ಆನೇಕಲ್: ಬರ್ತ್ಡೇ ಪಾರ್ಟಿ ಕೊಲೆಯಲ್ಲಿ ಅಂತ್ಯ; ಸ್ನೇಹಿತರಿಂದಲೇ ಬರ್ತ್ ಡೇ ಬಾಯ್ ಹತ್ಯೆ
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹಾರಗದ್ದೆ ವಡ್ಡರಪಾಳ್ಯದಲ್ಲಿ ನಡೆದ ಬರ್ತ್ಡೇ ಪಾರ್ಟಿಯಲ್ಲಿ ಬಿಲ್ ಕೊಡುವ ವಿಚಾರಕ್ಕೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಸ್ನೇಹಿತರೇ ತಮ್ಮ ಸ್ನೇಹಿತನನ್ನು ಕೊಲೆ ಮಾಡಿದ್ದಾರೆ. ಸದ್ಯ ಜಿಗಣಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಆನೇಕಲ್, ಅಕ್ಟೋಬರ್ 30: ಬರ್ತ್ಡೇ ಪಾರ್ಟಿ (birthday party) ಬಿಲ್ ಕೊಡುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಸ್ನೇಹಿತರಿಂದಲೇ ಬರ್ತ್ಡೇ ಬಾಯ್ ಕೊಲೆಯಾದ (kill) ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹಾರಗದ್ದೆ ವಡ್ಡರಪಾಳ್ಯದಲ್ಲಿ ನಡೆದಿದೆ. ಸಂದೀಪ್(23) ಕೊಲೆಯಾದ ಯುವಕ. ಸ್ನೇಹಿತರಾದ ಸಂತೋಷ್ ಮತ್ತು ಸಾಗರ್ ಬಂಧಿತರು. ಜಿಗಣಿ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.
ನಡೆದದ್ದೇನು?
ಅಕ್ಟೋಬರ್ 16ರಂದು ಸಂದೀಪ್ ಬರ್ತ್ಡೇ ಇತ್ತು. ಪಾರ್ಟಿಗೆಂದು ಸ್ನೇಹಿತರನ್ನು ಬಾರ್ಗೆ ಕರೆದುಕೊಂಡು ಹೋಗಿದ್ದರು. ಪಾರ್ಟಿ ಮುಗಿದ ಬಳಿಕ ಸಂದೀಪ್ ಬಿಲ್ ಕಟ್ಟಿದ್ದರು. ಆದರೆ 2ನೇ ಸಲ ಬಿಲ್ ಕಟ್ಟುವಂತೆ ಸ್ನೇಹಿತರು ಸಂದೀಪ್ಗೆ ಒತ್ತಾಯಿಸಿದ್ದಾರೆ. ಹಣ ಇಲ್ಲ ಎಂದಿದ್ದಕ್ಕೆ ಬಾರ್ ಬಳಿ ಸಂತೋಷ್ ಗಲಾಟೆ ಮಾಡಿದ್ದರು. ಇದರಿಂದ ಬೇಸರಗೊಂಡು ಸಂದೀಪ್ ವಾಪಸ್ ಊರಿಗೆ ಬಂದಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ರೋಡ್ ರೇಜ್ ಕಿರಿಕ್: ಕಾರಿನಿಂದ ಗುದ್ದಿ ಬೈಕ್ ಸವಾರನ ಕೊಲೆ; ದಂಪತಿ ಬಂಧನ
ಅಷ್ಟಕ್ಕೆ ಸುಮ್ಮನಾಗದ ಸಂತೋಷ್ ಹಾಗೂ ಸಾಗರ್ ವಾಲಿಬಾಲ್ ಕೋರ್ಟ್ ಬಳಿ ಕರೆಸಿ ಸಂದೀಪ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ವೇಳೆ ಸಂದೀಪ್ ತಲೆಗೆ ಗಂಭೀರ ಗಾಯವಾಗಿದೆ. ಘಟನೆ ನಡೆದ 3 ದಿನದ ನಂತರ ಸಂದೀಪ್ ಬ್ರೈನ್ನಲ್ಲಿ ಬ್ಲಡ್ ಕ್ಲಾಟ್ ಆಗಿದ್ದು, ಆನಂತರ ಪೋಷಕರು ಆತನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಕೋಮಾದಲ್ಲಿ ಇದ್ದ ಸಂದೀಪ್, 2 ದಿನಗಳ ಹಿಂದೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ತನ್ನ ತಾಯಿಯ ಚಿನ್ನ ಕದ್ದಿದ್ದನ್ನು ಪ್ರಶ್ನಿಸಿದ್ದಕ್ಕೆ ಸ್ನೇಹಿತನ ಹತ್ಯೆ
ತನ್ನ ತಾಯಿಯ ಚಿನ್ನ ಕದ್ದಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರಿದು ಸ್ನೇಹಿತನ ಹತ್ಯೆ ಮಾಡಿರುವಂತಹ ಘಟನೆ ಬೆಂಗಳೂರಿನ ಕೋಣನಕುಂಟೆಯ ಕೃಷ್ಣಪ್ಪ ಲೇಔಟ್ನಲ್ಲಿ ಅಕ್ಟೋಬರ್ 25ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರಾಹುಲ್ನನ್ನು, ಪ್ರೀತಮ್ ಕೊಲೆ ಮಾಡಿದ್ದಾರೆ. ಸದ್ಯ ಆರೋಪಿ ಪ್ರೀತಮ್ನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
10 ದಿನಗಳ ಹಿಂದೆ ಪ್ರೀತಮ್ ತಾಯಿಯ ಚಿನ್ನ ಕಳ್ಳತನವಾಗಿತ್ತು. ಆ ಚಿನ್ನವನ್ನು ಕದ್ದಿದ್ದು ಯಾರು ಅನ್ನೋದು ಗೊಂದಲವಾಗಿತ್ತು. ತಾಯಿ ಚಿನ್ನವನ್ನು ರಾಹುಲ್ ಕದ್ದಿದ್ದಾನೆ ಎನ್ನುತ್ತಿರುವ ಪ್ರೀತಮ್, ಆದರೆ ಪ್ರೀತಮ್ ಚಿನ್ನ ಕದ್ದಿದ್ದಾನೆ ರಾಹುಲ್ ಆರೋಪಿಸುತ್ತಿದ್ದ.
ಇದನ್ನೂ ಓದಿ: ತನ್ನ ತಾಯಿಗೆ ಬೈದಿದ್ದಕ್ಕೆ ವ್ಯಕ್ತಿ ಹತ್ಯೆ: ವಿಲವಿಲ ಒದ್ದಾಡಿ ಪ್ರಾಣಬಿಟ್ಟ ಆಟೋ ಡ್ರೈವರ್
ಕಳೆದ ಶನಿವಾರ ಪ್ರೀತಮ್ ಬ್ಯಾಗ್ನಲ್ಲೇ ರಾಹುಲ್ ಚಿನ್ನ ನೋಡಿದ್ದ. ನಿನ್ನ ಮಗ ಚಿನ್ನ ಕದ್ದಿದ್ದು ಎಂದು ಪ್ರೀತಮ್ ತಾಯಿಗೆ ರಾಹುಲ್ ಹೇಳಿದ್ದ. ಇದರಿಂದ ಕೋಪಗೊಂಡು ಚಾಕುವಿನಿಂದ ಇರಿದು ರಾಹುಲ್ನ ಕೊಲೆ ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



