ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ: ನ. 2ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಮುಂದಾಗಿದ್ದ RSSಗೆ ಹಿನ್ನಡೆ

Chittapur RSS Route March Row: ಚಿತ್ತಾಪುರ ಆರ್​​ಎಸ್​ಎಸ್​​ ಪಥಸಂಚಲನ ಜಟಾಪಟಿ ಮುಂದುವರೆದಿದೆ. ಶಾಂತಿ ಸಭೆ ಅಶಾಂತಿಯಲ್ಲಿ ಅಂತ್ಯಗೊಂಡಿದ್ದರಿಂದ ಕೋರ್ಟ್ ಅಸಮಾಧಾನಗೊಂಡಿದೆ. ಜಿಲ್ಲಾಡಳಿ ಯಾವುದೇ ಸೂಕ್ತ ನಿರ್ಧಾರ ಕೈಗೊಳ್ಳದಿರುವುದರಿಂದ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ ಮತ್ತೊಂದು ಶಾಂತಿ ಸಭೆಗೆ ಸೂಚಿಸಿದೆ. ಹೀಗಾಗಿ ನವೆಂಬರ್ 2ರಂದು ಚಿತ್ತಾಪುರದಲ್ಲಿ ​ ಪಥಸಂಚಲನ ನಡೆಸಲು ಮುಂದಾಗಿದ್ದ ಆರ್​​ಎಸ್​ಎಸ್ಗೆ ಹಿನ್ನಡೆಯಾಗಿದೆ.

ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ: ನ. 2ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಮುಂದಾಗಿದ್ದ RSSಗೆ ಹಿನ್ನಡೆ
ಕಲಬುರಗಿ ಹೈಕೋರ್ಟ್​ ವಿಭಾಗೀಯ ಪೀಠ
Updated By: ರಮೇಶ್ ಬಿ. ಜವಳಗೇರಾ

Updated on: Oct 30, 2025 | 3:57 PM

ಕಲಬುರಗಿ, (ಅಕ್ಟೋಬರ್ 30): ಇದೇ ನವೆಂಬರ್ 2ರಂದು ಚಿತ್ತಾಪುರದಲ್ಲಿ (Chittapur) ಆರ್​​ಎಸ್​​ಎಸ್ (RSS)  ​​ ಪಥಸಂಚಲನ  ಸಂಬಂಧ ಕೋರ್ಟ್​, ವಿಚಾರಣೆಯನ್ನು ಮತ್ತೆ ಮುಂದೂಡಿದೆ. ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚನಲಕ್ಕೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇಂದು (ಅಕ್ಟೋಬರ್ 30) ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್   ವಿಭಾಗೀಯ ಪೀಠ (Kalaburagi high Court Bench)  ಮತ್ತೊಂದು ಶಾಂತಿ ಸಭೆ ಮಾಡಲು ಸೂಚಿಸಿದೆ. ನವೆಂಬರ್ 5ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿಯೇ ಶಾಂತಿ ಸಭೆ ನಡೆಸಲು ಕೋರ್ಟ್ ಸೂಚಿಸಿ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದೆ. ಹೀಗಾಗಿ ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಮುಂದಾಗಿದ್ದ ಆರ್​​ಎಸ್​ಎಸ್​ಗೆ ಹಿನ್ನಡೆಯಾದಂತಾಗಿದೆ.

ನವೆಂಬರ್ 5ರಂದು ಅರ್ಜಿದಾರರು, ಅವರ ವಕೀಲರೊಂದಿಗೆ ಶಾಂತಿ ಸಭೆ ನಡೆಸಲು ಸೂಚಿಸಲಾಗಿದ್ದು, ಇಂತಹ ಘಟನೆಯಾದಾಗ ಪರಿಹಾರ ಹೇಗಿರಬೇಕೆಂಬುದಕ್ಕೆ ಇದು ಮಾರ್ಗಸೂಚಿಯಾಗಬೇಕು ಎಂದು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್​ ಅವರು ಸರ್ಕಾರ, ಅರ್ಜಿದಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಶಾಂತಿ ಸಭೆಯಲ್ಲಿ ಆರ್‌ಎಸ್‌ಎಸ್‌, ಭೀಮ್‌ ಆರ್ಮಿ ನಾಯಕರ ಜಟಾಪಟಿ, ಕಿತ್ತಾಟ ಹೇಗಿತ್ತು ನೋಡಿ

ವಾದ ಪ್ರತಿವಾದ ವಿವರ ಇಲ್ಲಿದೆ

ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ : ಶಾಂತಿ ಸಭೆಗೆ ರಿಟ್ ಅರ್ಜಿದಾರರೇ ಹಾಜರಾಗಿರಲಿಲ್ಲ . ವಿವಾದವನ್ನು ಶೀಘ್ರ ಮುಗಿಸಲು ಅರ್ಜಿದಾರರೇ ಸಹಕರಿಸುತ್ತಿಲ್ಲ. ಅರ್ಜಿದಾರರ ಬದಲಿಗೆ ಬೇರೆ ವ್ಯಕ್ತಿಗಳು ಹಾಜರಾಗಿದ್ದರೆ.

RSS ಪರ ವಕೀಲ ಅರುಣ್ ಶ್ಯಾಮ್: ಅರ್ಜಿದಾರರ ಮನೆಯಲ್ಲಿ ಸಾವು ಸಂಭವಿಸಿದ್ದರಿಂದ ಅವರು ಬಂದಿರಲಿಲ್ಲ.

