ಬಿಸಿಲನಾಡು ಎಂದು ಕರೆಸಿಕೊಳ್ಳುತ್ತಿದ್ದ ಕಲಬುರಗಿ ಇದೀಗ ಮಲೆನಾಡಿನಂತೆ ಕಂಗೊಳಿಸುತ್ತಿದೆ!

ಕಲಬುರಗಿ ಜಿಲ್ಲೆಯಲ್ಲಿ ಕೂಡಾ ಹಸಿರ ಸಿರಿ ಇದೆ. ಪುಟ್ಟ ಪುಟ್ಟ ಜಲಪಾತಗಳಿವೆ. ಅನೇಕ ಕಾಡು ಪ್ರಾಣಿಗಳಿವೆ. ಹಸಿರ ಚೆಲುವನ್ನು ನೋಡುವುದೇ ಕಣ್ಣಿಗೆ ಹಬ್ಬ. ಮನಸಿಗೆ ಆನಂದ. ಹೀಗಾಗಿ ನಮಗೆ ಮಡಿಕೇರಿ, ಮಲೆನಾಡಿಗಿಂತ ನಮ್ಮೂರ ಮಲೆನಾಡೆ ಚಂದ ಅಂತಾರೆ ಕಲಬುರಗಿ ಜಿಲ್ಲೆಯ ಜನರು.

ಬಿಸಿಲನಾಡು ಎಂದು ಕರೆಸಿಕೊಳ್ಳುತ್ತಿದ್ದ ಕಲಬುರಗಿ ಇದೀಗ ಮಲೆನಾಡಿನಂತೆ ಕಂಗೊಳಿಸುತ್ತಿದೆ!
ಹಸಿರಿನಿಂದ ಕಂಗೊಳಿಸುತ್ತಿರುವ ಕಲಬುರಗಿ
Follow us
TV9 Web
| Updated By: ganapathi bhat

Updated on: Jul 12, 2021 | 7:16 PM

ಕಲಬುರಗಿ: ಬಿಸಿಲನಾಡು ಕಲಬುರಗಿ ಇದೀಗ ಅಕ್ಷರಶ ಮಲೆನಾಡಿನಂತೆ ಬದಲಾಗಿದೆ. ಸೂರ್ಯ ಕಾಣದಂತೆ ಎಲ್ಲಡೆ ಆವರಿಸಿರುವ ಮೋಡಗಳು. ನಿರಂತರವಾಗಿ ಸುರಿಯುತ್ತಿರುವ ಮಳೆ. ಮತ್ತೊಂದಡೆ ಜಿಲ್ಲೆಯಲ್ಲಿ ಬೆಳದಿರುವ ಹಸಿರ ಸಿರಿ ಜಿಲ್ಲೆಯ ಜನರಿಗೆ ಅಕ್ಷರಶ ಮಲೆನಾಡಿನ ಅನೂಭೂತಿಯನ್ನು ನೀಡುತ್ತಿದೆ. ಕಲಬುರಗಿ ಅಂದಾಕ್ಷಣ ತಟ್ಟನೆ ನೆನಪು ಆಗುತ್ತಿದ್ದುದು ಬಿಸಿಲು, ಬಿಸಿಲನಾಡು ಎಂದು. ಕಲಬುರಗಿ ನೀರು, ನೆರಳಿಲ್ಲದ ಊರು ಎಂದು ಹೆಚ್ಚಿನ ಜನರು ಅಂದುಕೊಂಡು, ಆ ಕಡೆಗೆ ಹೊರಡಲು ಹಿಂದೇಟು ಹಾಕುವುದು ಇದೆ. ಅದು ನಿಜವೂ ಹೌದು. ರಾಜ್ಯದಲ್ಲಿ ಅತಿ ಹೆಚ್ಚು ಬಿಸಿಲು ದಾಖಲಾಗುವ ಜಿಲ್ಲೆ ಕಲಬುರಗಿಯೇ ಆಗಿದೆ. ಆದರೆ, ಇದೇ ಜಿಲ್ಲೆ ಇದೀಗ ಮಲೆನಾಡಿನಂತೆ ಕಂಗೊಳಿಸುತ್ತಲೂ ಇದೆ.

ಕಲಬುರಗಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಹೆಚ್ಚಿನ ಮಳೆಯಾಗುತ್ತಿದೆ. ಅದರಲ್ಲೂ ಕಳೆದ ಜುಲೈ ಎಂಟರಿಂದ ಜಿಲ್ಲೆಯ ವಾತಾವರಣವೇ ಬದಲಾಗಿ ಹೋಗಿದೆ. ಮೊದಲು, ಮುಂಜಾನೆಯಾದರೆ ಸಾಕು, ಸೂರ್ಯನ ಕಿರಣಗಳು ನೆತ್ತಿ ಸುಡುತಿದ್ದವು. ಆದರೆ ಇದೀಗ ಮೋಡ ಕವಿದ ವಾತಾವರಣದಿಂದ ಕಳೆದ ಅನೇಕ ದಿನಗಳಿಂದ ಜಿಲ್ಲೆಯ ಜನರಿಗೆ ಸೂರ್ಯನ ದರ್ಶನವೇ ಆಗಿಲ್ಲ.

