ನ 15ರಂದು ಕೇರಳದಲ್ಲಿ ಜೆಡಿಎಸ್​​ ಕಾರ್ಯಕಾರಣಿ ಸಭೆ: ಯಾರು ಹಾಜರಾಗಬೇಡಿ ಎಂದ ಹೆಚ್​ಡಿ ದೇವೇಗೌಡ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 11, 2023 | 8:03 PM

ನವೆಂಬರ್​​ 15ರಂದು ಕೇರಳದಲ್ಲಿ ಜೆಡಿಎಸ್​​ ಕಾರ್ಯಕಾರಣಿ ಸಭೆ ಆಯೋಜಿಸಿದ್ದು, ಸಭೆಯಲ್ಲಿ ಯಾರು ಹಾಜರಾಗದಂತೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರಿಂದ ಪತ್ರ ಬರೆಯಲಾಗಿದೆ. ಕರೆದಿರುವ ಸಭೆ ಅಧಿಕೃತ ಸಭೆ ಅಲ್ಲ, ಯಾರು ಕೂಡ ಹಾಜರಾಗಬಾರದು ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಿಗೆ ಪತ್ರ ಬರೆಯಲಾಗಿದೆ. 

ನ 15ರಂದು ಕೇರಳದಲ್ಲಿ ಜೆಡಿಎಸ್​​ ಕಾರ್ಯಕಾರಣಿ ಸಭೆ: ಯಾರು ಹಾಜರಾಗಬೇಡಿ ಎಂದ ಹೆಚ್​ಡಿ ದೇವೇಗೌಡ
ಹೆಚ್‍ಡಿ ದೇವೇಗೌಡ
Follow us on

ಬೆಂಗಳೂರು, ನವೆಂಬರ್​​​ 11: ನವೆಂಬರ್​​ 15ರಂದು ಕೇರಳದಲ್ಲಿ ಜೆಡಿಎಸ್​​ ಕಾರ್ಯಕಾರಣಿ ಸಭೆ ಆಯೋಜಿಸಿದ್ದು, ಸಭೆಯಲ್ಲಿ ಯಾರು ಹಾಜರಾಗದಂತೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ (HD Deve Gowda) ರಿಂದ ಪತ್ರ ಬರೆಯಲಾಗಿದೆ. JDS ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ ನಾನು ಕರೆದ ಸಭೆಗೆ ಹಾಜರಾಗಬೇಡಿ. ಕರೆದಿರುವ ಸಭೆ ಅಧಿಕೃತ ಸಭೆ ಅಲ್ಲ, ಯಾರು ಕೂಡ ಹಾಜರಾಗಬಾರದು ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಿಗೆ ಪತ್ರ ಬರೆಯಲಾಗಿದೆ.

ಪತ್ರದಲ್ಲಿ ಏನಿದೆ?

JDS ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ ನಾನು ಅವರು 15 ನವೆಂಬರ್ ರಂದು ಬೆಳಿಗ್ಗೆ 10 ಗಂಟೆಗೆ ಕೇರಳ ಆರ್ಟ್ಸ್ ಮತ್ತು ಕ್ರಾಫ್ಟ್ಸ್ ವಿಲೇಜ್, ವೆಲ್ಲರ್, ತಿರುವನಂತಪುರದಲ್ಲಿ ಜನತಾ ದಳ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯನ್ನು ಆಯೋಜಿಸಿದ್ದಾರೆ. ಸಿ.ಕೆ ನಾನು ಅವರು ಕರೆದಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯೂ ಯಾವುದೇ ಅಧಿಕಾರವಿಲ್ಲದೆ ಮತ್ತು ಜೆಡಿಎಸ್​ ಪಕ್ಷದ ಸಂವಿಧಾನದ ಪರಿಚ್ಛೇದದ ಉಲ್ಲಂಘನೆಯಾಗಿದೆ.

ಇದನ್ನೂ ಓದಿ: ಬಿಡದಿಯನ್ನು ಗ್ರೇಟರ್ ಬೆಂಗಳೂರು ಮಾಡುವ ವಿಚಾರ; ಡಿಸಿಎಂ​ ಹೇಳಿಕೆಗೆ ಟಾಂಗ್​ ಕೊಟ್ಟ ಹೆಚ್​ಡಿ ಕುಮಾರಸ್ವಾಮಿ

ಅಂತಹ ಸಭೆ ನಡೆಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅನುಮತಿ ಇಲ್ಲ. ಹೀಗಾಗಿ ಇದೊಂದು ಅನಧಿಕೃತ ಸಭೆ ಆಗಿದೆ. ಆದ್ದರಿಂದ, ಸಿ.ಕೆ ನಾನು ಅವರು ಕರೆದಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಹಾಜರಾಗದಂತೆ ರಾಷ್ಟ್ರೀಯ ಕಾರ್ಯಕಾರಿಣಿಯ ಎಲ್ಲಾ ಸದಸ್ಯರಿಗೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಪತ್ರದ ಮೂಲಕ ಸೂಚಿಸಿದ್ದಾರೆ.

ಕೃಷಿ ಸಚಿವರ ತವರು ಕ್ಷೇತ್ರಕ್ಕೆ ಜೆಡಿಎಸ್‌ ಬರ ಅಧ್ಯಯನ ತಂಡ ಭೇಟಿ

ಮಂಡ್ಯ: ಜಿಲ್ಲೆಯ ನಾಗಮಂಗಲ ತಾ.ಹೊಣಕೆರೆ ಸೇರಿ ಹಲವೆಡೆ ಜೆಡಿಎಸ್‌ ಬರ ಅಧ್ಯಯನ ತಂಡ ಭೇಟಿ ನೀಡಿದೆ. ಜೆಡಿಎಸ್‌‌‌‌‌ ಶಾಸಕರು, ಮಾಜಿ ಶಾಸಕರ ತಂಡದಿಂದ ಬರ ಅಧ್ಯಯನ ಮಾಡಿದ್ದು, ಪ್ರಸ್ತುತ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಸಂಗ್ರಹ ಮಾಡಿದ್ದಾರೆ. ಜೆಡಿಎಸ್‌ ನಿಯೋಗದ ಎದುರು ಸರ್ಕಾರ ವಿರುದ್ಧ ರೈತರ‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ ಒಗ್ಗಟ್ಟು ಪ್ರದರ್ಶನ: ಕುಮಾರಸ್ವಾಮಿ ಸಭೆಗೆ 18 ಶಾಸಕರು ಹಾಜರಿ, ಶರಣಗೌಡ ಗೈರು

ಮಳೆ ಆಗಿಲ್ಲ, ನೀರಿನ ಕೊರತೆ ಇದೆ, ಸರಿಯಾದ ಕರೆಂಟ್ ಸಿಗ್ತಿಲ್ಲ. ಕೃಷಿ ಅಧಿಕಾರಿಗಳು ಯಾರು ರೈತರ ಬಳಿ ಬಂದು ಸಮಸ್ಯೆ ಕೇಳಲ್ಲ. ಮೊದಲು ರೈತರಿಗೆ ಅನುಕೂಲ ಮಾಡಲಿ, ಆಮೇಲೆ ಗ್ಯಾರಂಟಿ ಯೋಜನೆ ಎಂದು ಜೆಡಿಎಸ್‌ ನಾಯಕರ ಬಳಿ ಜಿಲ್ಲೆಯ ರೈತರು ಅಳಲು ತೋಡಿಕೊಂಡಿದ್ದಾರೆ.

ಈ ವೇಳೆ ಶಾಸಕ ಹೆಚ್‌.ಟಿ.ಮಂಜು, ಮಾಜಿ ಸಚಿವ ಸಿಎಸ್ ಪುಟ್ಟರಾಜು, ಜಿಲ್ಲಾಧಿಕಾರಿ ತಮ್ಮಣ್ಣ, ಮಾಜಿ ಶಾಸಕ ಸುರೇಶ್ ಗೌಡ, ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ JDS ಬರ ಅಧ್ಯಯನ ತಂಡದ ಭೇಟಿ ವೇಳೆ ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.