ಹೈಕೋರ್ಟ್​: ಅರ್ಜಿದಾರರೇ ಶಾಂತಿಸಭೆಗೆ ಹಾಜರಾಗದ್ದಕ್ಕೆ ಕೋರ್ಟ್ ಅಸಮಾಧಾನಗೊಂಡಿದ್ದು, ಅರ್ಜಿದಾರರು ಅಥವಾ ಅವರ ವಕೀಲರು ಸಭೆಗೆ ಹಾಜರಾಗಬಹುದಿತ್ತು. ನೀವು ಅರ್ಹತೆ ಮೇಲೆ ವಾದ ಮಂಡಿಸಿ ವಿಚಾರಣೆ ನಡೆಸೋಣ. ಯಾರಿಗಿ ವಿಚಾರಣೆ ಗೊತ್ತಿರುತ್ತದೋ ಅವರೇ ಶಾಂತಿಸಭೆಗೆ ಹಾಜರಾಗಬೇಕಿತ್ತು. ನಾವು ಹೇಳಿದ್ದಕ್ಕೂ ಒಂದು ಕಾರಣವಿರುತ್ತದೆಂದು ತಿಳಿಯಬೇಕಿತ್ತು.

ಇದನ್ನೂ ಓದಿ: ಚಿತ್ತಾಪುರದಲ್ಲಿ RSS ಇತರೆ ಸಂಘಟನೆಗಳಿಂದ ವಾಗ್ವಾದ: ಅರ್ಧಕ್ಕೆ ನಿಂತೇ ಹೋಯ್ತು ಶಾಂತಿ ಸಭೆ

ಅರುಣ್ ಶ್ಯಾಮ್: ರಿಟ್ ಅರ್ಜಿದಾರರು ಶಾಂತಿಸಭೆಗೆ ಹೋಗದ್ದಕ್ಕೆ ಸಹ ಒಂದು ಕಾರಣವಿತ್ತು. ಅರ್ಜಿದಾರರ ಪರ ವಕೀಲರಿಗೆ ಆಹ್ವಾನವಿರಲಿಲ್ಲ. ಮತ್ತೊಂದು ಸಬೆ ನಡೆಸಿದರೆ ಹಾಜರಾಗುತ್ತೇವೆ.

ಶಶಿಕಿರಣ್ ಶೆಟ್ಟಿ: ನವೆಂಬರ್ 5ರಂದು ಬೆಂಗಳೂರಿನಲ್ಲೇ ಸಭೆ ನಡೆಸಲು ಸಿದ್ಧ. ಸಮಸ್ಯೆ ಬಗೆಹರಿಸುವುದಷ್ಟೇ ನಮ್ಮ ಉದ್ದೇಶವೆಂದ ಎಜಿ.

ಎರಡೂ ಕಡೆಯಿಂದ ವಾದ ಪ್ರತಿವಾದ ಆಲಿಸಿದ ಕೋರ್ಟ್, ಅಂತಿಮವಾಗಿ ನವೆಂಬರ್ 5ರಂದು ಮತ್ತೊಂದು ಶಾಂತಿ ನಡೆಸಲು ಸೂಚಿಸಿ ಮುಂದಿನ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದೆ. ಇದರೊಂದಿಗೆ ಇದೇ ನವೆಂಬರ್ 2ರ  ಚಿತ್ತಾಪುರದಲ್ಲಿ ಆರ್​ಎಸ್​ಎಸ್​ ಪಥಸಂಚಲನಕ್ಕೆ ಬ್ರೇಕ್ ಬಿದ್ದಿದ್ದು, ನವೆಂಬರ್ 5ರ ಶಾಂತಿ ಸಭೆ ಆಧರಿಸಿ ಕೋರ್ಟ್​ ತನ್ನ ತೀರ್ಪು ನೀಡಲಿದೆ.

ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿಸುವಂತೆ ಅರ್ಜಿ

ಕಾನೂನು ಸುವ್ಯವಸ್ಥೆ ನೆಪವೊಡ್ಡಿ ಅನುಮತಿಗೆ ಸರ್ಕಾರ ತಕರಾರು ಹಿನ್ನೆಲೆಯಲ್ಲಿ ರಿಟ್ ಅರ್ಜಿದಾರ ಅಶೋಕ್ ಪಾಟೀಲ್ ಅವರು ಮಧ್ಯಂತರ ಅರ್ಜಿಯೊಂದನ್ನು ಸಲ್ಲಿಸಿದ್ದು, ಕೇಂದ್ರ ಸರ್ಕಾರವನ್ನೂ ಪ್ರತಿವಾದಿಯನ್ನಾಗಿಸುವಂತೆ ಮನವಿ ಮಾಡಿದ್ದಾರೆ. 500ಕ್ಕೂ ಹೆಚ್ಚು ಪಥಸಂಚಲನ ನಡೆಸಿದರೂ ಎಲ್ಲೂ ಸಮಸ್ಯೆ ಆಗಿಲ್ಲ. ಕೆಲ ಸಂಘಟನೆಗಳನ್ನು ಸ್ಥಳೀಯ ರಾಜಕಾರಣಿ ಎತ್ತಿಕಟ್ಟುತ್ತಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆಂದು ಸರ್ಕಾರ ತಪ್ಪು ಮಾಹಿತಿ ನೀಡುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರವನ್ನೂ ಪ್ರತಿವಾದಿಯನ್ನಾಗಿಸಲು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Published On - 3:01 pm, Thu, 30 October 25