ಒಂದಡೆ ಮೋಡ ಕವಿದ ವಾತಾವರಣ ಮತ್ತೊಂದೆಡೆ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ. ಬಿಸಿಲುನಾಡಿನ ಜನರಿಗೆ ವಿಶಿಷ್ಟ ಅನುಭವ ನೀಡುತ್ತಿವೆ. ಅನೇಕರು ಮಳೆಗಾಲದಲ್ಲಿ ಮಳೆಯ ಮಜಾ ಸವಿಯಲು ಮಲೆನಾಡಿಗೆ ಹೋಗುತ್ತಿದ್ದರು. ಆದರೆ ಇದೀಗ ಜಿಲ್ಲೆಯಲ್ಲಿಯೇ ಮಲೆನಾಡಿನ ಅನುಭವ ಜನರಿಗೆ ಆಗುತ್ತಿದೆ. ಹೀಗಾಗಿ ಹೆಚ್ಚಿನ ಜನರು ಮಳೆಯ ಆನಂದವನ್ನು ಸವಿಯುತ್ತಿದ್ದಾರೆ. ಒಂದೆಡೆ ಜಿಲ್ಲೆಯಲ್ಲಿ ಮಳೆಯಿಂದಾಗಿ ಮಲೆನಾಡಾದರೆ ಮತ್ತೊಂದಡೆ ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶ ಇದೀಗ ಹಸಿರ ಸೀರೆಯನ್ನುಟ್ಟು ಕಂಗೊಳಿಸುತ್ತಿದ್ದು, ಮನಸಿಗೆ ಮುದ ನೀಡುತ್ತಿದೆ.

ಕಲಬುರಗಿ ಜಿಲ್ಲೆಯಲ್ಲಿ ಕೂಡಾ ಹಸಿರ ಸಿರಿ ಇದೆ. ಪುಟ್ಟ ಪುಟ್ಟ ಜಲಪಾತಗಳಿವೆ. ಅನೇಕ ಕಾಡು ಪ್ರಾಣಿಗಳಿವೆ. ಹಸಿರ ಚೆಲುವನ್ನು ನೋಡುವುದೇ ಕಣ್ಣಿಗೆ ಹಬ್ಬ. ಮನಸಿಗೆ ಆನಂದ. ಹೀಗಾಗಿ ನಮಗೆ ಮಡಿಕೇರಿ, ಮಲೆನಾಡಿಗಿಂತ ನಮ್ಮೂರ ಮಲೆನಾಡೆ ಚಂದ ಅಂತಾರೆ ಕಲಬುರಗಿ ಜಿಲ್ಲೆಯ ಜನರು.

Kalaburagi Water Body River

ಬಿಸಿಲನಾಡಿನಲ್ಲೂ ಹಸಿರು- ನೀರಿನ ತಂಪು

ಅಷ್ಟಕ್ಕೂ ಬಿಸಿಲನಾಡು ಕಲಬುರಗಿ ಜಿಲ್ಲೆಯಲ್ಲಿ ಮಲೆನಾಡಿನಂತೆ ಕಂಗೊಳಿಸುವ ಸೊಬಗು ಇರುವುದು ಚಿಂಚೋಳಿ ತಾಲೂಕಿನಲ್ಲಿ. ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಣ ಅರಣ್ಯ ಪ್ರದೇಶ, ಜಿಲ್ಲೆಯಲ್ಲಿರುವ ಹಸಿರ ಸಿರಿಯಾಗಿದೆ. ಚಿಂಚೋಳಿಯ ಕುಂಚಾವರಂ ಅರಣ್ಯ ಪ್ರದೇಶ ಬರೋಬ್ಬರಿ ಹದಿನಾಲ್ಕು ಸಾವಿರದ ಒಂಬೈನೂರಾ ಐವತ್ತೆಂಟು ಹೆಕ್ಟರ್ ಪ್ರದೇಶದ ವ್ಯಾಪ್ತಿಯಲ್ಲಿ ಇದೆ. ಇದನ್ನು 2011 ರಲ್ಲಿ ಸಂರಕ್ಷಿತ ವನ್ಯಜೀವಿಧಾಮ ಅಂತ ಕೂಡಾ ಘೋಷಿಸಲಾಗಿದೆ.

Kalaburagi Water Body

ಚಿಂಚೋಳಿ ಸೊಬಗು

ಬೇಸಿಗೆಯಲ್ಲಿ ಬೋಳಾಗಿ ಕಾಣುವ ಕುಂಚಾವರಂ ಅರಣ್ಯ, ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಸಮುದ್ರದಲ್ಲಿನ ಚಿಪ್ಪು ಅರಳಿದಂತೆ ಹಸಿರ ಸಿರಿಯನ್ನು ಹೊತ್ತು ಅರಳುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಮಳೆ ಕೂಡಾ ಉತ್ತಮವಾಗಿ ಆಗುತ್ತಿದ್ದು, ಜಿಲ್ಲೆಯ ಮಳೆಗೆ ಕುಂಚಾವರಂ ಅರಣ್ಯ ಪ್ರದೇಶ ಇದೀಗ ಅಕ್ಷರಶ ಮಲೆನಾಡಿನಂತೆ ಕಾಣುತ್ತಿದೆ.

ವರದಿ: ಸಂಜಯ್ ಚಿಕ್ಕಮಠ

ಇದನ್ನೂ ಓದಿ: ಕಲಬುರಗಿ: ಅಕ್ರಮ ಸಾಗಾಟಕ್ಕೆ ಸಂಗ್ರಹಿಸಿಟ್ಟಿದ್ದ ಅಂಗನವಾಡಿಯ ಆಹಾರ ಧಾನ್ಯ ತೋಟದ ಮನೆಯಲ್ಲಿ ಪತ್ತೆ

World Environment Day 2021: ಹೆಣ್ಣು ಮಗು ಹುಟ್ಟಿದರೆ 111 ಗಿಡ ನೆಡುವ ಗ್ರಾಮ, ಇದು ಪಿಪ್ಲಾಂತ್ರಿಯ ಹಸಿರು ಕ್ರಾಂತಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