ತುಮಕೂರು, (ಮಾರ್ಚ್ 15): ಕೆಎಸ್ ಈಶ್ವರಪ್ಪ (KS Eshwarappa) ಬೆನ್ನಲ್ಲೇ ಇದೀಗ ಮಾಜಿ ಸಚಿವ ಜೆಸಿ ಮಾಧುಸ್ವಾಮಿ(JC Madhuswamy) ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ(BS Yediyurappa) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತುಮಕೂರು (Tumakuru) ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಮಾಧುಸ್ವಾಮಿ, ಯಡಿಯೂರಪ್ಪ ವಿರುದ್ಧ ಮಾಧುಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಧುಸ್ವಾಮಿ, ಮನೆಯಲ್ಲಿ ಕುಳಿತಿದ್ದವರನ್ನ ಚುನಾವಣೆಗೆ ರೆಡಿ ಆಗಿ ಅಂದ್ರು. ಈಗ ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ. ನಂಬಿಸಿ ಕೈಬಿಟ್ಟ ಯಡಿಯೂರಪ್ಪ ಮೇಲೆ ನಮಗೆ ಬೇಸರವಿದೆ ಎಂದು ಹೇಳಿದ್ದಾರೆ.
ಸೋಮಣ್ಣ ಅವಕಾಶವಾದಿ, ಅವರು ಅವಕಾಶ ಕೇಳಿದ್ದಾರೆ. ಸೋಮಣ್ಣ ಮೇಲೆ ನಮಗೇನು ಬೇಸರ ಇಲ್ಲ. ಆದ್ರೆ, ನಂಬಿಸಿ ಕೈಬಿಟ್ಟ ಯಡಿಯೂರಪ್ಪ ಮೇಲೆ ನಮಗೆ ಬೇಸರವಾಗಿದೆ. ಬೆಂಗಳೂರಿನಿಂದ ಎಂಎಲ್ ಸಿಗೆ ತಂದು ನಿಲ್ಲಿಸಿದ್ವಿ. ಅವನ ವಿರುದ್ಧ ಬಸವರಾಜು ಮಾಡಿದ್ರು. ಯಾರ್ಯಾರು ನನಗೆ ಅನ್ಯಾಯ ಮಾಡಿದ್ರು ಎಂದು ಪಕ್ಷಕ್ಕೆ 10 ಪೇಜ್ ಬರೆದುಕೊಟ್ಟ. ಇವತ್ತು ಅವರೇ ದೊಡ್ಡವರಾಗಿದ್ದಾರೆ. ನಾವು ಇವತ್ತು ನಿಷ್ಠಾವಂತವಾಗಿ ದುಡಿದವರೇ ಲೆಕ್ಕಕ್ಕಿಲ್ಲ ಅಂದ್ರೆ ನೋವು ಆಗಲ್ವಾ. ನಾವೇನು ಪಾರ್ಲಿಮೆಂಟ್ ನಲ್ಲಿ ಕೊಡಿ, ವಿಧಾನಸಭೆಯಲ್ಲಿ ಕೊಡಿ ಎಂದು ಕೇಳಿಲ್ಲ. ಗೌರವಯುತವಾಗಿ ವರ್ತಿಸದೇ ಇದ್ದರೆ ಹೇಗೆ? ನೋವು ಬಾದಿಸುತ್ತೆ ಅಲ್ವಾ? ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಯಡಿಯೂರಪ್ಪ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ: ತನಿಖೆ ಹೊಣೆ ಸಿಐಡಿಗೆ
ನಂಬಿದವರೇ ನಮಗೆ ಕೈ ಕೊಡುತ್ತಾರೆ ಎನ್ನುವ ನೋವು. ನಾನು ಬಿಜೆಪಿಗೆ ಹೋಗಬೇಕು ಅಂದ್ರೆ ಯಡಿಯೂರಪ್ಪ ಬಿಟ್ಟು ಬೇರೆ ಕಾರಣ ಇರಲಿಲ್ಲ. ಕೆಜಿಪಿ ಪಾರ್ಟಿ ಮಾಡಿದಾಗ ಯಡಿಯೂರಪ್ಪಗೆ ಶಕ್ತಿ ಕೊಡಬೇಕು ಎಂದು ಕೆಜೆಪಿಗೆ ಹೋದವರು ನಾವು. ಯಡಿಯೂರಪ್ಪ ಬದಲಾದಂಗೆ ಅವರ ಜೊತೆ ಹೋದ್ವಿ ಅದೇ ತಪ್ಪಾ? ನಾವು ಪ್ರಶ್ನೆನೇ ಮಾಡಲಿಲ್ಲ. ಯಾಕೆ ಕೆಜಿಪಿ ಬಿಟ್ಟು ಬಿಜೆಪಿಗೆ ಹೋಗುತ್ತೀರಾ ಎಂದು ಅಂದು ಕೇಳಲಿಲ್ಲ. ಲೀಡರ್ ಒಳ್ಳೆದೋ ಕೆಟ್ಟದೋ ಅವರನ್ನ ಫಾಲೋ ಮಾಡೋಣಾ ಎಂದು ಹೋದ್ವಿ ಎಂದು ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದರು.
ಮನೆಯಲ್ಲಿ ಕುಳಿತಿದ್ದವರನ್ನ ತಯಾರಾಗು ಅಂತ ಹೇಳಿ ಈಗ ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ. ಸೋಮಣ್ಣ ಅವಕಾಶವಾದಿ ಅವರು ಅವಕಾಶ ಕೇಳಿದ್ದಾರೆ. ಅವರ ಮೇಲೆ ನಮಗೇನು ಬೇಸರ ಇಲ್ಲ ನಂಬಿಸಿ ಕೈಬಿಟ್ಟ ಯಡಿಯೂರಪ್ಪನ ಮೇಲೆ ನಮಗೆ ಬೇಸರ. ನಾನು ಸೋಮಣ್ಣ ಮನೆಗೆ ಬರಬೇಡಿ ಎಂದು ಹೇಳುವಷ್ಟು ಕೆಟ್ಟ ಮನುಷ್ಯ ಅಲ್ಲ . ನಾನು ಸೆಟಲ್ ಆಗಿಲ್ಲ, ನನ್ನ ಮನಸ್ಥಿತಿ ಸರಿಯಾಗಿಲ್ಲ. ನೀನು ಈ ಟೈಮ್ ನಲ್ಲಿ ಬರೋದು ಬೇಡ. ನಾಲ್ಕೈದು ದಿನ ಟೈಮ್ ಕೊಡು ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