ಪ್ರೇಯಸಿಯ ಕೊಂದು ಪರಾರಿಯಾಗಿದ್ದ ಲವರ್​ ಬಾಯ್​.. ಕಾಫಿ ತೋಟದಲ್ಲಿ ನೇಣಿಗೆ ಶರಣು

ತನ್ನ ಪ್ರಿಯತಮೆಯನ್ನ ಕೊಂದು ಪರಾರಿಯಾಗಿದ್ದ ಯುವಕನೊಬ್ಬ ತಾನೂ ಸಹ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೋಗರವಳ್ಳಿಯಲ್ಲಿ ನಡೆದಿದೆ. ಗ್ರಾಮದ ಸಮೀಪವಿರುವ ಕಾಫಿ ತೋಟದಲ್ಲಿ ಹೇಮಂತ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪ್ರೇಯಸಿಯ ಕೊಂದು ಪರಾರಿಯಾಗಿದ್ದ ಲವರ್​ ಬಾಯ್​.. ಕಾಫಿ ತೋಟದಲ್ಲಿ ನೇಣಿಗೆ ಶರಣು
ಸುಶ್ಮಿತಾ (ಎಡ); ಹೇಮಂತ್​ (ಬಲ)
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Jan 28, 2021 | 6:05 PM

ಹಾಸನ: ತನ್ನ ಪ್ರಿಯತಮೆಯನ್ನ ಕೊಂದು ಪರಾರಿಯಾಗಿದ್ದ ಯುವಕನೊಬ್ಬ ತಾನೂ ಸಹ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೋಗರವಳ್ಳಿಯಲ್ಲಿ ನಡೆದಿದೆ. ಗ್ರಾಮದ ಸಮೀಪವಿರುವ ಕಾಫಿ ತೋಟದಲ್ಲಿ ಹೇಮಂತ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮದುವೆ ಬೇಡ ಎಂದಿದ್ದಕ್ಕೆ ಮರ್ಡರ್​ ಮಾಡೇಬಿಟ್ಟ! ಅಂದ ಹಾಗೆ, ಹೇಮಂತ್​ ತನ್ನ ಪ್ರೇಯಸಿ ಸುಶ್ಮಿತಾಳಿಗೆ ತನ್ನ ವಿವಾಹವಾಗಲು ಕೇಳಿಕೊಂಡಿದ್ದಾನೆ. ಇದಕ್ಕೆ, ಯುವತಿ ಒಪ್ಪದಿದ್ದಾಗ ಸಿಟ್ಟಿಗೆದ್ದ ಹೇಮಂತ,​ ಸುಶ್ಮಿತಾಳನ್ನು ಕೊಲೆಗೈದಿದ್ದಾನೆ. ಬಳಿಕ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ, ಕೆರೆಗೆ ಹಾರಿದ ಹೇಮಂತ್​ನನ್ನು ಹತ್ಯೆಯಾದ ಯುವತಿ ಸೋದರ ರಕ್ಷಿಸಿದ್ದಾರೆ.

ಆದರೆ ಅದು ಹೇಗೋ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಓಡಿಹೋದ ಹೇಮಂತ್​ ಇದೀಗ ನೇಣಿಗೆ ಶರಣಾಗಿದ್ದಾನೆ. ಕಾಫಿ ತೋಟದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮದುವೆಗೆ ಒಪ್ಪದಿದ್ದಕ್ಕೆ ನಡು ರಸ್ತೆಯಲ್ಲೇ ಯುವತಿಯ ಹತ್ಯೆ, ಯುವಕ ಎಸ್ಕೇಪ್‌