕ್ಷದ ಜನ ಆಶೀರ್ವಾದ ಯಾತ್ರೆಯ ಸೂಚನಾ ಪತ್ರದಲ್ಲಿ ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ನಡೆದ ಕ್ಯಾಬಿನೆಟ್ ವಿಸ್ತರಣೆಯಲ್ಲಿ ಸಮತೋಲನದ ಕ್ಯಾಬಿನೆಟ್ ರಚಿಸಲಾಗಿದೆ. ಎಲ್ಲ ವರ್ಗಗಳಗೂ ಪ್ರಾತಿನಿಧ್ಯ ನೀಡಲಾಗಿದೆ. 11 ಮಂದಿ ಮಹಿಳಾ ಮಂತ್ರಿಗಳು ಮೋದಿ ಕ್ಯಾಬಿನೆಟ್ ನಲ್ಲಿದ್ದಾರೆ. ಎಲ್ಲ ವಲಯಗಳಿಗೂ ಪ್ರಾತಿನಿಧ್ಯ ನೀಡಲಾಗಿದೆ ಎಂದು ಬಿಜೆಪಿ ಪಕ್ಷದ ಸೂಚನಾ ಪತ್ರದಲ್ಲಿ ಹೇಳಲಾಗಿದೆ. ಬಹಳಷ್ಟು ಓಬಿಸಿ ಸಮುದಾಯಗಳು, ಹಿಂದುಳಿದ ವರ್ಗಗಳಿಗೆ ಕ್ಯಾಬಿನೆಟ್ ಪುನರ್ ರಚನೆಯಲ್ಲಿ ಪ್ರಾತಿನಿಧ್ಯ ನೀಡಲಾಗಿದೆ. ಜನರಿಗೂ ತಮ್ಮ ಸಮುದಾಯದವರು ಕೇಂದ್ರದ ಕ್ಯಾಬಿನೆಟ್ ನಲ್ಲಿ ಇದ್ದಾರೆ ಎಂಬ ಸಂದೇಶ ನೀಡಲು ಜನ ಆಶೀರ್ವಾದ ಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಬಿಜೆಪಿಯ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

ಜನ ಆಶೀರ್ವಾದ ಯಾತ್ರೆಯು ಅದ್ದೂರಿ, ಆಕರ್ಷಕ ಮತ್ತು ಪರಿಣಾಮಕಾರಿಯಾಗಿದ್ದು, ಸಾಮಾನ್ಯ ಜನರನ್ನು ತಲುಪಬೇಕು. ಸಚಿವರು ಹೊಸ ಜಿಲ್ಲೆಗೆ ಪ್ರವೇಶಿಸಿದಾಗ ಭವ್ಯ, ಪ್ರೀತಿಪೂರ್ವಕ ಸ್ವಾಗತ ಕೋರಬೇಕು ಎಂದು ಬಿಜೆಪಿ ಪಕ್ಷದ ಸೂಚನಾ ಪತ್ರದಲ್ಲಿ ಎಲ್ಲ ನಾಯಕರಿಗೆ ಸೂಚಿಸಲಾಗಿದೆ. ಜೊತೆಗೆ ಕೊರೊನಾ ತಡೆ ಮಾರ್ಗಸೂಚಿಗಳನ್ನು ಪಾಲಿಸಬೇಕು. ಯಾತ್ರೆ ಸಾಗುವ ಮಾರ್ಗದಲ್ಲಿ ಕೇಂದ್ರದ ಮೋದಿ ಸರ್ಕಾರದ ಸಾಧನೆ, ಯೋಜನೆಯ ಕಟೌಟ್, ಬಿತ್ತಿಪತ್ರಗಳನ್ನು ಅಂಟಿಸಬೇಕು. ಜೊತೆಗೆ ಪ್ರಧಾನಿ ಮೋದಿ ಪೋಟೋ ಹಾಗೂ ಬಿಜೆಪಿಯ ಚಿಹ್ನೆಯಾದ ಕಮಲದ ಚಿಹ್ನೆಯೂ ಇರಬೇಕೆಂದು ಸೂಚನಾ ಪತ್ರದಲ್ಲಿ ಹೇಳಿದ್ದಾರೆ.

ದೇಶದ 19 ರಾಜ್ಯಗಳಲ್ಲಿ ಬಿಜೆಪಿಯ ಕೇಂದ್ರ ಸಚಿವರ ಜನ ಆಶೀರ್ವಾದ ಯಾತ್ರೆ ಸಾಗಲಿದೆ. ದೆಹಲಿ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ತ್ರಿಪುರ, ಜಾರ್ಖಂಡ್, ಗುಜರಾತ್, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ್, ತಮಿಳುನಾಡು, ಒರಿಸ್ಸಾ, ಮಣಿಪುರ, ಮಹಾರಾಷ್ಟ್ರ, ಅಸ್ಸಾಂ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ಕರ್ನಾಟಕ ರಾಜ್ಯಗಳಲ್ಲಿ ಬಿಜೆಪಿಯ ಕೇಂದ್ರ ಸಚಿವರ ಜನ ಆಶೀರ್ವಾದ ಯಾತ್ರೆ ಸಾಗಲಿದೆ. ಜನ ಆಶೀರ್ವಾದ ಯಾತ್ರೆಯ ಪ್ಲ್ಯಾನ್ ಮಾಡುವ ಜವಾಬ್ದಾರಿಯನ್ನು ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳಿಗೆ ನೀಡಲಾಗಿದೆ.

(Jan Ashirwaad Yatra: New ministers in pm modi cabinet to tour all india from august 16)

Published On - 1:43 pm, Sat, 31 July 21

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM