ಯಲ್ಲಾಪುರದಲ್ಲಿ ಬೈಎಲೆಕ್ಷನ್ ನಡೆಯುವುದು ನನ್ನ ರಾಜೀನಾಮೆ ಮೇಲೆ ನಿಂತಿದೆ: ಶಾಸಕ ಶಿವರಾಮ್ ಹೆಬ್ಬಾರ್
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಶಿವರಾಮ್ ಹೆಬ್ಬಾರ್, ಯಲ್ಲಾಪುರದಲ್ಲಿ ಬೈಎಲೆಕ್ಷನ್ ನಡೆಯುವುದು ನನ್ನ ರಾಜೀನಾಮೆ ಮೇಲೆ ನಿಂತಿದೆ ಎಂದು ಹೇಳಿದ್ದಾರೆ. ಆ ಶಕ್ತಿ, ಧೈರ್ಯ ಇದ್ದಾಗ ರಾಜೀನಾಮೆಯಂತಹ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಕಾರವಾರ, ನವೆಂಬರ್ 11: ಯಲ್ಲಾಪುರದಲ್ಲಿ ಬೈಎಲೆಕ್ಷನ್ ನಡೆಯುವುದು ನನ್ನ ರಾಜೀನಾಮೆ ಮೇಲೆ ನಿಂತಿದೆ ಎಂದು ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar) ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆ ಶಕ್ತಿ, ಧೈರ್ಯ ಇದ್ದಾಗ ರಾಜೀನಾಮೆಯಂತಹ ನಿರ್ಧಾರ ಕೈಗೊಳ್ಳುತ್ತೇನೆ. ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲಿಯೂ ಬಹಿರಂಗವಾಗಿ ಹೇಳಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕೆಲ ಪದಾಧಿಕಾರಿಗಳನ್ನು ತೆಗೆದಿದ್ದರು. ಈಗ ವಾಪಸ್ ಅದೇ ಸ್ಥಾನ ನೀಡಲಾಗಿದೆ, ಇದರಿಂದ ಬೇಸರವಾಗಿದೆ ಎಂದು ಹೇಳಿದ್ದಾರೆ.
ಪಕ್ಷದ ತೀರ್ಮಾನವಾಗಿದ್ದರಿಂದ ಪ್ರಶ್ನಿಸುವ ಸ್ಥಾನದಲ್ಲಿ ನಾನಿಲ್ಲ. ಪದಾಧಿಕಾರಿ ಹುದ್ದೆಯಿಂದ ತೆಗೆದಿದ್ದು ಏಕೆ? ಮತ್ತೆ ತೆಗೆದುಕೊಂಡಿದ್ದು ಏಕೆ? ಇದನ್ನು ಯಾರು ಮಾಡಿದ್ದಾರೋ ಅವರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಕ್ಷೇತ್ರದ ಜನತೆ ಹೊರತಾಗಿ ನನ್ನನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಸಜ್ಜಾದ್ರಾ ಶಾಸಕರು? ರಾಜ್ಯ ರಾಜಕಾರಣದಲ್ಲಾಗುತ್ತಿರುವ ಬೆಳವಣಿಗೆ ವಿವರ ಇಲ್ಲಿದೆ
ನಾನು ಲೀಡರ್ ಬೇಸ್ ರಾಜಕಾರಣಿ ಅಲ್ಲ, ಕೇಡರ್ ಬೇಸ್ ರಾಜಕಾರಣಿ. ಜನ ನನ್ನನ್ನು ಕಡೆಗಣಿಸಬಹುದು, ನಾನು ಯಾವ ನಾಯಕರಿಗೂ ಹೆದರುವುದಿಲ್ಲ. ಬರ ಹಿನ್ನೆಲೆಯಲ್ಲಿ ಈ ಬಾರಿ ಕದಂಬೋತ್ಸವ ನಡೆಸುವ ಸಾಧ್ಯತೆ ಕ್ಷೀಣಿಸಿದೆ ಎಂದರು.
ಬರದ ಹಿನ್ನೆಲೆಯಲ್ಲಿ ಉತ್ಸವಾಚರಣೆ ಕಷ್ಟಸಾಧ್ಯವಾಗಿದ್ದು, ಉತ್ಸವ ಮಾಡಬೇಕೇ? ಬೇಡವೇ? ಎಂಬ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಜಿಲ್ಲೆಗೆ ಬರ ಅಧ್ಯಯನ ತಂಡ ಬಂದ ಸಂದರ್ಭದಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮದ ಅಂಗವಾಗಿ ದೆಹಲಿಗೆ ಹೋಗಿದ್ದೆ. ಅಧ್ಯಯನದಿಂದ ರೈತರಿಗೆ ಅನುಕೂಲ ಆಗಲಿ ಎಂಬುದು ನಮ್ಮ ಆಶಯ. ಜತೆಗೆ ರೈತರಿಗೆ ವಿಮೆ ಶೀಘ್ರವಾಗಿ ಜಮಾ ಆಗಲಿ ಎಂಬುದು ನಮ್ಮ ಒತ್ತಾಯ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾದ ಶಿವರಾಮ್ ಹೆಬ್ಬಾರ್, ಎಲ್ಆರ್ ಶಿವರಾಮೇಗೌಡ; ಕುತೂಹಲ ಮೂಡಿಸಿದ ಭೇಟಿ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಶಾಸಕ, ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೆರಲಿದ್ದಾರೆ ಎಂಬ ಚರ್ಚೆ ಕೂಡ ಇತ್ತೀಚೆಗೆ ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿ ಬಂದಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಶಿವರಾಮ್ ಹೆಬ್ಬಾರ್ ತಮ್ಮ ಬೆಂಬಲಿಗರೊಂದಿಗೆ ಮುಂಡಗೋಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ್ದರು. ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರೆ ಆಗುವ ಅನುಕೂಲಗಳ ಬಗ್ಗೆ ಮತ್ತು ಬೆಂಬಲಿಗರ ಅಭಿಪ್ರಾಯದ ಬಗ್ಗೆ ಸಭೆ ನಡೆಸಿದ್ದರು ಎನ್ನಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.